ಕರಾಚಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ವೇಳೆ ಗುಂಡಿನ ದಾಳಿ: ಮಹಿಳೆ ಸಾವು, 94 ಮಂದಿ ಗಾಯ
ಇಸ್ಲಾಮಾಬಾದ್, 14 ಆಗಷ್ಟ್ (ಹಿ.ಸ.): ಆ್ಯಂಕರ್:ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆ ವೇಳೆ ಸಿಂಧ್ ಪ್ರಾಂತ್ಯದ ರಾಜಧಾನಿ ಕರಾಚಿಯಲ್ಲಿ ನಡೆದ ಗಾಳಿಯಲ್ಲಿ ಗುಂಡಿನ ದಾಳಿಯ ಘಟನೆಗಳಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದು, ಕನಿಷ್ಠ 94 ಮಂದಿ ಗಾಯಗೊಂಡಿದ್ದಾರೆ. ಆಗಸ್ಟ್ 14ರ ಸ್ವಾತಂತ್ರ್ಯ ದಿನಾಚರಣೆ ಹಿನ್ನ
पाकिस्तान में ऐसा पहले भी हो चुका है। फोटो - इंटरनेट मीडिया


पाकिस्तान में ऐसा पहले भी हो चुका है। फोटो - इंटरनेट मीडिया


ಇಸ್ಲಾಮಾಬಾದ್, 14 ಆಗಷ್ಟ್ (ಹಿ.ಸ.):

ಆ್ಯಂಕರ್:ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆ ವೇಳೆ ಸಿಂಧ್ ಪ್ರಾಂತ್ಯದ ರಾಜಧಾನಿ ಕರಾಚಿಯಲ್ಲಿ ನಡೆದ ಗಾಳಿಯಲ್ಲಿ ಗುಂಡಿನ ದಾಳಿಯ ಘಟನೆಗಳಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದು, ಕನಿಷ್ಠ 94 ಮಂದಿ ಗಾಯಗೊಂಡಿದ್ದಾರೆ.

ಆಗಸ್ಟ್ 14ರ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಕರಾಚಿಯ ವಿವಿಧೆಡೆ ಪಟಾಕಿ ಸಿಡಿಸಿ ಸಂಭ್ರಮಿಸುವ ವೇಳೆ ಕೆಲವರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಈದಿ ಫೌಂಡೇಶನ್ ವಕ್ತಾರರ ಪ್ರಕಾರ, ಗಾಯಗೊಂಡವರಲ್ಲಿ 10 ಮಹಿಳೆಯರು ಮತ್ತು 17 ಮಕ್ಕಳು ಸೇರಿದ್ದಾರೆ. ಗಾಯಾಳುಗಳನ್ನು ಜಿನ್ನಾ ಸ್ನಾತಕೋತ್ತರ ವೈದ್ಯಕೀಯ ಕೇಂದ್ರ, ಸಿವಿಲ್ ಆಸ್ಪತ್ರೆ ಹಾಗೂ ಅಬ್ಬಾಸಿ ಶಹೀದ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಬ್ಬಾಸಿ ಶಹೀದ್ ಆಸ್ಪತ್ರೆಯಲ್ಲಿ 24 ಮಂದಿ, ಜಿನ್ನಾ ಆಸ್ಪತ್ರೆಯಲ್ಲಿ 35 ಮಂದಿ ಹಾಗೂ ಸಿವಿಲ್ ಆಸ್ಪತ್ರೆಯ ಅಪಘಾತ ಚಿಕಿತ್ಸಾ ಕೇಂದ್ರದಲ್ಲಿ 26 ಮಂದಿಗೆ ಚಿಕಿತ್ಸೆ ನೀಡಲಾಗಿದೆ. ಈ ಪೈಕಿ ಮಕ್ಕಳು ಮತ್ತು ಮಹಿಳೆಯರೂ ಸೇರಿದ್ದಾರೆ.

ಲಿಯಾರಿ, ಸದರ್, ಕೊರಂಗಿ, ಮಾಲಿರ್, ಅಜೀಜಾಬಾದ್, ಉತ್ತರ ನಜೀಮಾಬಾದ್, ನಜೀಮಾಬಾದ್, ಗುಲ್ಬಹಾರ್, ಗುಲ್ಶನ್-ಎ-ಇಕ್ಬಾಲ್, ಒರಂಗಿ ಟೌನ್, ಜಮ್ಶೆಡ್ ಕ್ವಾರ್ಟರ್ಸ್ ಹಾಗೂ ಡಿಫೆನ್ಸ್ ಕಾಲೋನಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿರುವ ಘಟನೆಗಳು ನಡೆದಿವೆ ಎಂದು ದಿ ನ್ಯೂಸ್,ಜಿಯೋ ನ್ಯೂಸ್ ವರದಿ ಮಾಡಿವೆ.

ಘಟನೆಗಳಿಗೆ ಸಂಬಂಧಿಸಿದಂತೆ ಕರಾಚಿಯ ಪೂರ್ವ, ಪಶ್ಚಿಮ ಮತ್ತು ಮಧ್ಯ ಜಿಲ್ಲೆಗಳಿಂದ 30 ಶಂಕಿತರನ್ನು ಪೊಲೀಸರು ಬಂಧಿಸಿದ್ದಾರೆ. ಖ್ವಾಜಾ ಅಜ್ಮೀರ್ ನಗರ, ಸಮನಾಬಾದ್, ರಿಜ್ವಿಯಾ ಸೊಸೈಟಿ ಮತ್ತು ಸರ್ ಸೈಯದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಂಧನಗಳು ನಡೆದಿದ್ದು, ಕೆಲವರಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಗುಂಡೇಟಿನಿಂದ ಗಾಯಗೊಂಡ ಮಹಿಳೆಯೊಬ್ಬರು ಅಬ್ಬಾಸಿ ಶಹೀದ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಸೋದರ ಸಂಬಂಧಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕರಾಚಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ವೇಳೆ ಗಾಳಿಯಲ್ಲಿ ಗುಂಡು ಹಾರಿಸುವ ಘಟನೆಗಳು ಪ್ರತಿವರ್ಷವೂ ಆತಂಕಕ್ಕೆ ಕಾರಣವಾಗುತ್ತಿವೆ. 2025ರಲ್ಲಿ ಇಂತಹ ಘಟನೆಗಳಲ್ಲಿ ಮೂವರು ಮೃತಪಟ್ಟಿದ್ದು, ಕನಿಷ್ಠ 75 ಮಂದಿ ಗಾಯಗೊಂಡಿದ್ದರು. 2024ರಲ್ಲಿ ಸುಮಾರು 95 ಮಂದಿ ಗಾಯಗೊಂಡಿದ್ದರು.

ಏತನ್ಮಧ್ಯೆ, ಪ್ರಧಾನಿ ಶಹಬಾಜ್ ಷರೀಫ್ ಅವರು ಸ್ವಾತಂತ್ರ್ಯ ದಿನದ ಅಂಗವಾಗಿ ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ. ಇಸ್ಲಾಮಾಬಾದ್‌ನಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಪಾಕಿಸ್ತಾನಕ್ಕಾಗಿ ತ್ಯಾಗ ಮಾಡಿದ ಸ್ಥಾಪಕ ಪೀಳಿಗೆಯನ್ನು ರಾಷ್ಟ್ರ ಸ್ಮರಿಸುತ್ತಿದೆ ಎಂದರು.

ನೀರಿನ ಪ್ರತಿಯೊಂದು ಹನಿಯೂ ಪಾಕಿಸ್ತಾನಕ್ಕೆ ಅತ್ಯಂತ ಸೂಕ್ಷ್ಮ ವಿಚಾರವಾಗಿದೆ. ನೀರಿನ ವಿಷಯದಲ್ಲಿ ಭಾರತ ಯಾವುದೇ ರೀತಿಯ ಗೊಂದಲ ಸೃಷ್ಟಿಸಿದರೆ ಅದಕ್ಕೆ ತಕ್ಕ ಉತ್ತರ ನೀಡಲಾಗುವುದು ಎಂದು ಶಹಬಾಜ್ ಷರೀಫ್ ಎಚ್ಚರಿಕೆ ನೀಡಿದರು. ಯುವ ಪೀಳಿಗೆಗೆ ಅಭಿವೃದ್ಧಿಯ ಹೊಸ ಅವಕಾಶಗಳನ್ನು ಕಲ್ಪಿಸುವುದು ತಮ್ಮ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದರು.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande