ಪಿಂಚಣಿ ಯೋಜನೆಯ ಆದಾಯ ಮಿತಿಯನ್ನು ಪರಿಷ್ಕರಿಸಲು ಒತ್ತಾಯ
ಪಿಂಚಣಿ ಯೋಜನೆಯ ಆದಾಯ ಮಿತಿಯನ್ನು ಪರಿಷ್ಕರಿಸಲು ಒತ್ತಾಯ
ಶ್ಯಾಗತ್ತೂರು ಡಾ. ನಾರಾಯಣಸ್ವಾಮಿ


ಕೋಲಾರ, 04 ಆಗಸ್ಟ್ (ಹಿ.ಸ):

ಆ್ಯಂಕರ್ : ಸಾಮಾಜಿಕ, ಸುರಕ್ಷತಾ ಯೋಜನೆಯಲ್ಲಿ ಅಸಹಾಯಕರು ಮತ್ತು ಹಿರಿಯ ನಾಗರೀಕರು ಪಿಂಚಣಿ ಪಡೆಯಲು ಕರ್ನಾಟಕ ರಾಜ್ಯ ಸರ್ಕಾರ ವಾರ್ಷಿಕ ೩೨ ಸಾವಿರ ರೂಪಾಯಿ ಆದಾಯ ಮಿತಿಯನ್ನು ನಿಗಧಿಪಡಿಸಿದೆ. ಆದರೆ ಸರ್ಕಾರದ ಮಾನದಂಡ ಅವೈಜ್ಞಾನಿಕವಾಗಿದ್ದು, ಇದರಿಂದಾಗಿ ಸಾವಿರಾರು ಮಂದಿ ಯೋಜನೆಯಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರ ಮಾನದಂಡಗಳನ್ನು ಪರಿಷ್ಕರಿಸುವಂತೆ ಬಿಜೆಪಿ ರೈತಘಟಕದ ಸಂಚಾಲಕ ಶ್ಯಾಗತ್ತೂರು ಡಾ. ನಾರಾಯಣಸ್ವಾಮಿ ಒತ್ತಾಯಿಸಿದ್ದಾರೆ.

ಇತ್ತೀಚ್ಚಿಗೆ ಕೇಂದ್ರ ಸರ್ಕಾರ ಎನ್.ಜಿ.ಎನ್.ಆರ್.ಇ.ಜಿ ಯೋಜನೆ ಹೆಸರು ಬದಲಾಯಿಸಿ ವಿಬಿಜಿ ರಾಮ್ ಜಿ ಎಂದು ಯೋಜನೆ ರೂಪಿಸಿದ್ದಾರೆ. ವಿರೋಧ ಪಕ್ಷಗಳು ರಾಮ್ ಜಿ ಎಂದರೆ ಸಾರ್ವಜನಿಕರಲ್ಲಿ ತಪ್ಪು ಕಲ್ಪನೆ ಮೂಡಿಸುತ್ತಿದ್ದಾರೆ ಕೇಂದ್ರದ ಸರ್ಕಾರ ಬಿಜೆಪಿ ಮತ್ತು ಮಿತ್ರ ಪಕ್ಷಗಳು ರಾಮನ ಹೆಸರು ಬಳಿಸಿಕೊಂಡು ಜನರಿಗೆ ಮೋಸಮಾಡುತ್ತಿದ್ದಾರೆಂದು ಪ್ರಚೋದನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ವಿ ಎಂದರೆ ವಿಕಸಿತ, ಬಿ ಎಂದರೆ ಭಾರತ್, ಜಿ ಎಂದರೆ ಗ್ಯಾರಟಿ, ಆರ್ ಎಂದರೆ ರೋಜ್ಗಾರ್, ಎ ಎಂದರೆ ಅಜೀವಿಕ, ಎಂ ಎಂದರೆ ಮಿಷನ್, ಜಿ ಎಂದರೆ ಗ್ರಾಮೀಣ ಅರ್ಥ ಆಗಿದೆ. ಆದರೆ ವಿರೋಧ ಪಕ್ಷಗಳು ರಾಮನ ಹೆಸರು ಹೇಳುವ ಮೂಲಕ ಸತ್ಯವನ್ನು ಮರೆಮಾಚ್ಚುತ್ತಿದ್ದಾರೆ.

ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರ ವೃದ್ಯಾಪಿ ವೇತನ,ವಿಧವಾ ವೇತನ,ಅಂಗವಿಕಲರ ವೇತನಗಳು ಬಿಡುಗಡೆ ಮಾಡಲು ಪಲಾನುಭವಿಗಳ ವಾರ್ಷಿಕ ಕುಟುಂಬ ಆದಾಯ ರೂ ೩೨, ಸಾವಿರ ಮಾತ್ರ ಇರಬೇಕು. ಹೆಚ್ಚು ಇದ್ದರೆ ವೇತನಗಳು ನಿಲ್ಲಿಸಲಾಗುವುದೆಂದು ತಿಳಿಸಿರುವುದಾಗಿ ಪಲಾನುಭವಿಗಳು ನಾಡಕಛೇರಿ, ತಾಲ್ಲೂಕು ಕಛೇರಿ, ಖಜಾನೆಗಳ ಮುಂದೆ ಸಾಲು ಸಾಲು ದಿನ ಪೂರ್ತಿ ನಿಲ್ಲುವಂತಾಗಿದೆ.

ಅಸಹಾಯಕರು, ಅಂಗವಿಕಲರು, ವಯೋವೃದ್ದರು ಸಾಲುಗಟ್ಟಿ ನಿಲ್ಲಲಾರದೇ ಪರೀತಪಿಸುವ ದೃಶ್ಯಗಳು ಕಂಡು ಬರುತ್ತೀವೆ. ಅವರಿಂದ ರೂ ೧೦೦=೦೦ ರೂಗಳು ಪಡೆಯುತ್ತಿದ್ದಾರೆ. ಗ್ರಾಮ ಮಟ್ಟದ ಕಂದಾಯ ಅಧಿಕಾರಿಗಳು ವಾರ್ಷಿಕ ಆದಾಯ ರೂ ೩೨,೦೦೦/- ನಮೋದಿಸಿದ್ದರೆ ಅರ್.ಐ.ಗಳು ಅವರ ಮನಿಸ್ಸಿಗೆ ಬಂದಂತ್ತೆ ರೂ ೬೦ ರಿಂದ ೮೦, ಸಾವಿರ ಕೆಲವರಿಗೆ ಒಂದು ಲಕ್ಷಕ್ಕೂ ಹೆಚ್ಚಿಗೆ ನಮೂದಿಸುತ್ತಿದ್ದಾರೆ.

ಸರ್ಕಾರ ವಿಬಿಜಿ ರಾಮ್ಜಿ ಯೋಜನೆಯಡಿ ಕೂಲಿ ಕಾರ್ಡ್ ಹೊಂದಿರುವ ಒಬ್ಬ ವ್ಯಕ್ತಿಗೆ ಒಂದು ದಿನಕ್ಕೆ ರೂ ೩೮೨=೦೦ ನಿಗದಿ ಪಡಿಸಿದೆ ಒಂದು ವರ್ಷದಲ್ಲಿ ೧೨೫ ದಿನಗಳು ಕೂಲಿಗೆ ಅವಕಾಶ ಕಲ್ಪಿಸಿದೆ. ಒಬ್ಬ ವ್ಯಕ್ತಿ ಸರ್ಕಾರದ ನಿಯಮದ ಪ್ರಕಾರ ೧೨೫ ದಿನಗಳ ಕೂಲಿ ಮಾಡಿದರೆ ೧೨೫*೩೮೨=೪೭,೭೫೦ ಕೂಲಿ ಹಣ ಸಿಗುತ್ತೆ. ಈಗಿರುವಾಗ ವೃದಾಪಿ ವೇತನ, ಅಂಗವಿಕಲರ ವೇತನ, ವಿಧಾವ ವೇತನ ಪಡೆಯುವ ಪಲಾನುಭವಿಗಳು ವೇತನ ಪಡೆಯಲು ಸರ್ಕಾರ ವಾರ್ಷಿಕ ಆದಾಯ ರೂ ೩೨,೦೦೦/- ನಿಗದಿ ಪಡಿಸಿದರೆ ಯಾಓಬ್ಬ ಪಲಾನುಭವಿಯು ವೇತನ ಪಡೆಯಲು ಅರ್ಹತರಾಗಲು ಸಾಧ್ಯವಿಲ್ಲದಂತ್ತೆ ಆಗುತ್ತದೆ. ತಾಜಾ ಉದಾಹರಣೆ ಶ್ಯಾಗತ್ತೂರು ಗ್ರಾಮ ಒಂದರಲ್ಲೇ ಸುಮಾರು ೪೦ ಜನ ಈ ಯೋಜನೆಯಿಂದ ಅನ್ಯಾಯಕ್ಕೆ ಒಳಗಾಗಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಆದುದರಿಂದ ಸರ್ಕಾರ ಗಮನ ಹರಿಸಿ ಸಮಸ್ಯೆ ಪರಿಹರಿಸುವಂತೆ ಶ್ಯಾಗತ್ತೂರು ಡಾ. ನಾರಾಯಣಸ್ವಾಮಿ ಮನವಿ ಮಾಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande