ಸಿರಿಗೇರಿ : ಸಂಭ್ರಮದ ವೀರಭದ್ರೇಶ್ವರ ಜಯಂತೋತ್ಸವ
ಸಿರಿಗೇರಿ, 15 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್: ಮನುಕುಲಕ್ಕೆ ಸತ್ಯ ಶುದ್ಧ ಸನ್ನೆಡೆತೆಯ ಸಾತ್ವಿಕ ಸಂಸಾರ ಅರುಹಿದ ನೈತಿಕ ಶಕ್ತಿಯಾದ ಶ್ರೀ ವೀರಭದ್ರ ದೇವರು ನಮ್ಮ ಸಂಸ್ಕೃತಿಯ ವಿಶಿಷ್ಟ ಶಕ್ತಿ ದೈವಶಕ್ತಿ ಮಹಾ ಅವತಾರವಾಗಿದ್ದಾರೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಕಾರ್ಯಕಾರಿ ಸಮಿತಿ
ಸಿರಿಗೇರಿ :  ಸಂಭ್ರಮದ ವೀರಭದ್ರೇಶ್ವರ ಜಯಂತೋತ್ಸವ


ಸಿರಿಗೇರಿ, 15 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್: ಮನುಕುಲಕ್ಕೆ ಸತ್ಯ ಶುದ್ಧ ಸನ್ನೆಡೆತೆಯ ಸಾತ್ವಿಕ ಸಂಸಾರ ಅರುಹಿದ ನೈತಿಕ ಶಕ್ತಿಯಾದ ಶ್ರೀ ವೀರಭದ್ರ ದೇವರು ನಮ್ಮ ಸಂಸ್ಕೃತಿಯ ವಿಶಿಷ್ಟ ಶಕ್ತಿ ದೈವಶಕ್ತಿ ಮಹಾ ಅವತಾರವಾಗಿದ್ದಾರೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಎಸ್ಎಂ ನಾಗರಾಜಸ್ವಾಮಿ ಹೇಳಿದರು.

ಸಿರುಗುಪ್ಪ ತಾಲೂಕಿನ ಸಿರಿಗೇರಿ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದಲ್ಲಿ ವೀರಭದ್ರೇಶ್ವರ ಕಮಿಟಿ ವತಿಯಿಂದ

ಹಮ್ಮಿಕೊಂಡಿದ್ದ ವೀರಭದ್ರೇಶ್ವರ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿ, ಪ್ರತಿಯೊಂದು ದೇವಾಲಯದಲ್ಲಿ ಮನೆ ಮನೆಗಳಲ್ಲಿಯೂ ಸಹ ಇಂದು ಶ್ರದ್ಧಾ ಭಕ್ತಿಯಿಂದ ಮೊದಲನೇ ಮಂಗಳವಾರ ಭಾದ್ರಪದ ಮಾಸ ದಿನದಂದು ಭಕ್ತಿಯಿಂದ ಪ್ರಣತಿ ಹಚ್ಚಿ ಪೂಜೆಯನ್ನು ಸಲ್ಲಿಸಿ ನಾಡಿನ ವಿವಿಧ ದೇವಾಲಯಗಳಲ್ಲಿ ವೀರಭದ್ರ ದೇವರ ಜಯಂತೋತ್ಸವವನ್ನು ವೀರಭದ್ರ ದೇವರ ಭಕ್ತ ಗಣ ಆಚರಿಸುವುದು ವಾಡಿಕೆಯಾಗಿದೆ, ಸಂಸ್ಕೃತಿಯಲ್ಲಿ ಶಿವನ ಸಾಕ್ಷಾತ್ ಅಂಶವಾದ ಶ್ರೀ ವೀರಭದ್ರೇಶ್ವರ ಸಂಭ್ರಮದಿಂದ ಆಚರಿಸುವುದರೊಂದಿಗೆ ಪ್ರತಿಯೊಬ್ಬರು ವಿಭೂತಿ ಮತ್ತು ಇಷ್ಟಲಿಂಗ ಧರಿಸಿಕೊಂಡು ಇಡೀ ಮಾನವ ಜನ್ಮಕ್ಕೆ ಜಯ ಸಿಗುವಂತೆ ಮಾಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಪುರೋಹಿತರಾದ ಕೆಎಂ ಗಂಗಾಧರಯ್ಯ ಸ್ವಾಮಿ, ಎಚ್ ಎ0 ಕೊಟ್ರೇಶ ಸ್ವಾಮಿ, ವೀರಭದ್ರ ದೇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪ ಅರ್ಪಿಸಿ ಭಕ್ತಿಯನ್ನು ಮೆರೆದರು.

ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯ ಮುಖಂಡರಾದ ಬಿ. ಅಮರೇಶ ಗೌಡ, ಜೆ. ಮಲ್ಲಿಕಾರ್ಜುನಗೌಡ, ಗೋಡೆ ಚಂದ್ರಶೇಖರಗೌಡ, ಆರ್. ನಾಗರಾಜ ಗೌಡ, ಷಣ್ಮುಖಪ್ಪಗೌಡ, ವಿರೂಪಾಕ್ಷಿ ಗೌಡ, ಎಸ್. ಎಂ ಅಡಿವಯ್ಯ ಸ್ವಾಮಿ, ಮರಿ ಸಿದ್ದಯ್ಯ ಸ್ವಾಮಿ, ದರೂರು ಬಸವರಾಜ, ಕೆಎಂ ಶಿವಪ್ಪ, ದರೂರು ಚೆನ್ನಪ್ಪ, ತೇಜಮೂರ್ತಿ,ವಿ. ಹನುಮೇಶ್, ಗೋಡೆ ಭೀಮನಗೌಡ, ಬಸರಗೋಡು ಸೋಮಶೇಖರಪ್ಪ, ಕೆಎಂ ವಿರೇಶಯ್ಯ ಸ್ವಾಮಿ, ವೀರೇಂದ್ರ ಕುಮಾರ್, ಹೂಗಾರ್ ನಾಗಪ್ಪ, ದೊಡ್ಡನಗೌಡ, ಬುಜ್ಜಿ, ವಿಜಯಕುಮಾರ್ ಗೌಡ, ಎರಿಸ್ವಾಮಿ, ಹಾಗೂ ಶ್ರೀ ವೀರಭದ್ರೇಶ್ವರ ಕಮಿಟಿ, ಭಜನೆ ಮಂಡಳಿ, ಗಣೇಶ ಮಂಡಳಿ, ಯುವಕ ವೃಂದ, ಮಹಿಳಾ ವೃಂದ, ಸಕಲ ಸದ್ಭಕ್ತರು ಪಾಲ್ಗೊಂಡು ಜಯಂತಿ ಆಚರಿಸಿದರು.

ಕಾರ್ಯಕ್ರಮದಲ್ಲಿ ಜಂಗಮ ಮೂರ್ತಿಗಳಿಗೆ ಹಾಗೂ ಸಕಲ ಭಕ್ತಾದಿಗಳಿಗೆ ಮಹಾಪ್ರಸಾದವನ್ನು ವಿತರಿಸಲಾಯಿತು ಎಂದು ದೇವಸ್ಥಾನದ ಸಮಿತಿಯಿಂದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande