ಕಾಲಡಿಯ ಕಣ್ಣು ಆತ್ಮಕಥನಕ್ಕೆ ಉತ್ತಮ ಸ್ಪಂದನೆ
ದ್ವಿತೀಯ ಮುದ್ರಣ ಕಂಡ ಸಿ.ಎಂ.ಮುನಿಯಪ್ಪನವರ ಕಾಲಡಿಯ ಕಣ್ಣು ಕೃತಿ
ಸಿ.ಎಂ.ಮುನಿಯಪ್ಪನವರ ಕಾಲಡಿಯ ಕಣ್ಣು ಕೃತಿ


ಕೋಲಾರ, ಜು.೨೭ (ಹಿ.ಸ):

ಆ್ಯಂಕರ್: ದಲಿತ ಚಳವಳಿಯ ಹಿರಿಯ ನಾಯಕ ಸಿ.ಎಂ. ಮುನಿಯಪ್ಪ ಅವರ ಆತ್ಮಕಥನ ‘ಕಾಲಡಿಯ ಕಣ್ಣು’ ಪುಸ್ತಕವು ಬಿಡುಗಡೆಯಾದ ಕೇವಲ 15 ದಿನಗಳಲ್ಲೇ ಎರಡನೇ ಮುದ್ರಣ ಕಂಡು ಓದುಗರಿಂದ ಉತ್ತಮ ಸ್ಪಂದನೆ ಪಡೆದಿದೆ.

ಜುಲೈ 10ರಂದು ಮುಂಗೋಳಿ ಪ್ರಕಾಶನದಿಂದ ಸಾವಿರ ಪ್ರತಿಗಳ ಮೊದಲ ಮುದ್ರಣ ಬಿಡುಗಡೆಯಾಗಿದ್ದು, ಅಲ್ಪಾವಧಿಯಲ್ಲೇ ಎಲ್ಲಾ ಪ್ರತಿಗಳು ಮಾರಾಟವಾಗಿವೆ. ರಾಜ್ಯದ ವಿವಿಧ ಭಾಗಗಳಿಂದ ಹೆಚ್ಚಿದ ಬೇಡಿಕೆಯ ಹಿನ್ನೆಲೆಯಲ್ಲಿ ಮತ್ತೊಂದು ಸಾವಿರ ಪ್ರತಿಗಳನ್ನು ಮುದ್ರಿಸಲಾಗಿದೆ.

ನಾಲ್ಕು ದಶಕಗಳ ದಲಿತ ಚಳವಳಿಯ ಅನುಭವ, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಐತಿಹಾಸಿಕ ಹೋರಾಟಗಳು ಹಾಗೂ ದಮನಿತ ಸಮುದಾಯದ ಬದುಕಿನ ಚಿತ್ರಣವನ್ನು ಒಳಗೊಂಡಿರುವ ಈ ಕೃತಿ ದಲಿತ ಸಮುದಾಯದ ಜೀವನಗಾಥೆಯಾಗಿ ಮೂಡಿಬಂದಿದೆ.

ಸಾವಿರಾರು ವರ್ಷಗಳಿಂದ ಅಕ್ಷರ ಸಂಸ್ಕೃತಿಯಿಂದ ವಂಚಿತವಾಗಿದ್ದ ಸಮುದಾಯದ ಬದುಕಿನ ಕಥನವನ್ನು ಕನ್ನಡದ ಓದುಗರು ಆತ್ಮೀಯವಾಗಿ ಸ್ವೀಕರಿಸಿರುವುದು ಸ್ವಾಭಿಮಾನ ಮತ್ತು ಸಮಾನತೆಯ ಹೋರಾಟಕ್ಕೆ ಸಂದ ದೊಡ್ಡ ಮನ್ನಣೆ ಎಂದು ಕೃತಿಕಾರ ಸಿ.ಎಂ. ಮುನಿಯಪ್ಪ ಅಭಿಪ್ರಾಯಪಟ್ಟಿದ್ದಾರೆ.

ಪುಸ್ತಕ ಬಿಡುಗಡೆಯಾದ ನಂತರ ರಾಜ್ಯದ ವಿವಿಧೆಡೆಯ ದಲಿತ ಚಳವಳಿಯ ಹಿರಿಯರು, ಸಾಹಿತಿಗಳು, ಯುವಕರು ಹಾಗೂ ವಿದ್ಯಾರ್ಥಿಗಳು ಕೃತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ದಲಿತ ಚಳವಳಿಯ ಇತಿಹಾಸ ಮತ್ತು ನೈಜ ಘಟನೆಗಳನ್ನು ಪರಿಣಾಮಕಾರಿಯಾಗಿ ದಾಖಲಿಸಿರುವ ಕೃತಿ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಎರಡನೇ ಮುದ್ರಣಕ್ಕೆ ಕಾರಣರಾದ ಎಲ್ಲ ಓದುಗರಿಗೆ ಕೃತಿಕಾರ ಸಿ.ಎಂ. ಮುನಿಯಪ್ಪ ಕೃತಜ್ಞತೆ ಸಲ್ಲಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande