
ಕೋಲಾರ, ಜು.೨೭ (ಹಿ.ಸ) :
ಆ್ಯಂಕರ್: ಚಿಕ್ಕಬಳ್ಳಾಪುರ ಜಿಲ್ಲೆಯ ಕೈವಾರದ ಶ್ರೀ ಯೋಗಿ ನಾರೇಯಣ ಮಠದಲ್ಲಿ ಗುರುಪೂರ್ಣಿಮೆಯ ಪ್ರಯುಕ್ತ ಮೂರು ದಿನಗಳ ಕಾಲ ನಡೆಯುವ ಗುರುಪೂಜಾ-ಸಂಗೀತೋತ್ಸವ ಕಾರ್ಯಕ್ರಮಗಳು ಸುಪ್ರಭಾತ, ಗೋಪೂಜೆ, ಸದ್ಗುರುಗಳ ಪೂಜೆಯೊಂದಿಗೆ ಸೋಮವಾರ ಆರಂಭವಾಯಿತು.
ಗುರುಪೂಜಾ ಮಹೋತ್ಸವದ ಅಂಗವಾಗಿ ದೇವಾಲಯವನ್ನು ವಿವಿಧ ಬಗೆಯ ಹೂಗಳಿಂದ ಸರ್ವಾಲಂಕೃತವಾಗಿ ಅಲಂಕರಿಸಲಾಗಿದೆ. ಮಂಗಳವಾದ್ಯಗಳೊಂದಿಗೆ ಗೋಪೂಜೆಯನ್ನು ನೆರವೇರಿಸಿ ತಾತಯ್ಯನವರ ಪ್ರಥಮ ದರ್ಶನ ಪೂಜೆಯನ್ನು ನೆರವೇರಿಸಲಾಯಿತು. ತಾತಯ್ಯನವರ ಮೂಲ ವಿಗ್ರಹವನ್ನು ವಿಶೇಷವಾಗಿ ಹೂಗಳಿಂದ ಅಲಂಕರಿಸಲಾಗಿತ್ತು.
ದೇವಾಲಯದಲ್ಲಿ ಸದ್ಗುರು ಶ್ರೀಯೋಗಿನಾರೇಯಣ ತಾತಯ್ಯನವರಿಗೆ ವಿಶೇಷ ಪಂಚಾಮೃತ ಅಭಿಷೇಕವನ್ನು ನೆರವೇರಿಸಲಾಯಿತು. ನಂತರ ಅಷ್ಟಾವಧಾನ ಸೇವೆಯನ್ನು ಸಮರ್ಪಿಸಿ ಮಹಾಮಂಗಳಾರತಿಯನ್ನು ಬೆಳಗಲಾಯಿತು. ಮೂರು ದಿನಗಳ ಕಾಲ ನಡೆಯುವ ಗುರುಪೂಜಾ ಸಂಗೀತೋತ್ಸವಕ್ಕೆ ಧರ್ಮಾಧಿಕಾರಿಗಳಾದ ಎಂ.ಆರ್. ಜಯರಾಮ್ ದಂಪತಿಗಳು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮೊದಲಿಗೆ ಧರ್ಮಾಧಿಕಾರಿಗಳಾದ ಡಾ.ಎಂ.ಆರ್.ಜಯರಾಮ್ ರವರ ನೇತೃತ್ವದಲ್ಲಿ ಸಂಕೀರ್ತನೆಯನ್ನು ಸಮರ್ಪಿಸಲಾಯಿತು. ಧರ್ಮಾಧಿಕಾರಿಗಳ ಸಂಕೀರ್ತನೆಯ ನಂತರ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯ ವಿದ್ವಾಂಸರುಗಳಿAದ ಸಂಗೀತ ಸಮರ್ಪಣೆಯಾಯಿತು. ಸ್ಠಳೀಯ ನಾದಸ್ವರ, ತವಿಲ್ ವಾದಕರಿಂದ ಸಂಗೀತ ಸಮರ್ಪಣೆಯಾಯಿತು.
ಶ್ರೀ ಯೋಗಿನಾರೇಯಣ ಸಭಾಂಗಣದಲ್ಲಿ ಸಂಗೀತ ಕಛೇರಿಗಳನ್ನು ವ್ಯವಸ್ಥೆ ಮಾಡಲಾಗಿದೆ. ಬೃಹತ್ ವೇದಿಕೆಯನ್ನು ಹಾಕಲಾಗಿದೆ. ವೇದಿಕೆಯನ್ನು ಅಮರನಾರೇಯಣಸ್ವಾಮಿ ವೇದಿಕೆ ಮತ್ತು ಶ್ರೀ ಭೀಮಲಿಂಗೇಶ್ವರ ವೇದಿಕೆ ಎಂದು ವಿಂಗಡಿಸಿ ಎರಡು ಬದಿಯಲ್ಲಿ ಸಂಗೀತಗಾರರು ಕುಳಿತು ಸಂಗೀತ ಸಮರ್ಪಣೆ ಮಾಡುವ ವ್ಯವಸ್ಥೆ ಮಾಡಲಾಗಿದೆ. ಭಜನಾ ತಂಡಗಳವರು ತಂಡ. ತಂಡವಾಗಿ ಆಗಮಿಸುತ್ತಿದ್ದಾರೆ.
ಮಧ್ಯಾಹ್ನ ನಡೆದ ಸಂಗೀತ ಕಾರ್ಯಕ್ರಮಗಳಲ್ಲಿ ಡಾ.ಶ್ರೀನಿವಾಸ್, ಟಿ.ಮಹಾತ್ಮಾಂಜನೇಯ ತಂಡ, ಎಸ್.ವಿ.ರಾಮಮೂರ್ತಿ ತಂಡ, ಕೆ.ಬೃಂದಾ ಶೈಲಜಾ ತಂಡ, ಸುಬ್ರಮಣಿ ತಂಡ, ಮಾಲೂರು ಮಂಜುನಾಥ್ ತಂಡ, ವಿದ್ಯಾ ಲತಾ, ಸಿ.ಆರ್.ನಟರಾಜ್, ಜಿ.ಎಸ್.ಬ್ರಹ್ಮೇಂದ್ರ. ವಿ.ಮಾನಸ ಕರಪನಹಳ್ಳಿ, ಸಿ.ಕಿಶೋರ್ಕುಮಾರ್ ಮುಂತಾದವರು ಸಂಗೀತ ಸಮರ್ಪಣೆ ಮಾಡಿದರು.
ಸಂಜೆ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಸಂಜೆ ವಿಶೇಷ ಕಾರ್ಯಕ್ರಮಗಳಲ್ಲಿ ದೆಹಲಿಯ ಸರಸ್ವತಿ ರಾಜಗೋಪಾಲನ್ ರವರಿಂದ ವೀಣಾವಾದನ, ಕೆ.ಕೆ.ಭಾನುಪ್ರಕಾಶ್ ಮೃದಂಗ, ಎಂ.ಕೆ.ವಾಸವಿ ಘಟಂ, ಮಹಾಲಿಂಗಯ್ಯ ಮಠದ್ ತಂಡದವರಿAದ ಗಾಯನ, ಬೆಂಗಳೂರಿನ ವಿನಯ್ಶರ್ವ ಹಾಗೂ ತಿರುಪತಿಯ ಬಿ.ರಘುನಾಥ್ ರವರುಗಳಿಂದ ಗಾಯನ, ವಿ.ಗೋವರ್ಧನ್ ಪಿಟೀಲು, ಕೆ.ಎಸ್.ಪ್ರಶಾಂತ್ ಮೃದಂಗ, ಗಿರಿನಾಥ್ ಪಿಟೀಲು, ವೇಣುಗೋಪಾಲ್ ತಬಲ ಕಾರ್ಯಕ್ರಮಗಳು ನಡೆಯಿತು.
ಬೆಳಿಗ್ಗೆ ನಾದಸ್ವರ ವಾದನಗಳನ್ನು ಎರ್ಪಡಿಸಲಾಗಿದೆ. ಎಂ.ವೇಣುಮಾಧವ್, ವಿ.ಭಾಗ್ಯಲಕ್ಷಿ್ಮ, ಡಾ.ಎಂ.ವಿ.ಶ್ರೀನಿವಾಸ ಮೂರ್ತಿ, ಹೆಚ್.ಎನ್.ಶ್ರೀನಿವಾಸ್ ತಂಡ, ನಿಖಿತಾ ಮೋಕ್ಷಗುಂಡ ತಂಡ, ಎನ್.ಎಸ್.ವೇಣುಗೋಪಾಲ್ ತಂಡ, ಈ.ರಾಮಕೃಷ್ಣಾಚಾರ್, ಬಿ.ರಾಮಚಂದ್ರ, ಜಿ.ವೇಣುಗೋಪಾಲ್, ಕೆ.ಎಸ್.ಶ್ವೇತಾ, ಸಿ.ಸೋಮಶೇಖರ್, ಡಾ.ಅಶ್ವಿನಿ ಮೋಹನ್, ಬಿ.ಅಮರಶ್ರೀ ನಾಗಾರ್ಜುನ್, ಆಶಾಮಂಜುನಾಥ್, ವಿಷ್ಣು ವೆಂಕಟೇಶ್, ಮುರಳಿ, ಮೀರಾ ವಿಜಯ್ ಕುಮಾರ್ ತಂಡ, ಜಯಲಕ್ಷಿಭಟ್, ಕಮಲಾದೀಪ್ತಿ, ಎ.ವಿ.ವಿಶ್ವನಾಥ್, ಕೆ.ಎಸ್.ನಾಗಭೂಷಣಯ್ಯ, ಕೃಷ್ಣ ಹೊಸೂರು, ರೇವತಿ ಕಾಮತ್ ಮುಂತಾದವರಿ0ದ ಸಂಗೀತ ಕಾರ್ಯಕ್ರಮವಿರುತ್ತದೆ.
ಜುಲೈ ೨೮ ರಂದು ಸುಮಂತ್ ಹಾಗೂ ಮಾಳವಿರವರಿಂದ ಪಿಟೀಲು ಸೋಲೋ, ಶಂಕರ್ ನಂಬೂದರಿ ರವರಿಂದ ಗಾಯನ, ಅಮಿತ್ ಎ.ನಾಡಿಗ್ ರವರಿಂದ ಕೊಳಲುವಾದನ, ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾದ ಗೊಲ್ಲಹಳ್ಳಿ ಶಿವಪ್ರಸಾದ್ ತಂಡದವರಿAದ ಗಾಯನ, ಹೈದ್ರಾಬಾದ್ನ ಎಸ್.ಎಂ.ಸುಭಾನಿರವರಿAದ ಮ್ಯಾಂಡೋಲಿನ್ ವಾದನ, ನೂಪುರ ಫೈನ್ ಆರ್ಟ್ಸ್ ರೂಪಾರಾಜೇಶ್ ತಂಡದವರಿAದ ಕೂಚಿಪುಡಿ ನೃತ್ಯವನ್ನು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್