
ಕೋಲಾರ, ೨೦ ಜೂನ್ (ಹಿ.ಸ) :
ಆ್ಯಂಕರ್ : ಕೆಜಿಎಫ್ ಪೊಲೀಸ್ ಜಿಲ್ಲೆಯಲ್ಲಿ ಕಳುವಾಗಿದ್ದ ಹಾಗೂ ಸಿಇಐಆರ್ ತಂತ್ರಾ0ಶದಲ್ಲಿ ದೂರು ದಾಖಲಾಗಿದ್ದ ೨೩ ಮೊಬೈಲ್ ಪೋನ್ಗಳನ್ನು ಸೈಬರ್ ಕ್ರೆ0 ಪೊಲೀಸ್ ಠಾಣಿಯ ಪೊಲೀಸರು ಪತ್ತೆ ಹಚ್ಚಿ ವಾರಸುದಾರರಿಗೆ ಹಸ್ತಾಂತರಿಸುವ ಕಾರ್ಯಕ್ರಮವನ್ನು ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸೈಬರ್ ಕ್ರೆö ಪೊಲೀಸ್ ಠಾಣೆ ವತಿಯಿಂದ ಸಿಇಐಆರ್ ಪೋರ್ಟಲ್ (ಕೇಂದ್ರೀಯ ಸಲಕರಣೆಗಳ ಗುರುತಿನ ನೋಂದಣಿ) ನಲ್ಲಿ ದಾಖಲಾಗಿದ್ದ ಮೊಬೈಲ್ ಪೋನ್ ಕಳವು ಬಗ್ಗೆ ತನಿಖೆ ಹಾಗೂ ವಿಶೇಷ ಕಾರ್ಯಾಚರಣೆ ನಡೆಸಿ ದೇಶದ ವಿವಿಧ ರಾಜ್ಯಗಳಲ್ಲಿ ಇದ್ದಂತಹ ೨೩ ಕಳವು ಮೊಬೈಲ್ಗಳನ್ನು ಪತ್ತೆ ಮಾಡಿ, ವಾರಸುದಾರರನ್ನು ಬರಮಾಡಿಕೊಂಡು, ಅವರವರ ಮೊಬೈಲ್ ಪೋನ್ಗಳನ್ನು ಜಿಲ್ಲಾ ರಕ್ಷಣಾಧಿಕಾರಿ ಶಿವಾಂಶು ರಜಪೂತ್ ಹಸ್ತಾಂತರಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ಮಾತನಾಡಿ, ಯಾರೇ ಆಗಲಿ ಮೊಬೈಲ್ ಪೋನ್ಗಳನ್ನು ಕಳೆದುಕೊಂಡಲ್ಲಿ ಕೂಡಲೇ ಸಿ.ಇ.ಐ.ಆರ್. ಪೋರ್ಟಲ್ನಲ್ಲಿ ದೂರನ್ನು ದಾಖಲಿಸುವಂತೆ ಸೂಚಿಸಿದರು. ಇದರಿಂದಾಗಿ ಕಳುವಾದ ಮೊಬೈಲ್ ಪೋನ್ಗಳು ಪತ್ತೆಯಾಗುವುದಲ್ಲದೇ, ಬೇರೆಯವರು ದುರ್ಬಳಕೆ ಮಾಡಿಕೊಳ್ಳುವುದನ್ನು ತಪ್ಪಿಸಬಹುದೆಂದು ಈ ಕುರಿತು ಅಗತ್ಯ ತಿಳುವಳಿಕೆಗಳನ್ನು ನೀಡಿ ಅರಿವು ಮೂಡಿಸಿದರು.
ಕಳುವಾಗಿದ್ದ ಇಪ್ಪತ್ತಮೂರು ಮೊಬೈಲ್ಗಳನ್ನು ಪತ್ತೆ ಮಾಡಿ, ವಾರಸುದಾರರಿಗೆ ಹಸ್ತಾಂತರಿಸುವಲ್ಲಿ ಯಶಸ್ವಿಯಾದ ಸೈಬರ್ ಕ್ರೆ ಇನ್ಸ್ಪೆಕ್ಟರ್ ಪ್ರದೀಪ್ಸಿಂಗ್ ಮತ್ತು ಸಿಬ್ಬಂದಿ ಮಣಿಕಂಠ ಅವರ ಕಾರ್ಯವೈಖರಿಯನ್ನು ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್