ದಕ್ಷಿಣ ಇರಾನ್ ಮೇಲೆ ಅಮೆರಿಕ ದಾಳಿ; ಬಂದರು ನಗರಗಳು, ಕೇಶ್ಮ್ ದ್ವೀಪದಲ್ಲಿ ಸ್ಫೋಟ
ತೆಹ್ರಾನ್/ವಾಷಿಂಗ್ಟನ್, 13 ಜುಲೈ (ಹಿ.ಸ.): ಆ್ಯಂಕರ್: ಹೋರ್ಮುಜ್ ಜಲಸಂಧಿಯನ್ನು ಕೇಂದ್ರವಾಗಿಸಿಕೊಂಡು ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಮತ್ತಷ್ಟು ತೀವ್ರಗೊಂಡಿದೆ. ಅಮೆರಿಕ ಸೇನೆ ದಕ್ಷಿಣ ಇರಾನ್‌ನ ಬಂದರ್ ಅಬ್ಬಾಸ್, ಸಿರಿಕ್, ಜಾಸ್ಕ್ ಬಂದರು ನಗರಗಳು ಹಾಗೂ ಕೇಶ್ಮ್ ದ್ವೀಪದ ಮೇಲೆ ದಾಳಿ ನ
ಇರಾನ್ ಮೇಲೆ ಅಮೆರಿಕ ದಾಳಿ


ತೆಹ್ರಾನ್/ವಾಷಿಂಗ್ಟನ್, 13 ಜುಲೈ (ಹಿ.ಸ.):

ಆ್ಯಂಕರ್:

ಹೋರ್ಮುಜ್ ಜಲಸಂಧಿಯನ್ನು ಕೇಂದ್ರವಾಗಿಸಿಕೊಂಡು ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಮತ್ತಷ್ಟು ತೀವ್ರಗೊಂಡಿದೆ. ಅಮೆರಿಕ ಸೇನೆ ದಕ್ಷಿಣ ಇರಾನ್‌ನ ಬಂದರ್ ಅಬ್ಬಾಸ್, ಸಿರಿಕ್, ಜಾಸ್ಕ್ ಬಂದರು ನಗರಗಳು ಹಾಗೂ ಕೇಶ್ಮ್ ದ್ವೀಪದ ಮೇಲೆ ದಾಳಿ ನಡೆಸಿದ್ದು, ಹಲವು ಕಡೆ ಭಾರೀ ಸ್ಫೋಟಗಳು ಸಂಭವಿಸಿವೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೋರ್ಮುಜ್ ಜಲಸಂಧಿ ಸಂಚಾರಕ್ಕೆ ಮುಕ್ತವಾಗಿದೆ ಎಂದು ಹೇಳಿದರೆ, ಇರಾನ್‌ನ ಫಾರ್ಸ್ ಕೊಲ್ಲಿ ಜಲಸಂಧಿ ಪ್ರಾಧಿಕಾರವು ಪರಿಸ್ಥಿತಿ ಸಹಜವಾಗುವವರೆಗೆ ಹಡಗುಗಳ ಸಂಚಾರಕ್ಕೆ ಅನುಮತಿ ಇಲ್ಲ ಎಂದು ತಿಳಿಸಿದೆ.

ಅಮೆರಿಕ ಸೇನೆ, ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ವಾಣಿಜ್ಯ ಹಡಗಿನ ಮೇಲೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಪ್ರತಿದಾಳಿ ನಡೆಸಲಾಗಿದೆ ಎಂದು ಹೇಳಿದೆ. ಅಮೆರಿಕದ ಪ್ರಕಾರ, ಐಆರ್‌ಜಿಸಿ ಹೋರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಮೇಲೆ ನಿರಂತರ ದಾಳಿ ನಡೆಸುತ್ತಿದೆ.

ಅಮೆರಿಕದ ಮಧ್ಯ ಕಮಾಂಡ್ ವಕ್ತಾರ ಕ್ಯಾಪ್ಟನ್ ಟಿಮ್ ಹಾಕಿನ್ಸ್, ಇರಾನ್ ಉಡಾಯಿಸಿದ್ದ ಒಂದು ಕ್ರೂಸ್ ಕ್ಷಿಪಣಿ ಹಾಗೂ ಒಂದು ಆತ್ಮಹತ್ಯಾ ಡ್ರೋನ್ ಅನ್ನು ಹೊಡೆದುರುಳಿಸಲಾಗಿದೆ ಎಂದು ತಿಳಿಸಿದ್ದಾರೆ. ಅಮೆರಿಕದ ದಾಳಿಯ ಉದ್ದೇಶ ಇರಾನ್‌ನ ಸೇನಾ ಸಾಮರ್ಥ್ಯವನ್ನು ದುರ್ಬಲಗೊಳಿಸುವುದಾಗಿದೆ ಎಂದಿದ್ದಾರೆ.

ಇದರ ಮಧ್ಯೆ, ಇರಾನ್‌ನ ಖುಜೆಸ್ತಾನ್ ಪ್ರಾಂತ್ಯದ ಮಾಹ್‌ಶಹರ್ ಪ್ರದೇಶದಲ್ಲಿ ಕ್ಷಿಪಣಿ ದಾಳಿಯಿಂದ ನೀರಾವರಿ ಪಂಪ್ ಕೇಂದ್ರಕ್ಕೆ ಹಾನಿಯಾಗಿದ್ದು, ಒಬ್ಬರು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ ಎಂದು ಇರಾನ್ ಅಧಿಕಾರಿಗಳು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande