ಬಲ್ಡೋಟ ವಿರೋಧಿ ಧರಣಿಗೆ 220ನೇ ದಿನ
ಕೊಪ್ಪಳ, 07 ಜೂನ್ (ಹಿ.ಸ.) : ಆ್ಯಂಕರ್ : ಬೇಲಿಯೇ ಎದ್ದು ಹೊಲ ಮೇಯ್ದರೆ,ನಾರಿಯೇ ಮನೆ ಕಳವು ಮಾಡಿದರೆ ಇನ್ನಾರಿಗೆ ದೂರುವುದು ಎನ್ನುವ ಗುರು ಬಸವಣ್ಣನವರ ವಚನ ಉಲ್ಲೇಖಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಎಚ್.ಆರ್. ಬಸವರಾಜಪ್ಪ 220ನೇ ದಿನದ ಬಲ್ಡೋಟ ವಿರೋಧಿ ಧ
ಬಲ್ಡೋಟ ವಿರೋಧಿ ಧರಣಿಗೆ 220ನೇ ದಿನ


ಕೊಪ್ಪಳ, 07 ಜೂನ್ (ಹಿ.ಸ.) :

ಆ್ಯಂಕರ್ : ಬೇಲಿಯೇ ಎದ್ದು ಹೊಲ ಮೇಯ್ದರೆ,ನಾರಿಯೇ ಮನೆ ಕಳವು ಮಾಡಿದರೆ ಇನ್ನಾರಿಗೆ ದೂರುವುದು ಎನ್ನುವ ಗುರು ಬಸವಣ್ಣನವರ ವಚನ ಉಲ್ಲೇಖಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಎಚ್.ಆರ್. ಬಸವರಾಜಪ್ಪ 220ನೇ ದಿನದ ಬಲ್ಡೋಟ ವಿರೋಧಿ ಧರಣಿಗೆ ಬೆಂಬಲಿಸಿದರು. ಅವರು ಇದಕ್ಕೂ ಮುಂಚೆ 34 ದಿನಗಳಿಂದ ಬಸಾಪುರ ಕೆರೆ ಮುಕ್ತಗೊಳಿಸಲು ನಡೆಯುತ್ತಿರುವ ಹೋರಾಟದ ವೇದಿಕೆಗೂ ಭೆಟಿ ನೀಡಿದರು.

ಆಳುವವರು ಮತ್ತು ಅಧಿಕಾರಿಗಳು ಕೆರೆಯನ್ನೇ ಕಾರ್ಖಾನೆಗೆ ಮಾರಿದರೆ ಯಾರಿಗೆ ದೂರಬೇಕು? ನ್ಯಾಯಾಲಯಗಳು ಒಂದು ಹಂತದಲ್ಲಿ ತೀರ್ಪು ಕೊಟ್ಟರೆ ಅದನ್ನು ದಾರಿ ತಪ್ಪಿಸುವ ಅಧಿಕಾರಿಗಳು ಜಾರಿ ಮಾಡುವುದಿಲ್ಲ. ಬೇಕಾದರೆ ಮೇಲ್ಮನವಿ ಹೋಗಿ ಎಂದು ಹೇಳುತ್ತಾ ಬಂಡವಾಳಶಾಹಿ, ಕಾರ್ಪೋರೇಟರಗಳ ಹಿತವನ್ನಷ್ಟೇ ಕಾಯುತ್ತಾರೆ. ಸಾಮಾನ್ಯರು, ಗ್ರಾಮೀಣ ರೈತರು ದೀರ್ಘ ಕಾಲದವರೆಗೆ ನ್ಯಾಯಾಲಯದಲ್ಲಿ ಹೋರಾಡಲು ಆಗುವುದಿಲ್ಲ. ಈ ದೌರ್ಬಲ್ಯವನ್ನು ಕಂಡುಕೊಂಡ ಕಂಪನಿಗಳು ಮತ್ತು ಸರ್ಕಾರಿ ಅಧಿಕಾರಿಗಳು ಜನರಿಗೆ ನ್ಯಾಯಾಲಯಕ್ಕೆ ಹೋಗಿ ಎಂದು ಹೇಳಿ ಕೈತೊಳೆದುಕೊಳ್ಳುತ್ತಾರೆ. ಆದಾಗ್ಯೂ ಕಾನೂನು ಕುಣಿಕೆಯಿಂದ ಅಧಿಕಾರಿಗಳು ತಪ್ಪಿಸಿಕೊಳ್ಹಲು ಸಾಧ್ಯವಿಲ್ಲ. ರಾಜಕಾರಣಿಗಳು ತಪ್ಪಿಸಿಕೊಳ್ಳುತ್ತಾರೆ.

ಐ.ಎ.ಎಸ್. ಅಂದರೆ ಕತ್ತೆ ಕಾಯುವ ಕೆಲಸಕ್ಕೆ ಸಮಾನವೇನು? ಕಾರ್ಖಾನೆಗಳವರ ಮನೆ ಕಾಯುವ ಕೆಲಸ ಅಧಿಕಾರಿಗಳು ಮಾಡಬಾರದು. ಕಾರ್ಖಾನೆಗೆ ಕೆರೆ, 'ಬಿ' ಖರಾಬ್, ರಸ್ತೆ ಮಂಜೂರಿ ಮಾಡುವ ಅಧಿಕಾರ ಯಾರಿಗೂ ಇಲ್ಲ. ಬಸಾಪುರ ಕೆರೆ ಪರಂಪೋಕ, ಸರ್ಕಾರಿ ಜಮೀನು ಎನ್ನುವ ಕಥೆ ಕಟ್ಟಲು ತಿಣುಕಾಡಿ, ಕೊನೆಗೆ ಕೆರೆಯಾದ್ದರಿಂದ 'ಡಿನೋಟಿಫೈ' ಮಾಡುತ್ತಿಲ್ಲ ಎಂದು ಕಂದಾಯ ಕಾರ್ಯದರ್ಶಿ 2007ರಲ್ಲಿ ಹೇಳಿರುವಾಗಲೇ ಗ್ರಾಮಗಳ ಜನ ಕೆರೆ ನೀರು ಬಳಸುವ ಹಕ್ಕು ರಕ್ಷಣೆಯಾಗಿದೆ. ಇದು ಜಿಲ್ಲಾಧಿಕಾರಿಗೆ ತಿಳಿಯದ ವಿಷಯವೇನಲ್ಲ. ರೈತರು ಕೆರೆ ನೀರು ಬಳಸಲು ಜಿಲ್ಲಾಧಿಕಾರಿಗಳು ರಕ್ಷಣೆ ಕೊಡಬೇಕು. ಇದನ್ನು ಮಾಡದಿದ್ದರೆ ಬಲ್ಡೋಟ ಕಂಪನಿ ವಿರುದ್ಧ ನೇರ ಕಾರ್ಯಾಚರಣೆಗೆ ರೈತರೊಂದಿಗೆ ನುಗ್ಗುತ್ತೇವೆ.

ಸಂದರ್ಭ ಬಿದ್ದರೆ ಜೈಲಿಗೆ ಹೋಗಲು ಸಿದ್ಧ. ಕೆರೆಯನ್ನು ಯಾವುದೇ ಕಾರಣಕ್ಕೂ ಬಲ್ಡೋಟ ಕಂಪನಿಗೆ ಬಿಡುವುದಿಲ್ಲ., ನಾನಗಾಗಿ ಕೆರೆಯನ್ನು ಸಾರ್ವಜನಿಕ ದಾರಿಯನ್ನು ಮಂಜೂರು ಮಾಡಲು ಕೇಳಿದರೆ ಅದನ್ನು ಮಾಡುತ್ತೀರಾ? ಎಂದು ಪ್ರಶ್ನಿಸಿದರು. ರೈತ ಸಂಘ ಸಂಸ್ಥಾಪಕ ಎಂ.ಡಿ.ನಂಜುಂಡಸ್ವಾಮಿಯವರು ಅಧ್ಯಕ್ಷರು ಇದ್ದಾಗ, ನಾನು ಸ್ಥಾಪಕ ಪ್ರಧಾನ ಕಾರ್ಯದರ್ಶಿಯಾಗಿ ರೈತ ಚಳವಳಿಗೆ ನೇತೃತ್ವ ಕೊಟ್ಟು ಹೋರಾಡುವಾಗ, ಗೋಲಿಬಾರ್, ಲಾಟಿಚಾರ್ಜ್, ಜೈಲು ಬಂಧನವನ್ನು ಹಲವು ಬಾರಿ ಎದುರಿಸಿದ್ದೇನೆ. ನಾನು ರೈತ ಚಳವಳಿಗೆ ಜೀವ ಮುಡುಪಿಟ್ಟಿದ್ದೇನೆ. ಶೀಘ್ರ ಹೋರಾಟ ತೀಕ್ಷಗೊಳಿಸಿದರೆ ಎಲ್ಲಾ ಜಿಲ್ಲೆಗಳಿಂದ ಕೊಪ್ಪಳಕ್ಕೆ ರೈತರೊಂದಿಗೆ ಬರುತ್ತೇವೆ ಎಂದರು.

ನಗರಸಭೆ ಮುಂದಿನ ಬಲ್ಡೋಟ ವಿರೋಧಿ ಹೋರಾಟದ ಧರಣಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಜೀರಸಾಬ ಮೂಲಿಮನಿ, ಜಿಲ್ಲಾಧ್ಯಕ್ಷ ಭೀಮಸೇನ ಕಲಕೇರಿ ಮಾತನಾಡಿದರು.

ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಹಾಗೂ ಪರಿಸರ ಹಿತರಕ್ಷಣಾ ವೆದಿಕೆಯ ಜಂಟಿ ಕ್ರಿಯಾ ವೇದಿಕೆ ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು ರೈತ ಮುಖಂಡರನ್ನು ಸ್ವಾಗತಿಸಿದರು.

ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ ಕೆಲವು ಕಾನುನು ವಿವರಗಳನ್ನು ಮಂಡಿಸಿದರು. ಕನಕಗಿರಿ ತಾ. ಅಧ್ಯಕ್ಷ ಗಣೆಶರೆಡ್ಡಿ, ಶಿವಣ್ಣ ಭೀಮನೂರು ಇಂದರಗಿ, ದಾವಣಗೆರೆ ಹೊನ್ನೂರು ಮುನಿಸ್ವಾಮಿ, ಪಿ.ಪಿ.ಮರುಳಸಿದ್ದಯ್ಯ, ಶರಣಪ್ಪ ಎಸ್ ಬಾಚಲಾಪೂರ, ಕುಷ್ಟಗಿ ತಾ. ಅಧ್ಯಕ್ಷ ಶರಣಪ್ಪ ಕಮತರ, ಪ್ರಕಾಶಕ ಡಿ.ಎಂ.ಬಡಿಗೇರ, ರಾಜಶೇಖರ ಏಳುಬಾವಿ, ಶಂಭುಲಿಂಗಪ್ಪ ಹರಗೇರಿ, ಪುಟ್ಟರಾಜ ಪಾಟೀಲ್, ಮಹಾದೇವಪ್ಪ ಮಾವಿನಮಡು, ಶಿವಪ್ಪ ಜಲ್ಲಿ, ಶರಣಯ್ಯ ಮುಳ್ಳೂರುಮಠ, ಕಾಡಪ್ಪ ಗಡ್ಡಿ, ಬಸಪ್ಪ ಪೂಜಾರಿ, ಮಹಾಂತಪ್ಪ ಪಾಟೀಲ, ಮಹೆಬೂಬಸಾಬ ನಡಲಮನಿ, ಬಸವರಾಜ ದೇಸಾಯಿ, ನಾಗರಾಜ ಕೋನರಡ್ಡಿ, ಕೆ. ಕೃಷ್ಢಕಾಶಿ, ಶಂಕರಗೌಡ ಪಾಟೀಲ, ಚೆನ್ನಮ್ಮ ಹೊಸಮನಿ, ಶ್ರೀದೇವಿ ಹೊಸಮನಿ ಮುಂತಾದವರು ಪಾಲ್ಗೊಂಡರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande