ಬಳ್ಳಾರಿಯ ದ್ವಿಚಕ್ರ ವಾಹನ ಕಳ್ಳನ ಬಂಧನ, 41 ಹೀರೋ ಹೋಂಡಾಗಳ ಜಪ್ತಿ
ಬಳ್ಳಾರಿ, 24 ಜೂನ್ (ಹಿ.ಸ.) : ಆ್ಯಂಕರ್ : ಸಿರುಗುಪ್ಪ, ಬಳ್ಳಾರಿ ನಗರ, ಹೊಸಪೇಟೆ, ಮೊಳಕಾಲ್ಕೂರು, ಚಳ್ಳಕೆರೆ, ಹಾಗೂ ಚಿತ್ರದುರ್ಗ ನಗರದಿಂದ ಹೀರೋ ಹೋಂಡಾ ಸ್ಪ್ಲೆಂಡರ್ ಕದ್ದು ಮಾರಾಟ ಮಾಡುತ್ತಿದ್ದ ಬಳ್ಳಾರಿ ನಗರ ನಿವಾಸಿಯಿಂದ ಪೊಲೀಸರು 41 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿ, ಆರೋಪಿಯನ್ನು ನ್ಯಾಯಾಂ
ಬಳ್ಳಾರಿಯ ದ್ವಿಚಕ್ರ ವಾಹನ ಕಳ್ಳನ ಬಂಧನ, 41 ಹೀರೋ ಹೋಂಡಾಗಳ ಜಪ್ತಿ


ಬಳ್ಳಾರಿಯ ದ್ವಿಚಕ್ರ ವಾಹನ ಕಳ್ಳನ ಬಂಧನ, 41 ಹೀರೋ ಹೋಂಡಾಗಳ ಜಪ್ತಿ


ಬಳ್ಳಾರಿಯ ದ್ವಿಚಕ್ರ ವಾಹನ ಕಳ್ಳನ ಬಂಧನ, 41 ಹೀರೋ ಹೋಂಡಾಗಳ ಜಪ್ತಿ


ಬಳ್ಳಾರಿ, 24 ಜೂನ್ (ಹಿ.ಸ.) :

ಆ್ಯಂಕರ್ : ಸಿರುಗುಪ್ಪ, ಬಳ್ಳಾರಿ ನಗರ, ಹೊಸಪೇಟೆ, ಮೊಳಕಾಲ್ಕೂರು, ಚಳ್ಳಕೆರೆ, ಹಾಗೂ ಚಿತ್ರದುರ್ಗ ನಗರದಿಂದ ಹೀರೋ ಹೋಂಡಾ ಸ್ಪ್ಲೆಂಡರ್ ಕದ್ದು ಮಾರಾಟ ಮಾಡುತ್ತಿದ್ದ ಬಳ್ಳಾರಿ ನಗರ ನಿವಾಸಿಯಿಂದ ಪೊಲೀಸರು 41 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿ, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಬಂಧಿತ ಆರೋಪಿಯು ಬಳ್ಳಾರಿ ನಗರ ಅವಂಬಾವಿಯ ಅಶೋಕ ನಗರ ನಿವಾಸಿ, ಆಟೋ ಚಾಲಕ ಸಿದ್ದಾರೆಡ್ಡಿ @ ಸ್ಪ್ಲೆಂಡರ್ ಸಿದ್ದಾರೆಡ್ಡಿ (56) ಎಂದು ಪೊಲೀಸರು ತಿಳಿಸಿದ್ದಾರೆ.

ದಿನಾಂಕ 02.06.2026 ರಂದು ಸಿರುಗುಪ್ಪ ಪಟ್ಟಣದ ನಿಟ್ಟೂರು ನರಸಿಂಹ ಮೂರ್ತಿ ಬಯಲು ಜಾಗದಿಂದ ಮುಕ್ಕಣ್ಣ ಎನ್ನುವವರ ಸಿಲ್ವರ್ ಬಣ್ಣದ ಹಿರೋ ಪ್ಯಾಷನ್ ಪೆÇ್ರೀ ಮೋಟಾರ್ ಸೈಕಲ್ ಕಳ್ಳತನವಾಗಿತ್ತು. ಈ ಪ್ರಕರಣದ ತನಿಖೆ ನಡೆಸಿದಾಗ ಆರೋಪಿ ಸಿದ್ದಾರೆಡ್ಡಿ ಸಿಕ್ಕಿಬಿದ್ದಿದ್ದು, ಆತನ ಕಳ್ಳತನ ದಂಧೆಯು ಬಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪೆನ್ನೇಕರ್ ಅವರು ಸುದ್ದಿಗಾರರಿಗೆ ಬುಧವಾರ ತಿಳಿಸಿದ್ದಾರೆ.

ಸಿದ್ದಾರೆಡ್ಡಿಯು ವೃತ್ತಿಪರ ದ್ವಿಚಕ್ರ ವಾಹನಗಳ ಕಳ್ಳನಾಗಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಆರೋಪಿಯು ಸಿರುಗುಪ್ಪ, ಬಳ್ಳಾರಿ ನಗರ, ಹೊಸಪೇಟೆ, ಮೊಳಕಾಲ್ಕೂರು, ಚಳ್ಳಕೆರೆ, ಹಾಗೂ ಚಿತ್ರದುರ್ಗ ನಗರದಿಂದ ರೂಪಾಯಿ 20.50 ಲಕ್ಷ ಮೌಲ್ಯದ ಒಟ್ಟು 41 ಮೋಟಾರ್ ಸೈಕಲ್ಗಳಗಳನ್ನು ಕಳ್ಳತನ ಮಾಡಿದ್ದು, ಜಪ್ತಿ ಮಾಡಲಾಗಿದೆ.

ಜಪ್ತಿ ಮಾಡಲಾಗಿರುವ 41 ಮೋಟಾರ್ ಸೈಕಲ್ಗಳಲ್ಲಿ ಬಳ್ಳಾರಿ ಜಿಲ್ಲೆಯ 16, ಚಿತ್ರದುರ್ಗ ಜಿಲ್ಲೆಯ 21 ಹಾಗೂ ವಿಜಯನಗರ ಜಿಲ್ಲೆಯ 04 ವಾಹನಗಳು ಇವೆ. ಆರೋಪಿಯು ಜನನಿಬಿಡ ಸ್ಥಳಗಳಲ್ಲಿ ಪಾಕಿರ್ಂಗ್ ಮಾಡಿದ್ದ, ಅದರಲ್ಲೂ ವಿಶೇಷವಾಗಿ ಹೀರೋ ಹೋಂಡಾ ಸ್ಪ್ಲೆಂಡರ್ ಮೋಟಾರ್ ಸೈಕಲ್ಗಳನ್ನು ಗುರುತಿಸಿ, ನಕಲಿ ಕೀಗಳನ್ನು ಬಳಸಿ ಕಳ್ಳತನ ಮಾಡಿ, ನಂಬರ್ ಪ್ಲೇಟ್ಗಳನ್ನು ಬದಲಾಯಿಸಿ, ಓಡಿಸುತ್ತಿದ್ದನು.

ನಂತರ, ಬೇರೆಯ ಮೋಟಾರ್ ಸೈಕಲ್ಗಳ ನಂಬರ್ ಪ್ಲೇಟ್ಗಳ ಪೆÇಟೋಗಳನ್ನು ತೆಗೆದುಕೊಂಡು ಕರ್ನಾಟಕ ಒನ್ ಸೆಂಟರ್ಗೆ ಭೇಟಿ ನೀಡಿ, ತನ್ನ ಮೋಟಾರ್ ಸೈಕಲ್ ಆರ್ಸಿ ಕಳೆದು ಹೋಗಿದು,್ದ ಪೆÇಟೋದಲ್ಲಿ ಇರುವ ನಂಬರ್ ಪ್ಲೇಟ್ ತೋರಿಸಿ ನಕಲಿ ಆರ್ಸಿಯನ್ನು ಡೌನ್ಲೋಡ್ ಮಾಡಿಸಿಕೊಂಡು, ನಂಬರ್ ಪ್ಲೇಟ್ ಮಾಡುವವರಿಂದ ನಂಬರ್ ಪ್ಲೇಟ್ ಮಾಡಿಸಿಕೊಂಡು, ಕಳ್ಳತನ ಮಾಡಿದ ಮೋಟಾರ್ ಸೈಕಲ್ಗೆ ಪಿಕ್ಸ್ ಮಾಡಿ, ಕೀ ತಯಾರಿಸುವರಿಂದ ನಕಲಿ ಕೀಗಳನ್ನು ಮಾಡಿಸಿಕೊಂಡು, ಅಂತಿಮವಾಗಿ ಸೆಕೆಂಡ್ ಹ್ಯಾಂಡ್ ಮೋಟಾರ್ ಸೈಕಲ್ ಎಂದು ಜನರನ್ನು ನಂಬಿಸಿ ಮಾರಾಟ ಮಾಡುತ್ತಿದ್ದನು ಎನ್ನಲಾಗಿದೆ.

ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande