
ನವದೆಹಲಿ, ಜುಲೈ 27(ಹಿ.ಸ.):
ಆ್ಯಂಕರ್:
ಉತ್ತಮ ವ್ಯಕ್ತಿತ್ವ ಹೊಂದಿದ ವ್ಯಕ್ತಿಗೆ ಸಮಾಜದಲ್ಲಿ ಗೌರವ, ಸಜ್ಜನರಿಂದ ಆದರ ಹಾಗೂ ಎಲ್ಲ ಜವಾಬ್ದಾರಿಗಳನ್ನು ನಿರ್ವಹಿಸುವ ಅರ್ಹತೆ ದೊರೆಯುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಂಸ್ಕೃತದ ಸುಭಾಷಿತವನ್ನು ಹಂಚಿಕೊಂಡಿರುವ ಅವರು, ಪ್ರಾಮಾಣಿಕತೆ, ವಿನಯ ಮತ್ತು ಶಿಸ್ತಿನ ನಡವಳಿಕೆ ವ್ಯಕ್ತಿಯನ್ನು ಎಲ್ಲ ಕಾರ್ಯಗಳಿಗೆ ಯೋಗ್ಯನನ್ನಾಗಿಸುತ್ತದೆ ಎಂದು ತಿಳಿಸಿದ್ದಾರೆ.
ಉತ್ತಮ ವ್ಯಕ್ತಿತ್ವ ಹೊಂದಿರುವವರ ನಡೆ-ನುಡಿ ಇತರರಿಗೆ ಪ್ರೇರಣೆಯಾಗಿದ್ದು, ಶಾಶ್ವತ ಯಶಸ್ಸು, ಪರಿಣಾಮಕಾರಿ ನಾಯಕತ್ವ ಹಾಗೂ ದೀರ್ಘಕಾಲದ ನಂಬಿಕೆಗೆ ಉತ್ತಮ ವ್ಯಕ್ತಿತ್ವವೇ ಬಲವಾದ ಅಡಿಪಾಯವಾಗಿದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದಾರೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.