ಭಾರತ–ಬ್ರಿಟನ್ ಮುಕ್ತ ವ್ಯಾಪಾರ ಒಪ್ಪಂದ ಐತಿಹಾಸಿಕ ಮೈಲಿಗಲ್ಲು: ಪಿಯೂಷ್ ಗೋಯಲ್
ನವದೆಹಲಿ, 15 ಜುಲೈ (ಹಿ.ಸ.): ಆ್ಯಂಕರ್: ಭಾರತ–ಬ್ರಿಟನ್ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದ (ಸಿಇಟಿಎ) ಹಾಗೂ ಸಾಮಾಜಿಕ ಭದ್ರತಾ ಒಪ್ಪಂದ ಜಾರಿಗೆ ಬಂದಿರುವುದು ಭಾರತ–ಬ್ರಿಟನ್ ಸಂಬಂಧಗಳಲ್ಲಿ ಮಹತ್ವದ ಮೈಲಿಗಲ್ಲಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರ
Goyal X post


ನವದೆಹಲಿ, 15 ಜುಲೈ (ಹಿ.ಸ.):

ಆ್ಯಂಕರ್:

ಭಾರತ–ಬ್ರಿಟನ್ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದ (ಸಿಇಟಿಎ) ಹಾಗೂ ಸಾಮಾಜಿಕ ಭದ್ರತಾ ಒಪ್ಪಂದ ಜಾರಿಗೆ ಬಂದಿರುವುದು ಭಾರತ–ಬ್ರಿಟನ್ ಸಂಬಂಧಗಳಲ್ಲಿ ಮಹತ್ವದ ಮೈಲಿಗಲ್ಲಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.

ಎಕ್ಸ್‌ನಲ್ಲಿ ಪ್ರಕಟಿಸಿದ ಸಂದೇಶದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಜಾರಿಗೆ ಬಂದಿರುವ ಈ ಒಪ್ಪಂದದಿಂದ ಭಾರತದ ಸುಮಾರು ಶೇ.99ರಷ್ಟು ರಫ್ತು ಉತ್ಪನ್ನಗಳಿಗೆ ಸುಂಕಮುಕ್ತ ಮಾರುಕಟ್ಟೆ ಪ್ರವೇಶ ದೊರೆಯಲಿದ್ದು, ಇದು ದೇಶದ ಒಟ್ಟು ವ್ಯಾಪಾರದ ಮೌಲ್ಯದ ಸುಮಾರು ಶೇ.100ರಷ್ಟನ್ನು ಒಳಗೊಂಡಿದೆ ಎಂದು ಹೇಳಿದರು.

ಈ ಒಪ್ಪಂದದಿಂದ ಜವಳಿ, ಚರ್ಮ, ರತ್ನಾಭರಣ, ಎಂಜಿನಿಯರಿಂಗ್ ಉತ್ಪನ್ನಗಳು, ಸಮುದ್ರ ಆಹಾರ, ರಾಸಾಯನಿಕಗಳು, ಸಂಸ್ಕರಿತ ಆಹಾರ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು, ರೈತರು ಹಾಗೂ ಉತ್ಪಾದನಾ ವಲಯಕ್ಕೆ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ. ಮಾಹಿತಿ ತಂತ್ರಜ್ಞಾನ, ವೃತ್ತಿಪರ, ಹಣಕಾಸು, ಶಿಕ್ಷಣ ಮತ್ತು ವ್ಯಾಪಾರ ಸೇವಾ ಕ್ಷೇತ್ರಗಳಿಗೂ ಹೆಚ್ಚಿನ ಅವಕಾಶಗಳು ಲಭ್ಯವಾಗಲಿದ್ದು, ಭಾರತೀಯ ಪ್ರತಿಭೆಗಳಿಗೆ ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಸಂಚಾರ ಮತ್ತು ಉದ್ಯೋಗ ಅವಕಾಶಗಳು ವಿಸ್ತರಿಸಲಿವೆ ಎಂದು ತಿಳಿಸಿದ್ದಾರೆ.

ಸಾಮಾಜಿಕ ಭದ್ರತಾ ಒಪ್ಪಂದದಡಿ ತಾತ್ಕಾಲಿಕವಾಗಿ ಬ್ರಿಟನ್‌ನಲ್ಲಿ ಕೆಲಸ ಮಾಡುವ ಭಾರತೀಯ ವೃತ್ತಿಪರರಿಗೆ ಐದು ವರ್ಷಗಳವರೆಗೆ ದ್ವಿತೀಯ ಸಾಮಾಜಿಕ ಭದ್ರತಾ ಕೊಡುಗೆಗಳಿಂದ ವಿನಾಯಿತಿ ದೊರೆಯಲಿದ್ದು, ಇದರಿಂದ ಭಾರತೀಯ ಉದ್ಯೋಗಿಗಳ ಜಾಗತಿಕ ಸ್ಪರ್ಧಾತ್ಮಕತೆ ಹೆಚ್ಚಲಿದೆ ಎಂದು ಅವರು ಹೇಳಿದ್ದಾರೆ.

ಈ ಐತಿಹಾಸಿಕ ಒಪ್ಪಂದ ಯಶಸ್ವಿಯಾಗಲು ಸಹಕರಿಸಿದ ಬ್ರಿಟನ್‌ನ ತಮ್ಮ ಸಹೋದ್ಯೋಗಿ ಪೀಟರ್ ಕೈಲ್ ಹಾಗೂ ಎರಡೂ ದೇಶಗಳ ಮಾತುಕತೆ ತಂಡಗಳಿಗೆ ಪಿಯೂಷ್ ಗೋಯಲ್ ಕೃತಜ್ಞತೆ ಸಲ್ಲಿಸಿದ್ದಾರೆ. ಜೊತೆಗೆ, ಬೆಳವಣಿಗೆ, ಹೂಡಿಕೆ ಮತ್ತು ಪರಸ್ಪರ ಸಮೃದ್ಧಿಗೆ ದಾರಿ ಮಾಡುವ ನವೋದ್ಯಮ ಆಧಾರಿತ ಬಲಿಷ್ಠ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸುವ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande