ಬಳ್ಳಾರಿ : ಸಾರ್ವಜನಿಕ ಕೇಂದ್ರ ಗ್ರಂಥಾಲಯವನ್ನು ರಜೆ ದಿನಗಳಲ್ಲಿ ತೆರೆಯಲು ಮನವಿ
ಬಳ್ಳಾರಿ, 26 ಆಗಸ್ಟ್ (ಹಿ.ಸ.) ಆ್ಯಂಕರ್ : ಬಳ್ಳಾರಿ ಸಾರ್ವಜನಿಕ ಕೇಂದ್ರ ಗ್ರಂಥಾಲಯಕ್ಕೆ ಪ್ರತಿದಿನ ವಿದ್ಯಾರ್ಥಿಗಳು ಮತ್ತು ಹಿರಿಯ ನಾಗರಿಕರು ಸೇರಿದಂತೆ ನೂರಾರು ಜನ ಓದಲು ಬರುತ್ತಿದ್ದು ಗ್ರಂಥಾಲಯವನ್ನು ರಜೆ ದಿನಗಳಲ್ಲಿ ಕೂಡ ತೆರೆಯಬೇಕು ಎಂದು ಎಐಡಿಐಒ ಯುವಜನ ಸಂಘಟನೆಯು ಕೇಂದ್ರ ಗ್ರಂಥಾಲಯ ಮುಖ್ಯ
Request to open Bellary Public Central Library on holidays.


Request to open Bellary Public Central Library on holidays.


ಬಳ್ಳಾರಿ, 26 ಆಗಸ್ಟ್ (ಹಿ.ಸ.)

ಆ್ಯಂಕರ್ : ಬಳ್ಳಾರಿ ಸಾರ್ವಜನಿಕ ಕೇಂದ್ರ ಗ್ರಂಥಾಲಯಕ್ಕೆ ಪ್ರತಿದಿನ ವಿದ್ಯಾರ್ಥಿಗಳು ಮತ್ತು ಹಿರಿಯ ನಾಗರಿಕರು ಸೇರಿದಂತೆ ನೂರಾರು ಜನ ಓದಲು ಬರುತ್ತಿದ್ದು ಗ್ರಂಥಾಲಯವನ್ನು ರಜೆ ದಿನಗಳಲ್ಲಿ ಕೂಡ ತೆರೆಯಬೇಕು ಎಂದು ಎಐಡಿಐಒ ಯುವಜನ ಸಂಘಟನೆಯು ಕೇಂದ್ರ ಗ್ರಂಥಾಲಯ ಮುಖ್ಯ ಗ್ರಂಥಪಾಲಕ ನರಸಣ್ಣ ಹಾಗೂ ಕನ್ನಡ ಸಂಸ್ಕøತಿ ಇಲಾಖೆ ಮುಖ್ಯ ನಿರ್ವಾಹಕ ಅಧಿಕಾರಿ ನಾಗರಾಜ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದ್ದಾರೆ.

ಯುವಜನರ ಹೋರಾಟಗಳ ಪ್ರತಿಫಲವಾಗಿ ಇತ್ತಿಚಿಗೆ ನೇಮಕಾತಿಗಳು ನಡೆಯುತ್ತಿದ್ದು ಅಭ್ಯರ್ಥಿಗಳು ತಯಾರಿಯನ್ನು ನಡೆಸಬೇಕಿದೆ. ಮನೆಗಳಲ್ಲಿ ಓದುವ ವಾತಾವರಣ ಇಲ್ಲದ ಕಾರಣ, ನಗರದ ಗ್ರಂಥಾಲಯಗಳಲ್ಲಿ ಬಂದು ಓದುತ್ತಿರುವ ಉದ್ಯೋಗಾಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಸಾರ್ವಜನಿಕ ಗ್ರಂಥಾಲಯಗಳು ಪ್ರತಿ ಸೋಮವಾರ, ಎರಡನೇ ಮಂಗಳವಾರ, ನಾಲ್ಕನೇ ಶನಿವಾರ ಮತ್ತು ಸರ್ಕಾರಿ ರಜೆಗಳು ಹೀಗೆ ಹಲವಾರು ರಜೆಗಳಿರುವುದರಿಂದ ಉದ್ಯೋಗಾಕಾಂಕ್ಷಿಗಳು ನಿರಂತರ ಓದುವ ಅಭ್ಯಾಸಕ್ಕೆ ಸಮಸ್ಯೆ ಉಂಟಾಗುತ್ತದೆ.

ಹಾಗಾಗಿ ರಜೆ ದಿನಗಳಲ್ಲೂ ಸಾರ್ವಜನಿಕ ಗ್ರಂಥಾಲಯ ತೆರೆದರೆ ಸಹಾಯವಾಗುತ್ತದೆ. ಈ ಕೆಳಗಿನ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಎಐಡಿವೈಓ ಜಿಲ್ಲಾ ಕಾರ್ಯದರ್ಶಿ ಜಗದೀಶ್ ನೇಮಕಲ್, ಸದಸ್ಯರಾದ ಪ್ರಮೋದ್ .ಇ .ಊ ಮತ್ತು ಸಿದ್ದು ಹಾಗೂ ವಿದ್ಯಾರ್ಥಿಗಳಾದ ರಂಗಸ್ವಾಮಿ, ಹನುಮೇಶ, ಯುವರಾಜ್ .ಕೆ, ಶಿವಶಂಕರ, ಮೋಹನ ಇತರರು ಭಾಗವಹಿಸಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande