ಆರತಿ ತಟ್ಟೆಗೆ ಹಣ ಬೇಡ, ಬಡವರಿಗೆ ಸಹಾಯ ಮಾಡಿ; ಸಚಿವ ವಿಜಯಾನಂದ ಕಾಶಪ್ಪನವರಿಗೆ ಪುತ್ರಿ ಸಕ್ಷಮಾ ಸಲಹೆ
ಬಾಗಲಕೋಟೆ, 05 ಆಗಸ್ಟ್ (ಹಿ.ಸ.) ಆ್ಯಂಕರ್ : ವಿಜಯಾನಂದ ಕಾಶಪ್ಪನವರ ಅವರು ನೂತನ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಬಾಗಲಕೋಟೆಯ ನಿವಾಸಕ್ಕೆ ಭೇಟಿ ನೀಡಿದ ವೇಳೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿತು. ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು, ಮುಖಂಡರು ಹಾಗೂ ಸಾರ್ವಜನಿಕರು ಸಚಿವರನ್ನು ಅಭ
ಕಷೆಪ್ಪನವರ್ಗ


ಬಾಗಲಕೋಟೆ, 05 ಆಗಸ್ಟ್ (ಹಿ.ಸ.)

ಆ್ಯಂಕರ್ : ವಿಜಯಾನಂದ ಕಾಶಪ್ಪನವರ ಅವರು ನೂತನ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಬಾಗಲಕೋಟೆಯ ನಿವಾಸಕ್ಕೆ ಭೇಟಿ ನೀಡಿದ ವೇಳೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿತು. ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು, ಮುಖಂಡರು ಹಾಗೂ ಸಾರ್ವಜನಿಕರು ಸಚಿವರನ್ನು ಅಭಿನಂದಿಸಲು ಆಗಮಿಸಿ ಆತ್ಮೀಯವಾಗಿ ಸ್ವಾಗತಿಸಿದರು.

ಈ ವೇಳೆ ನಡೆದ ಒಂದು ಸರಳ ಆದರೆ ಅರ್ಥಪೂರ್ಣ ಘಟನೆ ಎಲ್ಲರ ಗಮನ ಸೆಳೆಯಿತು. ಸಚಿವ ವಿಜಯಾನಂದ ಕಾಶಪ್ಪನವರ ಮನೆಗೆ ಆಗಮಿಸಿದ ಕೆಲವರು ಸಂಪ್ರದಾಯದಂತೆ ಆರತಿ ಬೆಳಗಿ ಸ್ವಾಗತಿಸಿದರು. ಆರತಿ ತಟ್ಟೆಗೆ ಹಣ ಹಾಕಲು ಸಚಿವರು ಮುಂದಾದಾಗ, ಅವರ ಪುತ್ರಿ ಸಕ್ಷಮಾ ವಿನಯದಿಂದ ಹಣ ಬೇಡ... ಅದರ ಬದಲು ಬಡವರಿಗೆ ಸಹಾಯ ಮಾಡಿ ಎಂದು ಹೇಳಿದ ಮಾತು ಅಲ್ಲಿದ್ದವರ ಮನಸ್ಸನ್ನು ಮುಟ್ಟಿತು.

ಸಣ್ಣ ವಯಸ್ಸಿನಲ್ಲೇ ಸಮಾಜಮುಖಿ ಚಿಂತನೆ ಹಾಗೂ ಮಾನವೀಯ ಮೌಲ್ಯಗಳನ್ನು ಪ್ರತಿಬಿಂಬಿಸಿದ ಸಕ್ಷಮಾ ಅವರ ಈ ಮಾತು ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಯಿತು. ಅಲ್ಲಿದ್ದ ಅನೇಕರು ಬಾಲಕಿಯ ಸಂವೇದನಾಶೀಲತೆ ಮತ್ತು ಸೇವಾ ಮನೋಭಾವವನ್ನು ಮೆಚ್ಚಿ ಪ್ರಶಂಸಿಸಿದರು.

ಸಚಿವರ ನಿವಾಸದಲ್ಲಿ ದಿನವಿಡೀ ಶುಭಾಶಯ ಕೋರುವವರ ಸಂಚಾರ ಮುಂದುವರಿದಿದ್ದು, ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಮುಖಂಡರು ಹಾಗೂ ಸಾರ್ವಜನಿಕರು ಸಚಿವರಿಗೆ ಅಭಿನಂದನೆ ಸಲ್ಲಿಸಿ ಅವರ ಅವಧಿಯಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ವೇಗ ಸಿಗಲಿ ಎಂದು ಹಾರೈಸಿದರು.

ಸಾಮಾನ್ಯವಾಗಿ ಶುಭ ಸಮಾರಂಭಗಳಲ್ಲಿ ಆರತಿ ತಟ್ಟೆಗೆ ಹಣ ಹಾಕುವ ಸಂಪ್ರದಾಯವಿದ್ದರೂ, ಅದೇ ಹಣವನ್ನು ಅಗತ್ಯವಿರುವ ಬಡವರಿಗೆ ನೆರವಿನ ರೂಪದಲ್ಲಿ ನೀಡಬೇಕು ಎಂಬ ಸಕ್ಷಮಾ ಅವರ ಮನವಿ ಸಾಮಾಜಿಕ ಜಾಲತಾಣಗಳಲ್ಲಿಯೂ ಮೆಚ್ಚುಗೆಗೆ ಪಾತ್ರವಾಗುವಂತ ಸಂದೇಶವಾಗಿದೆ. ಈ ಘಟನೆ ಅಧಿಕಾರ ಮತ್ತು ಸಂಭ್ರಮದ ನಡುವೆಯೂ ಮಾನವೀಯ ಮೌಲ್ಯಗಳಿಗೆ ಆದ್ಯತೆ ನೀಡುವ ಸುಂದರ ಕ್ಷಣವಾಗಿ ಸಾಕ್ಷಿಯಾಯಿತು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande