ದಲಿತ ಮಹಿಳಾ ಒಕ್ಕೂಟದ ಜಿಲ್ಲಾ ಸಂಚಾಲಕರಾಗಿ ಮಂಜುಳ ನಾಗರಾಜ್ ಆಯ್ಕೆ
ದಲಿತ ಮಹಿಳಾ ಒಕ್ಕೂಟದ ಜಿಲ್ಲಾ ಸಂಚಾಲಕರಾಗಿ ಮಂಜುಳ ನಾಗರಾಜ್ ಆಯ್ಕೆ
ಕೋಲಾರ ಜಿಲ್ಲಾ ದಲಿತ ಮಹಿಳಾ ಒಕ್ಕೂಟದ ಸಂಚಾಲಕರಾಗಿ ಮಂಜುಳ ನಾಗರಾಜ್ ಹಾಗೂ ಪದಾಧಿಕಾರಿಗಳಾಗಿ ಇತರರು ಆಯ್ಕೆಯಾಗಿದ್ದಾರೆ.


ಕೋಲಾರ, 04 ಆಗಷ್ಟ್ (ಹಿ.ಸ):

ಆ್ಯಂಕರ್ : ದಲಿತ ಸಂಘರ್ಷ ಸಮಿತಿ ಅಂಗ ಸಂಸ್ಥೆಯಾದ ದಲಿತ ಮಹಿಳಾ ಒಕ್ಕೂಟದ ಕೋಲಾರ ಜಿಲ್ಲಾ ಶಾಖೆಯ ನೂತನ ಸಂಚಾಲಕರಾಗಿ ಮಂಜುಳ ನಾಗರಾಜ್ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ನಗರದ ಬುದ್ಧ ವಿಹಾರದಲ್ಲಿ ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ದೊಡ್ಡಿ ಮುನಿಯಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಆಗಮಿಸಿದ ಮಹಿಳಾ ಮುಖಂಡರು ಹಾಗೂ ದಸಂಸ ಮುಖಂಡರು ಚರ್ಚಿಸಿದ ಬಳಿಕ ದಲಿತ ಮಹಿಳಾ ಒಕ್ಕೂಟದ ನೂತನ ಸಮಿತಿಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ಜಿಲ್ಲಾ ಸಂಚಾಲಕರಾಗಿ ಮಂಜುಳ ನಾಗರಾಜ್, ಆಂತರಿಕ ಶಿಸ್ತು ಮತ್ತು ಸಂಘಟನಾ ಸಂಚಾಲಕರಾಗಿ ಚಿಕ್ಕವಲಗಮಾದಿ ಲಕ್ಷ್ಮಮ್ಮ, ಪೌರ ಕಾರ್ಮಿಕರ ವಿಭಾಗದ ಸಂಚಾಲಕರಾಗಿ ಕೆಜಿಎಫ್ನ ಯಲ್ಲಮ್ಮ, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ವಿಭಾಗದ ಸಂಚಾಲಕರಾಗಿ ಬಂಗಾರಪೇಟೆಯ ಪ್ರತಿಭಾ, ಕಲಾಮಂಡಳಿ ಸಂಚಾಲಕರಾಗಿ ಕಲ್ಪನಾ ಕೆಜಿಎಫ್, ಖಜಾಂಚಿಯಾಗಿ ಶಿಲ್ಪಾ ಕೋಲಾರ ಆಯ್ಕೆಯಾಗಿದ್ದಾರೆ. ಕಾರ್ಯನಿರ್ವಾಹಕ ಸಮಿತಿ ಸದಸ್ಯರಾಗಿ ಮರಸನಪಲ್ಲಿ ವೆಂಕಟಲಕ್ಷ್ಮಮ್ಮ, ಕೆಜಿಎಫ್ ಗಾಯತ್ರಿ, ಶೀಲಾರಾಣಿ ಕೋಲಾರ, ಜಾಯ್ಸ್ ಬಂಗಾರಪೇಟೆ, ಸೌಮ್ಯ ಕೆಜಿಎಫ್ ಆಯ್ಕೆ ಆಗಿದ್ದಾರೆ.

ಜಿಲ್ಲಾ ಸಂಚಾಲಕರಾಗಿ ಆಯ್ಕೆಯಾದ ಮಂಜುಳ ನಾಗರಾಜ್ ಮಾತನಾಡಿ, ಅವಿರೋಧವಾಗಿ ಆಯ್ಕೆ ಮಾಡಿದ್ದಕ್ಕೆ ಧನ್ಯವಾದಗಳು ಅರ್ಪಿಸಿ, ದಸಂಸ ಮೂಲ ಉದ್ದೇಶಗಳಿಗೆ ಧಕ್ಕೆಯಾಗದಂತೆ ಸಂಘಟನೆಯ ಸಂವಿಧಾನದಂತೆ ಶೋಷಿತ ವರ್ಗಗಳ ಧ್ವನಿಯಾಗಿ ಕೆಲಸ ಮಾಡುತ್ತೇನೆ. ಎಲ್ಲಾ ಹಿರಿಯರ ಮಾರ್ಗದರ್ಶನದಲ್ಲಿ ಸಮಿತಿಯನ್ನು ಮುನ್ನಡೆಸುತ್ತೇನೆ ಎಂದ ಅವರು, ಜಿಲ್ಲೆಯಲ್ಲಿ ಮಹಿಳೆಯರ ಹಕ್ಕುಗಳಿಗೆ ಧ್ವನಿಯಾಗಿ ದಲಿತ ಮಹಿಳಾ ಒಕ್ಕೂಟ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಸಂಚಾಲಕ ಚಲ್ದಿಗಾನಹಳ್ಳಿ ಮುನಿವೆಂಕಟಪ್ಪ, ಸಂಘಟನಾ ಸಂಚಾಲಕ ಹೂವರಸನಹಳ್ಳಿ ರಾಜಪ್ಪ, ವರದೇನಹಳ್ಳಿ ವೆಂಕಟೇಶ್, ಮಾರುತಿ ಪ್ರಸಾದ್, ಬೀರಮಾನಹಳ್ಳಿ ಆಂಜಿನಪ್ಪ, ಬಂದಾರ್ಲಹಳ್ಳಿ ಮುನಿಯಪ್ಪ, ಮಾಲೂರು ಶೇಷಪ್ಪ, ಸರಿತಾ ಮೂಗಪ್ಪ, ಶ್ರೀನಿವಾಸಪುರ ವಾಸು, ಶ್ರೀನಿವಾಸ್, ಮುಳವಾಗಲಪ್ಪ, ತಂಬಾರ್ಲಹಳ್ಳಿ ರಾಮಪ್ಪ, ರಾಮಪ್ರಸನ್ನ, ಸುಬ್ಬರಾಯಪ್ಪ, ಹಿರೇಕರಪನಹಳ್ಳಿ ರಾಮಪ್ಪ, ಸಿದ್ದನಹಳ್ಳಿ ಯಲ್ಲಪ್ಪ, ಮಲ್ಲಸಂದ್ರ ವೆಂಕಟಸ್ವಾಮಿ, ಸೀಪೂರ್ ದೇವರಾಜ್ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಮುಖಂಡರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande