ಕರ್ನಾಟಕದ ಪರಿಚಯದ ಕಿರುಹೊತ್ತಿಗೆ ದಕ್ಷಿಣ ಆಫ್ರಿಕಾ ಸಂಸತ್ ಸ್ಪೀಕರ್ಗೆ ಸಮರ್ಪಣೆ
A Brochure on Karnataka’
69th-Commonwealth-Parliamentary-Conference-South-Africa-Speaker-presented-A-Brochure-on-Karnataka


ಬೆಂಗಳೂರು, 15 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್:

69ನೇ ಕಾಮನ್‌ವೆಲ್ತ್‌ ಸಂಸದೀಯ ಸಮ್ಮೇಳನದ ಅಂಗವಾಗಿ ಕರ್ನಾಟಕದ ಸಂಸದೀಯ ನಿಯೋಗವು ದಕ್ಷಿಣ ಆಫ್ರಿಕಾ ಸಂಸತ್ತಿನ ಸ್ಪೀಕರ್‌ಗೆ ಕರ್ನಾಟಕದ ಕುರಿತ ಕಿರುಹೊತ್ತಿಗೆಯನ್ನು ಸಮರ್ಪಿಸಿದೆ.

ಕೇಪ್‌ಟೌನ್‌ನಲ್ಲಿ ನಡೆಯುತ್ತಿರುವ 69ನೇ ಕಾಮನ್‌ವೆಲ್ತ್‌ ಸಂಸದೀಯ ಸಮ್ಮೇಳನಕ್ಕೆ ದಕ್ಷಿಣ ಆಫ್ರಿಕಾ ಸಂಸತ್ತು ಆತಿಥ್ಯ ವಹಿಸಿದ್ದು, ಸೆ.13ರಿಂದ 18ರವರೆಗೆ ನಡೆಯುತ್ತಿರುವ ಸಮ್ಮೇಳನದಲ್ಲಿ ಕಾಮನ್‌ವೆಲ್ತ್‌ ರಾಷ್ಟ್ರಗಳ ಸಂಸದರು ಹಾಗೂ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ.

ಈ ಸಂದರ್ಭದಲ್ಲಿ ಕರ್ನಾಟಕದ ಇತಿಹಾಸ, ಸಂಸ್ಕೃತಿ, ಪರಂಪರೆ, ಪ್ರವಾಸೋದ್ಯಮ, ಕೈಗಾರಿಕೆ ಹಾಗೂ ರಾಜ್ಯದ ಅಭಿವೃದ್ಧಿ ಸಾಧನೆಗಳನ್ನು ಪರಿಚಯಿಸುವ ಕಿರುಹೊತ್ತಿಗೆಯನ್ನು ದಕ್ಷಿಣ ಆಫ್ರಿಕಾ ಸಂಸತ್ತಿನ ಸ್ಪೀಕರ್‌ಗೆ ನೀಡಲಾಯಿತು.

ಕರ್ನಾಟಕದ ವೈವಿಧ್ಯಮಯ ಸಂಸ್ಕೃತಿ, ಪರಂಪರೆ ಹಾಗೂ ಅಭಿವೃದ್ಧಿಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸುವುದು ಕಿರುಹೊತ್ತಿಗೆಯ ಉದ್ದೇಶವಾಗಿದೆ. ಕಾಮನ್‌ವೆಲ್ತ್‌ ರಾಷ್ಟ್ರಗಳ ನಡುವಿನ ಸಂಸದೀಯ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿವೆ ಎಂದು ಈ ಸಂದರ್ಭದಲ್ಲಿ ತಿಳಿಸಲಾಯಿತು.

69ನೇ ಸಮ್ಮೇಳನದಲ್ಲಿ ಪ್ರಜಾಪ್ರಭುತ್ವ, ಕಾನೂನಿನ ಆಳ್ವಿಕೆ ಹಾಗೂ ಸಂಸದೀಯ ಸಂಸ್ಥೆಗಳ ಬಲವರ್ಧನೆ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಚರ್ಚೆಗಳು ನಡೆಯುತ್ತಿವೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande