
ತೆಹ್ರಾನ್, 12 ಜುಲೈ (ಹಿ.ಸ.):
ಆ್ಯಂಕರ್:ಅಮೆರಿಕ ತನ್ನ ಸೇನಾ ಹಸ್ತಕ್ಷೇಪವನ್ನು ಸಂಪೂರ್ಣವಾಗಿ ನಿಲ್ಲಿಸುವವರೆಗೆ ಹೋರ್ಮುಜ್ ಜಲಸಂಧಿಯನ್ನು ತೆರೆಯುವುದಿಲ್ಲ ಎಂದು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ನೌಕಾಪಡೆ ಘೋಷಿಸಿದೆ. ಪ್ರಾದೇಶಿಕ ಭದ್ರತಾ ಪರಿಸ್ಥಿತಿ ಹಾಗೂ ವಿದೇಶಿ ಸೇನಾ ಚಟುವಟಿಕೆಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.
ಇರಾನ್‌ನ ಸರ್ಕಾರಿ ಮಾಧ್ಯಮ ಪ್ರೆಸ್ ಟಿವಿ ವರದಿ ಪ್ರಕಾರ, ಐಆರ್‌ಜಿಸಿ ಭಾನುವಾರ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ, ಮುಂದಿನ ಆದೇಶದವರೆಗೆ ಹೋರ್ಮುಜ್ ಜಲಸಂಧಿ ಮುಚ್ಚಿರಲಿದೆ. ಅಮೆರಿಕ ಈ ಪ್ರದೇಶದಲ್ಲಿನ ತನ್ನ ಸೇನಾ ಹಸ್ತಕ್ಷೇಪವನ್ನು ನಿಲ್ಲಿಸುವವರೆಗೆ ಜಲಸಂಧಿಯನ್ನು ತೆರೆಯುವುದಿಲ್ಲ. ಯಾವುದೇ ಹಡಗು ಈ ಮಾರ್ಗದಲ್ಲಿ ಸಂಚರಿಸಲು ಅನುಮತಿ ಇರುವುದಿಲ್ಲ ಎಂದು ತಿಳಿಸಿದೆ.
ಇರಾನ್ ವಿರುದ್ಧ ಹೊಸ ಸೇನಾ ಕಾರ್ಯಾಚರಣೆ ನಡೆಸಲು ಈ ಪರಿಸ್ಥಿತಿಯನ್ನು ನೆಪವನ್ನಾಗಿ ಮಾಡಿಕೊಂಡರೆ ಅದಕ್ಕೆ ಕಠಿಣ ಮತ್ತು ನಿರ್ಣಾಯಕ ಉತ್ತರ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಯಾವುದೇ ಸಂಭವನೀಯ ಸಂಘರ್ಷಕ್ಕೆ ಅಮೆರಿಕ, ಇಸ್ರೇಲ್ ಹಾಗೂ ಇರಾನ್ ವಿರುದ್ಧದ ಸೇನಾ ಕಾರ್ಯಾಚರಣೆಗಳಿಗೆ ತಮ್ಮ ನೆಲೆಗಳನ್ನು ಒದಗಿಸುವ ರಾಷ್ಟ್ರಗಳೇ ನೇರ ಹೊಣೆಗಾರರಾಗಿರುತ್ತವೆ ಎಂದು ಐಆರ್‌ಜಿಸಿ ಎಚ್ಚರಿಸಿದೆ..
ಇತ್ತೀಚೆಗೆ ಇರಾನ್‌ನ ಸೂಚನೆಗಳನ್ನು ನಿರ್ಲಕ್ಷಿಸಿದ ಹಡಗೊಂದು ತನ್ನ ಮೇಲ್ವಿಚಾರಣಾ (ಟ್ರ್ಯಾಕಿಂಗ್) ವ್ಯವಸ್ಥೆಯನ್ನು ಸ್ಥಗಿತಗೊಳಿಸಿದ್ದರಿಂದ ಸಮುದ್ರ ಭದ್ರತೆಗೆ ಅಪಾಯ ಉಂಟಾಯಿತು. ಈ ಹಿನ್ನೆಲೆಯಲ್ಲಿ ಎಚ್ಚರಿಕೆಯಾಗಿ ಗುಂಡು ಹಾರಿಸಲಾಗಿತ್ತು ಎಂದು ಐಆರ್‌ಜಿಸಿ ತಿಳಿಸಿದೆ.
ಹೋರ್ಮುಜ್ ಜಲಸಂಧಿಯಲ್ಲಿ ವಿದೇಶಿ ಹಸ್ತಕ್ಷೇಪ ಹಾಗೂ ಹಡಗು ಮಾರ್ಗಗಳ ಅನಧಿಕೃತ ನಿಯಂತ್ರಣಕ್ಕೆ ಇರಾನ್ ನಿರ್ಣಾಯಕ ಕ್ರಮ ಕೈಗೊಳ್ಳಲಿದೆ ಎಂಬ ಹಿಂದಿನ ಎಚ್ಚರಿಕೆಯನ್ನು ಮತ್ತೊಮ್ಮೆ ಪುನರುಚ್ಚರಿಸಿದೆ.
ಫೆಬ್ರವರಿ 28ರ ನಂತರ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಗಳ ಹಿನ್ನೆಲೆಯಲ್ಲಿ ಇರಾನ್ ಈ ಪ್ರಮುಖ ಜಲಮಾರ್ಗವನ್ನು ಮುಚ್ಚಿತ್ತು. ಬಳಿಕ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ನ ಹಡಗುಗಳು ಮತ್ತು ಬಂದರುಗಳ ವಿರುದ್ಧದ ನೌಕಾ ನಿರ್ಬಂಧ ಮುಂದುವರಿಯುವುದಾಗಿ ಘೋಷಿಸಿದ ನಂತರ ಇರಾನ್ ಇನ್ನಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತಂದಿತ್ತು. ಇದೇ ವೇಳೆ ಏಪ್ರಿಲ್ 7ರಂದು ಯುದ್ಧ ವಿರಾಮ ಘೋಷಿಸಲಾಗಿತ್ತು.
ಮೇ ತಿಂಗಳಲ್ಲಿ ಹೋರ್ಮುಜ್ ಜಲಸಂಧಿಯ ಸಮುದ್ರ ಸಂಚಾರವನ್ನು ನಿಯಂತ್ರಿಸಲು ಇರಾನ್ ಹೊಸ ಅಧಿಕೃತ ವ್ಯವಸ್ಥೆಯನ್ನು ಜಾರಿಗೆ ತಂದಿತ್ತು. ಈ ವ್ಯವಸ್ಥೆಯಡಿ ಎಲ್ಲಾ ಹಡಗುಗಳು ತಮ್ಮ ಆಗಮನ ಮತ್ತು ನಿರ್ಗಮನದ ಮಾಹಿತಿಯನ್ನು ಇರಾನ್ ಅಧಿಕಾರಿಗಳೊಂದಿಗೆ ಕಡ್ಡಾಯವಾಗಿ ಹಂಚಿಕೊಳ್ಳಬೇಕು ಹಾಗೂ ಇರಾನ್ ನಿಗದಿಪಡಿಸಿರುವ ಮೇಲ್ವಿಚಾರಣಾ ವಲಯದ ಹೊರಗಿನ ಮಾರ್ಗಗಳನ್ನು ಬಳಸಬಾರದು ಎಂದು ಸೂಚಿಸಿತ್ತು.
ಜೂನ್ ತಿಂಗಳಲ್ಲಿ ಇರಾನ್ ಮತ್ತು ಅಮೆರಿಕ ನಡುವೆ ಉದ್ವಿಗ್ನ ಪರಿಸ್ಥಿತಿಯನ್ನು ಶಮನಗೊಳಿಸುವ ಉದ್ದೇಶದಿಂದ ಒಪ್ಪಂದವೊಂದು ನಡೆದಿತ್ತು. ಬಳಿಕ ಅಮೆರಿಕ ನೌಕಾ ನಿರ್ಬಂಧ ತೆರವುಗೊಳಿಸಿರುವುದಾಗಿ ಹೇಳಿದ್ದರೂ, ಜಲಮಾರ್ಗದಲ್ಲಿ ತನ್ನ ಸೇನಾ ಹಾಜರಾತಿಯನ್ನು ಮುಂದುವರಿಸುವುದಾಗಿ ತಿಳಿಸಿತ್ತು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.