ರುಚಿ ಮತ್ತು ಸುವಾಸನೆಯ ಸೊಗಡು ಚೋಲೆ ಭಟೂರೆ
ಬೆಂಗಳೂರು, 24 ಜುಲೈ (ಹಿ.ಸ.): ಆ್ಯಂಕರ್:ಉತ್ತರ ಭಾರತದ ಜನಪ್ರಿಯ ಖಾದ್ಯವಾದ ಚೋಲೆ ಭಟೂರೆ ಇಂದು ದೇಶದಾದ್ಯಂತ ಎಲ್ಲರ ಮೆಚ್ಚಿನ ಆಹಾರವಾಗಿದೆ. ಮಸಾಲೆಯ ಸುವಾಸನೆಯಿಂದ ಕೂಡಿದ ಚೋಲೆ ಮತ್ತು ಎಣ್ಣೆಯಲ್ಲಿ ಉಬ್ಬಿ ಕರಿದ ಮೃದುವಾದ ಭಟೂರೆ ಒಂದಾಗಿ ಸವಿದರೆ ಅದರ ರುಚಿಯೇ ವಿಭಿನ್ನ. ಚೋಲೆ ತಯಾರಿಸಲು ರಾತ್ರಿ ನೆ
ಚೋಲೆ ಭಟೂರೆ


ಬೆಂಗಳೂರು, 24 ಜುಲೈ (ಹಿ.ಸ.):

ಆ್ಯಂಕರ್:ಉತ್ತರ ಭಾರತದ ಜನಪ್ರಿಯ ಖಾದ್ಯವಾದ ಚೋಲೆ ಭಟೂರೆ ಇಂದು ದೇಶದಾದ್ಯಂತ ಎಲ್ಲರ ಮೆಚ್ಚಿನ ಆಹಾರವಾಗಿದೆ. ಮಸಾಲೆಯ ಸುವಾಸನೆಯಿಂದ ಕೂಡಿದ ಚೋಲೆ ಮತ್ತು ಎಣ್ಣೆಯಲ್ಲಿ ಉಬ್ಬಿ ಕರಿದ ಮೃದುವಾದ ಭಟೂರೆ ಒಂದಾಗಿ ಸವಿದರೆ ಅದರ ರುಚಿಯೇ ವಿಭಿನ್ನ.

ಚೋಲೆ ತಯಾರಿಸಲು ರಾತ್ರಿ ನೆನೆಸಿದ ಕಡಲೆಯನ್ನು ಚೆನ್ನಾಗಿ ಬೇಯಿಸಿ, ಈರುಳ್ಳಿ, ಟೊಮೇಟೊ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಗೂ ಮಸಾಲೆ ಪದಾರ್ಥಗಳೊಂದಿಗೆ ಹುರಿದು ಸೇರಿಸಿ ಸಣ್ಣ ಉರಿಯಲ್ಲಿ ಕುದಿಸಲಾಗುತ್ತದೆ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಸೇರಿಸಿದರೆ ಚೋಲೆ ಸವಿಗೆ ಸಿದ್ಧವಾಗುತ್ತದೆ.

ಭಟೂರೆಗಾಗಿ ಮೈದಾ, ರವೆ, ಮೊಸರು, ಉಪ್ಪು, ಸಕ್ಕರೆ, ಬೇಕಿಂಗ್ ಪೌಡರ್ ಮತ್ತು ಸ್ವಲ್ಪ ಎಣ್ಣೆ ಸೇರಿಸಿ ಮೃದುವಾದ ಹಿಟ್ಟನ್ನು ಕಲಸಿ ಸುಮಾರು ಎರಡು ಗಂಟೆಗಳ ಕಾಲ ನೆನೆಸಿಡಬೇಕು. ಬಳಿಕ ಉಂಡೆಗಳಾಗಿ ಮಾಡಿ ಲಟ್ಟಿಸಿ ಬಿಸಿ ಎಣ್ಣೆಯಲ್ಲಿ ಉಬ್ಬಿ ಬಂಗಾರದ ಬಣ್ಣ ಬರುವವರೆಗೆ ಕರಿಯಬೇಕು.

ಬಿಸಿ ಬಿಸಿ ಭಟೂರೆಯೊಂದಿಗೆ ಚೋಲೆ, ಈರುಳ್ಳಿ ಮತ್ತು ನಿಂಬೆ ತುಂಡುಗಳನ್ನು ಸೇರಿಸಿ ಬಡಿಸಿದರೆ ಊಟದ ರುಚಿ ಮತ್ತಷ್ಟು ಹೆಚ್ಚುತ್ತದೆ. ಕುಟುಂಬದೊಂದಿಗೆ ವಾರಾಂತ್ಯದ ವಿಶೇಷ ಊಟವಾಗಲಿ ಅಥವಾ ಅತಿಥಿಗಳ ಆತಿಥ್ಯವಾಗಲಿ, ಚೋಲೆ ಭಟೂರೆ ಎಲ್ಲರ ಮನಗೆಲ್ಲುವ ಖಾದ್ಯವಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande