ಬಸರಕೋಡು ಉಪಕೇಂದ್ರಕ್ಕೆ ಡಾ. ಆರ್. ಅಬ್ದುಲ್ಲಾ ಭೇಟಿ : ಸಾಂಕ್ರಾಮಿಕ ರೋಗ ತಡೆಗೆ ಕ್ರಮ
ಬಳ್ಳಾರಿ, 05 ಆಗಸ್ಟ್ (ಹಿ.ಸ.) ಆ್ಯಂಕರ್ : ಬಳ್ಳಾರಿ ತಾಲೂಕಿನ ಬಸರಕೋಡು ಗ್ರಾಮದಲ್ಲಿ ಕಂಡುಬಂದಿರುವ ಜ್ವರ ಪ್ರಕರಣಗಳ ಹಿನ್ನೆಲೆಯಲ್ಲಿ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ. ಆರ್. ಅಬ್ದುಲ್ಲಾ ಅವರು ಬಸರಕೋಡು ಉಪಕೇಂದ್ರ ಹಾಗೂ ಗ್ರಾಮದ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿ ಪರಿಶೀಲನ
ಬಸರಕೋಡು ಉಪಕೇಂದ್ರಕ್ಕೆ ಡಾ. ಆರ್. ಅಬ್ದುಲ್ಲಾ ಭೇಟಿ : ಸಾಂಕ್ರಾಮಿಕ ರೋಗ ತಡೆಗೆ ಕ್ರಮ


ಬಸರಕೋಡು ಉಪಕೇಂದ್ರಕ್ಕೆ ಡಾ. ಆರ್. ಅಬ್ದುಲ್ಲಾ ಭೇಟಿ : ಸಾಂಕ್ರಾಮಿಕ ರೋಗ ತಡೆಗೆ ಕ್ರಮ


ಬಸರಕೋಡು ಉಪಕೇಂದ್ರಕ್ಕೆ ಡಾ. ಆರ್. ಅಬ್ದುಲ್ಲಾ ಭೇಟಿ : ಸಾಂಕ್ರಾಮಿಕ ರೋಗ ತಡೆಗೆ ಕ್ರಮ


ಬಸರಕೋಡು ಉಪಕೇಂದ್ರಕ್ಕೆ ಡಾ. ಆರ್. ಅಬ್ದುಲ್ಲಾ ಭೇಟಿ : ಸಾಂಕ್ರಾಮಿಕ ರೋಗ ತಡೆಗೆ ಕ್ರಮ


ಬಳ್ಳಾರಿ, 05 ಆಗಸ್ಟ್ (ಹಿ.ಸ.)

ಆ್ಯಂಕರ್ : ಬಳ್ಳಾರಿ ತಾಲೂಕಿನ ಬಸರಕೋಡು ಗ್ರಾಮದಲ್ಲಿ ಕಂಡುಬಂದಿರುವ ಜ್ವರ ಪ್ರಕರಣಗಳ ಹಿನ್ನೆಲೆಯಲ್ಲಿ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ. ಆರ್. ಅಬ್ದುಲ್ಲಾ ಅವರು ಬಸರಕೋಡು ಉಪಕೇಂದ್ರ ಹಾಗೂ ಗ್ರಾಮದ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಭೇಟಿಯ ವೇಳೆ ಜ್ವರದಿಂದ ಬಳಲುತ್ತಿರುವ ರೋಗಿಗಳ ಮನೆಗಳಿಗೆ ತೆರಳಿ ಆರೋಗ್ಯ ವಿಚಾರಿಸಿದ ಅವರು, ಗ್ರಾಮಸ್ಥರು ವಹಿಸಬೇಕಾದ ನೈರ್ಮಲ್ಯ ಹಾಗೂ ಸ್ವಚ್ಛತಾ ಕ್ರಮಗಳ ಕುರಿತು ಅರಿವು ಮೂಡಿಸಿದರು.

*ಒಳಾಂಗಣ ಧೂಮೀಕರಣ:*

ಇಡೀ ಗ್ರಾಮದಲ್ಲಿ ತಕ್ಷಣವೇ ಒಳಾಂಗಣ ಧೂಮೀಕರಣ ಕಾರ್ಯ ಕೈಗೊಳ್ಳಬೇಕು ಎಂದು ಆರೋಗ್ಯ ಸಿಬ್ಬಂದಿಗೆ ಸೂಚಿಸಿದ ಅವರು, ಧೂಮೀಕರಣದ ಸಮಯದಲ್ಲಿ ಸಾರ್ವಜನಿಕರು ಸುರಕ್ಷಿತವಾಗಿ ಮನೆಯಿಂದ ಹೊರಗಿರಬೇಕು ಎಂದು ತಿಳಿಸಿದರು.

*ಕುಡಿಯುವ ನೀರು:*

ಧೂಮೀಕರಣದ ನಂತರ ಒಣ ದಿನ ಅನುಸರಿಸಿ, ಬಳಿಕವಷ್ಟೇ ಸಾರ್ವಜನಿಕರಿಗೆ ನೀರು ಸರಬರಾಜು ಮಾಡಬೇಕು. ನೀರನ್ನು ಕಡ್ಡಾಯವಾಗಿ ಕಾಯಿಸಿ, ಆರಿಸಿ ಕುಡಿಯುವಂತೆ ಮತ್ತು ಈ ಕುರಿತು ಗ್ರಾಮದಲ್ಲಿ ಡಂಗುರ ಸಾರಿಸಿ ಅರಿವು ಮೂಡಿಸುವಂತೆ ನಿರ್ದೇಶ ನೀಡಿದರು.

*ಸಮುದಾಯ ಸಭೆ ಮತ್ತು ಸೊಳ್ಳೆ ನಿಯಂತ್ರಣ:*

ಗ್ರಾಮಸ್ಥರ ಸಮುದಾಯ ಸಭೆ ನಡೆಸಿ, ಕುಡಿಯುವ ಮತ್ತು ಬಳಕೆಯ ನೀರನ್ನು ಮುಚ್ಚಳದಿಂದ ಅಥವಾ ಶುಭ್ರವಾದ ಬಟ್ಟೆಯಿಂದ ಸೊಳ್ಳೆಗಳು ನುಸುಳದಂತೆ ಮುಚ್ಚಿಡಬೇಕು ಎಂದು ಜಾಗೃತಿ ಮೂಡಿಸಿದರು.

*ಆರೋಗ್ಯ ತಪಾಸಣೆ:*

ಜ್ವರದ ಲಕ್ಷಣಗಳು ಕಂಡುಬಂದಲ್ಲಿ ಸಾರ್ವಜನಿಕರು ತಕ್ಷಣ ಉಪಕೇಂದ್ರದ ಆರೋಗ್ಯ ಶಿಬಿರದಲ್ಲಿ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಚಿಕಿತ್ಸೆ ಪಡೆಯುವಂತೆ ಕೋರಿದರು.

*ಆರೋಗ್ಯ ಸುರಕ್ಷತೆಗಾಗಿ ಸಲಹೆಗಳು:*

ಡೆಂಗ್ಯೂ, ಮಲೇರಿಯಾ ಹಾಗೂ ವೈರಲ್ ಜ್ವರಗಳನ್ನು ತಡೆಗಟ್ಟಲು ಮನೆ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದು, ಸೊಳ್ಳೆ ಪರದೆ ಬಳಸುವುದು, ಉದ್ದನೆಯ ತೋಳಿನ ಬಟ್ಟೆ ಧರಿಸುವುದು, ಕೈಗಳನ್ನು ಸೋಪಿನಿಂದ ತೊಳೆಯುವುದು, ಪೌಷ್ಟಿಕ ಆಹಾರ ಹಾಗೂ ಕುದಿಸಿದ ನೀರು ಸೇವಿಸುವುದು ಅಗತ್ಯ ಎಂದು ವೈದ್ಯಾಧಿಕಾರಿಗಳು ತಿಳಿಸಿದರು.

ಮುಖ್ಯವಾಗಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಮನೆ ಸುತ್ತಮುತ್ತ, ಟೈರ್, ಪ್ಲಾಸ್ಟಿಕ್ ಕಪ್, ಹೂ ಕುಂಡಗಳ ಕೆಳಗೆ ಹಾಗೂ ಏರ್ ಕೂಲರ್ಗಳಲ್ಲಿ ನೀರು ನಿಲ್ಲಲು ಬಿಡಬಾರದು. ಸ್ವಚ್ಛ ನೀರಿನಲ್ಲಿ ಡೆಂಗ್ಯೂ ಹರಡುವ ಸೋಂಕಿತ ಸೊಳ್ಳೆಗಳು ಮೊಟ್ಟೆ ಇಡುತ್ತವೆ. ಅವುಗಳ ನಿಯಂತ್ರಣಕ್ಕಾಗಿ ಸೊಳ್ಳೆ ಪರದೆ ಬಳಸಿ, ಮಲಗುವಾಗ ಸೊಳ್ಳೆ ಪರದೆ ಅಥವಾ ಸೊಳ್ಳೆ ನಿವಾರಕಗಳನ್ನು ಬಳಸಬೇಕು ಎಂದು ತಿಳಿಸಿದರು.

