ಮೂವರು ಇರಾನ್ ಪೈಲಟ್ಗಳನ್ನು ವಶಕ್ಕೆ ಪಡೆದ ಆರೋಪ ತಳ್ಳಿಹಾಕಿದ ಕತಾರ್
ದೋಹಾ (ಕತಾರ್), 16 ಆಗಸ್ಟ್ (ಹಿ.ಸ.): ಆ್ಯಂಕರ್: ಮೂವರು ಇರಾನ್ ಪೈಲಟ್‌ಗಳನ್ನು ಕತಾರ್ ವಶಕ್ಕೆ ಪಡೆದಿದೆ ಎಂಬ ವರದಿಗಳನ್ನು ಕತಾರ್ ಸರ್ಕಾರ ಸಂಪೂರ್ಣವಾಗಿ ತಳ್ಳಿಹಾಕಿದೆ. ಇಂತಹ ಆರೋಪಗಳು ಆಧಾರರಹಿತವಾಗಿದ್ದು, ಜನರನ್ನು ದಾರಿ ತಪ್ಪಿಸುವ ಹೇಳಿಕೆಗಳಾಗಿವೆ ಎಂದು ಕತಾರ್ ವಿದೇಶಾಂಗ ಸಚಿವಾಲಯದ ವಕ್ತಾರ ಡ
कतर के विदेश मंत्रालय के प्रवक्ता डॉ. माजिद मोहम्मद अल-अंसारी की एक्स पोस्ट


ದೋಹಾ (ಕತಾರ್), 16 ಆಗಸ್ಟ್ (ಹಿ.ಸ.):

ಆ್ಯಂಕರ್:

ಮೂವರು ಇರಾನ್ ಪೈಲಟ್‌ಗಳನ್ನು ಕತಾರ್ ವಶಕ್ಕೆ ಪಡೆದಿದೆ ಎಂಬ ವರದಿಗಳನ್ನು ಕತಾರ್ ಸರ್ಕಾರ ಸಂಪೂರ್ಣವಾಗಿ ತಳ್ಳಿಹಾಕಿದೆ. ಇಂತಹ ಆರೋಪಗಳು ಆಧಾರರಹಿತವಾಗಿದ್ದು, ಜನರನ್ನು ದಾರಿ ತಪ್ಪಿಸುವ ಹೇಳಿಕೆಗಳಾಗಿವೆ ಎಂದು ಕತಾರ್ ವಿದೇಶಾಂಗ ಸಚಿವಾಲಯದ ವಕ್ತಾರ ಡಾ. ಮಜೀದ್ ಮೊಹಮ್ಮದ್ ಅಲ್-ಅನ್ಸಾರಿ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ಪ್ರದೇಶದಲ್ಲಿ ಉದ್ವಿಗ್ನತೆ ಕಡಿಮೆ ಮಾಡಲು ರಾಜತಾಂತ್ರಿಕ ಪ್ರಯತ್ನಗಳು ನಡೆಯುತ್ತಿರುವ ಸಂದರ್ಭದಲ್ಲಿ ಇಂತಹ ತಪ್ಪು ಮಾಹಿತಿಗಳು ಆತಂಕಕಾರಿ ಬೆಳವಣಿಗೆಗೆ ಕಾರಣವಾಗಬಹುದು ಎಂದು ಹೇಳಿದ್ದಾರೆ.

ಕತಾರ್‌ನ ವಾಯುಪ್ರದೇಶ ಉಲ್ಲಂಘನೆ ಹಾಗೂ ಗುರಿಯ ದಿಕ್ಕು ದೃಢಪಟ್ಟ ಬಳಿಕ ಸಂಬಂಧಿತ ಪೈಲಟ್‌ಗಳನ್ನು ಸಂಪರ್ಕಿಸಲು ಪ್ರಯತ್ನಿಸಲಾಗಿತ್ತು. ನಿಯಮಾನುಸಾರ ಸಂಪರ್ಕ ಸಾಧಿಸಲು ಹಲವು ಪ್ರಯತ್ನಗಳಾದರೂ ಯಾವುದೇ ಪ್ರತಿಕ್ರಿಯೆ ದೊರೆಯದ ಹಿನ್ನೆಲೆಯಲ್ಲಿ, ಅಂತರರಾಷ್ಟ್ರೀಯ ಕಾನೂನಿನ ಅನ್ವಯ ತನ್ನ ಪ್ರದೇಶದ ಭದ್ರತೆಗಾಗಿ ಅಗತ್ಯ ಕ್ರಮ ಕೈಗೊಳ್ಳಲಾಗಿತ್ತು ಎಂದು ಅಲ್-ಅನ್ಸಾರಿ ಸ್ಪಷ್ಟಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಕತಾರ್‌ನ ಶೋಧ ಮತ್ತು ರಕ್ಷಣಾ ತಂಡಗಳು ಪೈಲಟ್‌ಗಳ ಅವಶೇಷಗಳನ್ನು ಪತ್ತೆಹಚ್ಚುವ ಕಾರ್ಯವನ್ನು ಜವಾಬ್ದಾರಿಯಿಂದ ನಿರ್ವಹಿಸಿವೆ. ಪತ್ತೆಯಾದ ಓರ್ವ ಪೈಲಟ್‌ನ ಅವಶೇಷಗಳನ್ನು ಹಸ್ತಾಂತರಿಸುವ ಕುರಿತು ಅಂತರರಾಷ್ಟ್ರೀಯ ಮಾನವೀಯ ಕಾನೂನಿನ ನಿಯಮಗಳಿಗೆ ಅನುಗುಣವಾಗಿ ಇರಾನ್‌ನೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಏಪ್ರಿಲ್‌ನಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯ ಕುರಿತು ಮಾಹಿತಿ ನೀಡಲು ಇರಾನ್‌ನ ತಂಡವನ್ನು ಕತಾರ್ ಆಹ್ವಾನಿಸಿತ್ತು. ಆದರೆ ಈವರೆಗೆ ಇರಾನ್ ಕಡೆಯಿಂದ ಆಹ್ವಾನಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಕತಾರ್ ವಿದೇಶಾಂಗ ಸಚಿವಾಲಯದ ವಕ್ತಾರ ತಿಳಿಸಿದ್ದಾರೆ.

ಪ್ರದೇಶದಲ್ಲಿ ಉದ್ವಿಗ್ನತೆ ಕಡಿಮೆ ಮಾಡಲು ರಾಜತಾಂತ್ರಿಕ ಪ್ರಯತ್ನಗಳು ನಡೆಯುತ್ತಿರುವ ಸಂದರ್ಭದಲ್ಲೇ ಪೈಲಟ್‌ಗಳನ್ನು ವಶಕ್ಕೆ ಪಡೆದಿರುವುದಾಗಿ ಹರಡುತ್ತಿರುವ ವರದಿಗಳನ್ನು ಕತಾರ್ ತಳ್ಳಿಹಾಕಿರುವುದು ಮಹತ್ವ ಪಡೆದಿದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande