ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಬಂಧನ ಖಂಡನೀಯ; ನೀಡಿದ ಭರವಸೆಯನ್ನು ಸರ್ಕಾರ ಉಳಿಸಿಕೊಳ್ಳಲಿ: ಸಿಜೆಪಿ ವಕ್ತಾರ ಸೌರವ್ ದಾಸ್
ನವದೆಹಲಿ, 27 ಜುಲೈ (ಹಿ.ಸ.):. ಆ್ಯಂಕರ್: ದೇಶದಲ್ಲಿ ನಡೆಯುತ್ತಿರುವ ವಿದ್ಯಾರ್ಥಿ ಹೋರಾಟಗಳು ಹಾಗೂ ಪ್ರತಿಭಟನೆಗಳಲ್ಲಿ ಪಾಲ್ಗೊಂಡವರ ವಿರುದ್ಧ ವಿವಿಧ ಸರ್ಕಾರಿ ಸಂಸ್ಥೆಗಳು ತೆಗೆದುಕೊಂಡ ಕ್ರಮದ ಬಗ್ಗೆ ''ಕಾಕ್ರೋಚ್ ಜನತಾ ಪಾರ್ಟಿ'' (ಸಿಜೆಪಿ) ಸಂಘಟನೆಯ ವಕ್ತಾರ ಸೌರವ್ ದಾಸ್ ತೀವ್ರ ಕಳವಳ ವ್ಯಕ್ತಪಡ
ಸಂದರ್ಭಿಕ ಚಿತ್ರ


ನವದೆಹಲಿ, 27 ಜುಲೈ (ಹಿ.ಸ.):.

ಆ್ಯಂಕರ್:

ದೇಶದಲ್ಲಿ ನಡೆಯುತ್ತಿರುವ ವಿದ್ಯಾರ್ಥಿ ಹೋರಾಟಗಳು ಹಾಗೂ ಪ್ರತಿಭಟನೆಗಳಲ್ಲಿ ಪಾಲ್ಗೊಂಡವರ ವಿರುದ್ಧ ವಿವಿಧ ಸರ್ಕಾರಿ ಸಂಸ್ಥೆಗಳು ತೆಗೆದುಕೊಂಡ ಕ್ರಮದ ಬಗ್ಗೆ 'ಕಾಕ್ರೋಚ್ ಜನತಾ ಪಾರ್ಟಿ' (ಸಿಜೆಪಿ) ಸಂಘಟನೆಯ ವಕ್ತಾರ ಸೌರವ್ ದಾಸ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣ 'ಎಕ್ಸ್' ಮೂಲಕ ಪ್ರತಿಕ್ರಿಯೆ ನೀಡಿರುವ ಅವರು, ಅಸ್ಸಾಂ, ಪಶ್ಚಿಮ ಬಂಗಾಳ ಹಾಗೂ ಬಿಹಾರ ಸೇರಿದಂತೆ ಹಲವು ರಾಜ್ಯಗಳಲ್ಲಿ ವಿದ್ಯಾರ್ಥಿಗಳು ಮತ್ತು ಪ್ರತಿಭಟನಾಕಾರರನ್ನು ಗುರಿಯಾಗಿಸಿ ಬಂಧಿಸುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಸರ್ಕಾರವು ನೀಡಿದ ಭರವಸೆಯ ಮೇರೆಗೆ ತಾವು ದೇಶವ್ಯಾಪಿ ಪ್ರತಿಭಟನೆಯನ್ನು ಹಿಂಪಡೆದಿದ್ದೆವು ಎಂದು ಅವರು ಹೇಳಿದ್ದಾರೆ.

ಬಂಧನಕ್ಕೊಳಗಾದ ಪ್ರತಿಭಟನಾಕಾರರ ಬಿಡುಗಡೆಗೆ ಆಗಬೇಕು, ಹಾಗೂ ಅವರಿಗೆ ಅಗತ್ಯವಿರುವ ಪ್ರತಿಯೊಬ್ಬರಿಗೂ ನೆರವು ನೀಡಲು ಆಯಾ ರಾಜ್ಯಗಳ ಪ್ರಮುಖ ವಕೀಲರನ್ನೊಳಗೊಂಡ ನಮ್ಮ ಕಾನೂನು ತಂಡ ರಚನೆ ಮಾಡುವಂತೆ ಆಗ್ರಹಿಸದ್ದಾರೆ

ಕೇಂದ್ರ ಸರ್ಕಾರಕ್ಕೆ ಮನವಿ: ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ತಮಗೆ ನೀಡಿದ್ದ ಭರವಸೆಯನ್ನು ಈ ಕೂಡಲೇ ಈಡೇರಿಸಬೇಕು.

ವಶಕ್ಕೆ ಪಡೆದಿರುವ ಎಲ್ಲರನ್ನೂ ತಕ್ಷಣವೇ ಬಿಡುಗಡೆಗೊಳಿಸಬೇಕು ಮತ್ತು ಯಾರೊಬ್ಬರ ಮೇಲೂ ಸೇಡಿನ ಕ್ರಮ ಜರುಗಿಸಬಾರದು ಎಂದು ಆಗ್ರಹಿಸಿದ್ದಾರೆ. ಪ್ರತಿಭಟನಾಕಾರರ ವಿರುದ್ಧ ದಾಖಲಿಸಲಾಗಿರುವ ಎಲ್ಲ ಎಫ್ಐಆರ್ಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ಸರ್ಕಾರದ ಮಾತಿನ ಮೇಲೆ ನಂಬಿಕೆ ಇಟ್ಟು ದೇಶವ್ಯಾಪಿ ಪ್ರತಿಭಟನೆಯನ್ನು ಕೈಬಿಡಲಾಗಿತ್ತು. ಈಗ ಆ ಭರವಸೆಯಿಂದ ಹಿಂದೆ ಸರಿದರೆ ಅದು ಕೇವಲ ಸಿಜೆಪಿ ಪಕ್ಷಕ್ಕೆ ಮಾಡಿದ ದ್ರೋಹ ಮಾತ್ರವಲ್ಲ, ಬದಲಿಗೆ ಹಿಂಸಾಚಾರದ ಬದಲು ಸಂಧಾನದ ಮಾರ್ಗ ಹಿಡಿದ ಲಕ್ಷಾಂತರ ಯುವ ಭಾರತೀಯರ ವಿಶ್ವಾಸಕ್ಕೆ ಬಗೆದ ದ್ರೋಹವಾಗಲಿದೆ ಎಂದು ಸೌರವ್ ದಾಸ್ ಎಚ್ಚರಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / NAVEEN PARADESHII


 rajesh pande