ದೇಹವನ್ನು ಪೂರ್ತಿಯಾಗಿ ಮುಚ್ಚುವಂತಹ ಉದ್ದನೆಯ ತೋಳಿನ ಬಟ್ಟೆಗಳನ್ನು ಧರಿಸಬೇಕು. ಹೊರಗಡೆಯಿಂದ ಮನೆಗೆ ಬಂದಾಗ, ಆಹಾರ ಸೇವಿಸುವ ಮೊದಲು ಮತ್ತು ಶೌಚಾಲಯ ಬಳಸಿದ ನಂತರ ಸೋಪಿನಿಂದ ಕನಿಷ್ಠ 20 ಸೆಕೆಂಡುಗಳ ಕಾಲ ಕೈಗಳನ್ನು ಸರಿಯಾಗಿ ತೊಳೆಯಬೇಕು. ಜ್ವರ, ಕೆಮ್ಮು ಅಥವಾ ನೆಗಡಿ ಇರುವವರಿಂದ ಸೂಕ್ತ ಅಂತರ ಕಾಯ್ದುಕೊಳ್ಳುವುದು ಉತ್ತಮ. ಜನಸಂದಣಿ ಇರುವ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವುದು ಒಳ್ಳೆಯದು ಎಂದರು.

ಅಶುಚಿ ಕೈಗಳಿಂದ ಕಣ್ಣು, ಮೂಗು ಮತ್ತು ಬಾಯಿಯನ್ನು ಮುಟ್ಟುವುದನ್ನು ತಡೆಯಿರಿ. ರಸ್ತೆಬದಿಯ ನೊಣ ಮುಸುರಿದ ಹಾಗೂ ಅಶುಚಿತ್ವದಿಂದ ಕೂಡಿದ ಆಹಾರ ಮತ್ತು ತಣ್ಣನೆಯ ಪಾನೀಯಗಳನ್ನು ಸೇವಿಸಬಾರದು. ಜೀವಸತ್ವ ಸಿ ಇರುವ ಹಣ್ಣುಗಳು (ಕಿತ್ತಳೆ, ನೆಲ್ಲಿಕಾಯಿ), ತರಕಾರಿಗಳು, ಸೊಪ್ಪು ಮತ್ತು ಒಣಹಣ್ಣುಗಳನ್ನು ದಿನನಿತ್ಯದ ಆಹಾರದಲ್ಲಿ ಅಳವಡಿಸಿಕೊಳ್ಳಬೇಕು. ಇದರ ಜೊತೆಗೆ ದಿನಕ್ಕೆ ಕನಿಷ್ಠ 8-10 ಲೋಟ ನೀರು ಕುಡಿಯುವ ಮೂಲಕ ದೇಹವನ್ನು ನಿರ್ಜಲೀಕರಣದಿಂದ ಕಾಪಾಡಿಕೊಳ್ಳಬೇಕು. ದಿನಕ್ಕೆ 7-8 ಗಂಟೆಗಳ ಉತ್ತಮ ನಿದ್ರೆ ಹಾಗೂ ಹಗುರವಾದ ವ್ಯಾಯಾಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮನೆ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಸದಾ ಸ್ವಚ್ಛವಾಗಿಟ್ಟುಕೊಳ್ಳಬೇಕು. ಕಸವನ್ನು ಸರಿಯಾಗಿ ವಿಲೇವಾರಿ ಮಾಡಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಮ್ಮ ಕ್ಲಿನಿಕ್ ವೈದ್ಯಾಧಿಕಾರಿಗಳು, ಕೀಟಶಾಸ್ತçಜ್ಞರು, ಜಿಲ್ಲಾ ಡಿ.ವಿ.ಬಿ.ಡಿ.ಸಿ.ಪಿ ಸಲಹೆಗಾರರು, ಮೇಲ್ವಿಚಾರಣ ತಂಡ, ಯರಗುಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande