
ಹೊಸಪೇಟೆ, 03 ಜುಲೈ (ಹಿ.ಸ.)
ಆ್ಯಂಕರ್ :
ಗಂಡ - ಹೆಂಡತಿಯ ನಡುವಿನ ಕೌಟುಂಬಿಕ ಕಲಹವು ಹೆಂಡತಿಯ ಕೊಲೆಯಲ್ಲಿ ಕೊನೆಯಾಗಿದೆ. ಕೊಲೆ ಆರೋಪಿಯನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.
ಹೊಸಪೇಟೆಯ ಅಗಸರ ಓಣಿಯಲ್ಲಿದ್ದ ರಾಮಮೂರ್ತಿ (55) ಮತ್ತು ಪ್ರಭಾವತಿ (50) ಮಧ್ಯೆ ಗಲಾಟೆಯಾಗಿದೆ. ಈ ಗಲಾಟೆಯಲ್ಲಿ ರಾಮಮೂರ್ತಿಯು ಹೆಂಡತಿ ಪ್ರಭಾವತಿಯು ಶುಕ್ರವಾರದ ಪೂಜೆ ಮಾಡುತ್ತಿದ್ದಾಗ ಹರಿತವಾದ ವಸ್ತುವಿನಿಂದ ಕುತ್ತಿಗೆಯನ್ನು ಕೊಯ್ದು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೆಂಡತಿಯನ್ನು ಕೊಲೆ ಮಾಡಿದ ರಾಮಮೂರ್ತಿ ಪೊಲೀಸರಿಗೆ ಶರಣವಾಗಿದ್ದಾನೆ ಎನ್ನಲಾಗಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು, ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.
ಮೃತ ಪ್ರಭಾವತಿ ಅವರ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಹೊಸಪೇಟೆ ಪಟ್ಟಣ ಪೋಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ. ವಿಜಯನಗರ ಜಿಲ್ಲಾ ಪೋಲೀಸ್ ಅಧೀಕ್ಷಕಿ ಎಸ್. ಜಾಹ್ನವಿ, ಹೆಚ್ಚುವರಿ ಪೋಲೀಸ್ ಅಧೀಕ್ಷಕ ಮಂಜುನಾಥ್ ಹಾಗೂ ಡಿಎಸ್ಪಿ ಮುರುಳಿಧರ್ ಅವರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್