
ಕೋಲಾರ ಜೂನ್ ೨೦ (ಹಿ.ಸ) :
ಆ್ಯಂಕರ್ : ಕೋಲಾರ ತಾಲ್ಲೂಕು ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ನೂತನ ಅಧ್ಯಕ್ಷರಾಗಿ ಮದ್ದೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಕೆ. ಶಿವರಾಜ್ ಆಯ್ಕೆಯಾಗಿದ್ದಾರೆ.
ನಗರದ ಹೊರವಲಯದಲ್ಲಿರುವ ದಕ್ಷಿಣಸ್ವಾಧದಲ್ಲಿಂದು ನಡೆದ ತಾಲೂಕು ಮುಖ್ಯೋಪಾಧ್ಯಾಯರ ಸರ್ವ ಸದಸ್ಯರ ಸಭೆಯಲ್ಲಿ ಈ ಆಯ್ಕೆ ನಡೆದಿದ್ದು, ಉಪಾಧ್ಯಕ್ಷರಾಗಿ ಕ್ಯಾಲನೂರಿನ ಪಿ.ಪದ್ಮಮ್ಮ, ಕಾರ್ಯದರ್ಶಿಯಾಗಿ ಶಿಳ್ಳಂಗೆರೆ ಕೆ.ಎಂ.ಮುನಿಸ್ಟಾಮಿ, ಕೋಶಾಧ್ಯಕ್ಷರಾಗಿ ಬೆಳಮಾರನಹಳ್ಳಿ ಚಂದ್ರಶೇಖರ್ ಮೊದಲಿಯಾರ್, ಸಹಕಾರ್ಯರ್ಶಿಯಾಗಿ ಸೊನ್ನೇನಹಳ್ಳಿಯ ಶ್ರೀನಾಥ್ ಆಯ್ಕೆಯಾಗಿದ್ದಾರೆ.
ಇವರ ಆಯ್ಕೆಯನ್ನು ಪ್ರಕಟಿಸಿದ ಸಂಘದ ಜಿಲ್ಲಾಧ್ಯಕ್ಷ ಜಿ.ಶ್ರೀನಿವಾಸ್ ಮಾತನಾಡಿ ಶಿಕ್ಷಕರು ಸೇನಾ ಬೆಳೆಸಿಕೊಂಡು, ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವವನ್ನು ಹೊಂದಿರಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಿ.ಎಂ. ನಾರಾಯಣಸ್ವಾಮಿ, ಕೋಶಾಧ್ಯಕ್ಷ ಕೆ.ವಿ. ಜಗನ್ನಾಥ್, ಮುಖಂಡರುಗಳಾದ ಗಂಗಾಧರ್ ಎಲ್, ಶ್ರೀನಿವಾಸ್ ಕೋಟೇಶ್ವರ ರಾವ್ ಮತ್ತಿತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್