ಮುಂಬೈನಲ್ಲಿ ಭಾರೀ ಮಳೆ: 17 ವಿಮಾನಗಳ ರದ್ದು, 217 ವಿಮಾನಗಳ ವಿಳಂಬ
ಮುಂಬಯಿ, 06 ಜುಲೈ (ಹಿ.ಸ.): ಆ್ಯಂಕರ್:ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮವಾಗಿ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಸಂಚಾರ ಅಸ್ತವ್ಯಸ್ತಗೊಂಡಿದೆ. ಜುಲೈ 6ರ ಮಧ್ಯರಾತ್ರಿ 12 ಗಂಟೆಯಿಂದ ಬೆಳಿಗ್ಗೆ 11.30ರವರೆಗೆ 17 ವಿಮಾನಗ
ಮುಂಬಯಿ ವಿಮಾನ ನಿಲ್ದಾಣ


ಮುಂಬಯಿ, 06 ಜುಲೈ (ಹಿ.ಸ.):

ಆ್ಯಂಕರ್:ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮವಾಗಿ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಸಂಚಾರ ಅಸ್ತವ್ಯಸ್ತಗೊಂಡಿದೆ. ಜುಲೈ 6ರ ಮಧ್ಯರಾತ್ರಿ 12 ಗಂಟೆಯಿಂದ ಬೆಳಿಗ್ಗೆ 11.30ರವರೆಗೆ 17 ವಿಮಾನಗಳನ್ನು ರದ್ದುಪಡಿಸಲಾಗಿದ್ದು, 217 ವಿಮಾನಗಳು ವಿಳಂಬವಾಗಿ ಸಂಚರಿಸಲಿವೆ.

ನಿರಂತರ ಮಳೆಯಿಂದ ಉಂಟಾಗಿರುವ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಆಕಾಶ ಏರ್ ಮತ್ತು ಇಂಡಿಗೋ ಪ್ರಯಾಣಿಕರಿಗೆ ವಿಶೇಷ ಸಲಹೆ ಪ್ರಕಟಿಸಿವೆ.

ಅಕಾಸಾ ಏರ್ ಪ್ರಕಟಣೆಯಲ್ಲಿ, ಮುಂಬೈ, ಪುಣೆ ಹಾಗೂ ಗೋವಾ ಪ್ರದೇಶಗಳಲ್ಲಿ ಭಾರೀ ಮಳೆಯ ಕಾರಣದಿಂದ ತನ್ನ ಜಾಲತಾಣದ ಕೆಲವು ವಿಮಾನಗಳ ಸಂಚಾರದಲ್ಲಿ ವಿಳಂಬ ಉಂಟಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ತೆರಳುವ ಮೊದಲು ತಮ್ಮ ವಿಮಾನದ ಸ್ಥಿತಿಯನ್ನು ಪರಿಶೀಲಿಸಿಕೊಳ್ಳುವಂತೆ ಮನವಿ ಮಾಡಿದೆ.

ವಾತಾವರಣದ ಕಾರಣದಿಂದ ಉಂಟಾಗಿರುವ ಈ ಪರಿಸ್ಥಿತಿ ವಿಮಾನಯಾನ ಸಂಸ್ಥೆಯ ನಿಯಂತ್ರಣದಾಚೆಯದ್ದಾಗಿದ್ದರೂ, ಪ್ರಯಾಣಿಕರಿಗೆ ಅಗತ್ಯ ನೆರವು ನೀಡಲು ಸಿಬ್ಬಂದಿ ಸದಾ ಸಿದ್ಧರಾಗಿದ್ದಾರೆ ಎಂದು ಅಕಾಸಾ ಏರ್ ಭರವಸೆ ನೀಡಿದೆ.

ಇನ್ನೊಂದೆಡೆ, ಇಂಡಿಗೋ ಕೂಡ ಪ್ರಕಟಣೆ ಹೊರಡಿಸಿ, ಮುಂಬೈನಲ್ಲಿ ಪ್ರತಿಕೂಲ ಹವಾಮಾನದಿಂದ ವಿಮಾನಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಆಗುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಹವಾಮಾನದ ಸ್ಥಿತಿಗತಿಗಳನ್ನು ನಿರಂತರವಾಗಿ ಗಮನಿಸಲಾಗುತ್ತಿದ್ದು, ಪ್ರಯಾಣಿಕರನ್ನು ಸುರಕ್ಷಿತವಾಗಿ ಅವರ ಗಮ್ಯಸ್ಥಾನಕ್ಕೆ ತಲುಪಿಸಲು ಎಲ್ಲ ಪ್ರಯತ್ನಗಳನ್ನೂ ಮಾಡಲಾಗುತ್ತಿದೆ ಎಂದು ಹೇಳಿದೆ.

ವಿಮಾನ ಪ್ರಯಾಣಿಕರು ತಮ್ಮ ವಿಮಾನದ ಇತ್ತೀಚಿನ ಮಾಹಿತಿಯನ್ನು ಇಂಡಿಗೋ ವೆಬ್‌ಸೈಟ್ ಅಥವಾ ಮೊಬೈಲ್ ಆ್ಯಪ್ ಮೂಲಕ ನಿರಂತರವಾಗಿ ಪರಿಶೀಲಿಸಬೇಕು ಎಂದು ಸಂಸ್ಥೆ ಮನವಿ ಮಾಡಿದ್ದು, ಉಂಟಾಗಿರುವ ತೊಂದರೆಗೆ ಸಹಕಾರ ಮತ್ತು ಸಹನೆಯನ್ನು ತೋರಿದ ಪ್ರಯಾಣಿಕರಿಗೆ ಕೃತಜ್ಞತೆ ಸಲ್ಲಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande