
ಹುಬ್ಬಳ್ಳಿ, 04 ಆಗಸ್ಟ್ (ಹಿ.ಸ.):
ಆ್ಯಂಕರ್:ದ್ವಿಪಥ ರೈಲು ಮಾರ್ಗ ಕಾಮಗಾರಿಯಿಂದ ಲೊಂಡ–ಕ್ಯಾಸಲ್ ರಾಕ್ ನಡುವೆ ಭಾಗಶಃ ರದ್ದಾಗಿದ್ದ 17333/17334 ಮಿರಜ್–ಕ್ಯಾಸಲ್ ರಾಕ್–ಮಿರಜ್ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಆಗಸ್ಟ್ 15ರಿಂದ ಪೂರ್ಣ ಪ್ರಮಾಣದಲ್ಲಿ ಪುನರಾರಂಭಿಸಲಾಗುತ್ತಿದೆ ಎಂದು ನೈಋತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ ಕಣಮಡಿ ತಿಳಿಸಿದ್ದಾರೆ.
ಈ ಕುರಿತು ಅವರು ಪ್ರಕಟಣೆ ನೀಡಿದ್ದು, 2023ರ ಡಿಸೆಂಬರ್ 12ರಿಂದ 2026ರ ಆಗಸ್ಟ್ 31ರವರೆಗೆ ಲೊಂಡ–ಕ್ಯಾಸಲ್ ರಾಕ್ ನಡುವೆ ಭಾಗಶಃ ರದ್ದುಗೊಂಡಿದ್ದ 17333 ಮಿರಜ್–ಕ್ಯಾಸಲ್ ರಾಕ್ ಎಕ್ಸ್‌ಪ್ರೆಸ್ ರೈಲು ಆಗಸ್ಟ್ 15ರಿಂದ ಮತ್ತೆ ಕ್ಯಾಸಲ್ ರಾಕ್‌ವರೆಗೆ ಸಂಚರಿಸಲಿದೆ ಎಂದು ತಿಳಿಸಿದ್ದಾರೆ.
ಅದೇ ರೀತಿ, 17334 ಕ್ಯಾಸಲ್ ರಾಕ್–ಮಿರಜ್ ಎಕ್ಸ್‌ಪ್ರೆಸ್ ರೈಲು ಸಹ ಆಗಸ್ಟ್ 15ರಿಂದ ಕ್ಯಾಸಲ್ ರಾಕ್‌ನಿಂದಲೇ ತನ್ನ ಪ್ರಯಾಣ ಆರಂಭಿಸಲಿದ್ದು, ಲೊಂಡ–ಕ್ಯಾಸಲ್ ರಾಕ್ ನಡುವಿನ ಭಾಗಶಃ ರದ್ದತಿ ಹಿಂಪಡೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.