
ಕೋಲಾರ, ೨೫ ಜೂನ್ (ಹಿ.ಸ) :
ಆ್ಯಂಕರ್ : ಕೆಜಿಎಫ್ ಪೊಲೀಸ್ ಇಲಾಖೆಯು ಮಾದಕ ವಸ್ತುಗಳ ವಿರುದ್ದ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜೂನ್ ೨೬ ರಂದು ಅಂತರರಾಷ್ಟಿಯ ಮಾದಕ ವಸ್ತುಗಳ ನಿಷೇದ ಮತ್ತು ಅಕ್ರಮ ಸಾಗಣೆ ವಿರೋಧಿ ದಿನಾಚರಣೆಯಿದ್ದು ಈ ವಾರವನ್ನು ಮಾದಕ ವಸ್ತುಗಳ ವಿರೋಧಿ ಸಪ್ತಾಹ-೨೦೨೬ ಎಂದು ಆಚರಿಸಲಾಗುತ್ತಿದೆ ಹಾಗೂ ಡ್ರಗ್ ಫ್ರೀ ಕೆ.ಜಿ.ಎಫ್ ಯೋಜನೆಯು ಜಾರಿಯಲ್ಲಿದ್ದು ಈ ಹಿನ್ನೆಲೆಯಲ್ಲಿ ಕೆಜಿಎಫ್ ಪೊಲೀಸ್ ಜಿಲ್ಲೆಯಲ್ಲಿ ವಶಪಡಿಸಿಕೊಂಡ ಮಾದಕ ವಸ್ತುಗಳ ವಿನಾಶ ಕಾರ್ಯಕ್ರಮವನ್ನು ಹೊಸಕೋಟೆ ತಾಲ್ಲೂಕು ಚೊಕ್ಕಹಳ್ಳಿ ಸರಹದ್ದಿನ ಕೆಐಎಡಿಬಿ ಕೈಗಾರಿಕಾ ಪ್ರದೇಶದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ವತಿಯಿಂದ ಕೆಜಿಎಫ್ ಪೊಲೀಸ್ ಜಿಲ್ಲೆಯಲ್ಲಿ ವಶಪಡಿಸಿಕೊಂಡ ಮಾದಕ ವಸ್ತುಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕು ಚೊಕ್ಕಹಳ್ಳಿ ಸರಹದ್ದಿನ ಕೆಐಎಡಿಬಿ ಕೈಗಾರಿಕಾ ಪ್ರದೇಶದಲ್ಲಿರುವ ಸೆಂಚುರಿ ರಿಫೈನರೀಸ್ ಪ್ರೆöÊ.ಲಿ ಎಂಬಲ್ಲಿ ಗುರುವಾರದಂದು ಬೆಳಿಗ್ಗೆ ನಾಶಪಡಿಸಲಾಯಿತು.
ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ೨೮ ಪ್ರಕರಣಗಳಲ್ಲಿ ಅಮಾನತ್ತು ಪಡಿಸಿಕೊಂಡಿದ್ದ ರೂ.೧೭,೧೯,೮೬೦/- ಮೌಲ್ಯದ ಒಟ್ಟು ೨೯ ಕೆ.ಜಿ. ೨೪೧ ಗ್ರಾಂ ಗಾಂಜವನ್ನು ನಾಶಪಡಿಸಲಾಯಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್