
ಕೋಲಾರ, ೨೦ ಜೂನ್ (ಹಿ.ಸ) :
ಆ್ಯಂಕರ್ : ಬಂಗಾರಪೇಟೆ ಪತ್ರಕರ್ತರಿಗೆ ೫೦ ನಿವೇಶನಗಳು ಹಾಗೂ ಕೋಲಾರ ಪತ್ರಕರ್ತರಿಗೆ ೧೫೦ ನಿವೇಶನಗಳನ್ನು ನೀಡಲು ಸರ್ಕಾರದಿಂದ ಜಮೀನು ಮಂಜೂರು ಮಾಡಿಸಲಾಗುವುದೆಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಭರವಸೆ ನೀಡಿದರು.
ಬಂಗಾರಪೇಟೆ ತಾಲೂಕಿನ ಎಸ್.ಎನ್.ಸಿಟಿಯಲ್ಲಿ ಶಾಸಕರನ್ನು ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ನೇತೃತ್ವದಲ್ಲಿ ಪದಾಧಿಕಾರಿಗಳು ಭೇಟಿ ಮಾಡಿ ಮನವಿಗೆ ಸ್ಪಂಧಿಸಿ ಮಾತನಾಡಿದ ಅವರು, ಪುರಸಭೆ ಅಧ್ಯಕ್ಷನಾಗಿದ್ದಾಗಿನಿಂದ ತಾಲೂಕಿನಲ್ಲಿ ಕೆಲವು ಪತ್ರಕರ್ತರಿಗೆ ಉಚಿತ ನಿವೇಶನಗಳನ್ನು ನೀಡಿದ್ದು, ಮನೆ ನಿರ್ಮಾಣಕ್ಕೆ ಸಹಾಯಹಸ್ತನೂ ನೀಡಲಾಗಿದೆ. ಪತ್ರಕರ್ತರ ಸಂಘದಿ0ದ ಇದುವರೆಗೂ ಯಾವುದೇ ಮನವಿ ಬರದೇ ಇರವುದರಿಂದ ಈ ಕರ್ಯಕ್ಕೆ ಕೈಹಾಕಿಲ್ಲ. ತಾಲೂಕಿನಲ್ಲಿ ಈಗಾಗಲೇ ಜಮೀನು ಮೀಸಲಿಟ್ಟಿರುವ ಜಾಗಗಳಲ್ಲಿ ತಾಲೂಕಿನಲ್ಲಿ ೧೦ ಸಾವಿರ ಬಡವರಿಗೆ ನಿವೇಶನವನ್ನು ಉಚಿತವಾಗಿ ಹಂಚಲು ಯೋಜನೆ ರೂಪಿಸಿದ್ದು, ಇದರಲ್ಲಿ ಪತ್ರಕರ್ತರಿಗೂ ನಿವೇಶನಗಳನ್ನು ವಿತರಣೆ ಮಾಡಲಿ ಈಗಾಗಲೇ ತೀರ್ಮಾನಿಸಲಾಗಿದೆ ಎಂದರು.
ಕೋಲಾರ ತಾಲೂಕಿನಲ್ಲಿ ಹೆಚ್ಚಾಗಿ ಬಡ ಪತ್ರಕರ್ತರೇ ಇರುವುದರಿಂದ ೫ ಎಕರೆ ಸರ್ಕಾರಿ ಜಮೀನನ್ನು ಮಂಜೂರು ಮಾಡಿಸಲು ಉಪವಿಭಾಗಾಧಿಕಾರಿಗಳ ಶಿಫಾರಸ್ಸು ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಸರ್ಕಾರದಿಂದ ಜಮೀನು ಮಂಜೂರು ಮಾಡಿಸಿದ ನಂತರ ರಾಜೀವಗಾಂಧಿ ವಸತಿ ನಿಗಮದಿಂದ ಹಾಗೂ ಸ್ಥಳೀಯ ಗ್ರಾಪಂ ಪಿಡಿಒ ಅಧಿಕಾರಿಗಳಿಂದ ಪತ್ರಕರ್ತರ ಬಡಾವಣೆ ನಿರ್ಮಾಣ ಮಾಡಿ ೫ ಎಕರೆ ಜಮೀನಿನಲ್ಲಿ ೧೫೦ ಪತ್ರಕರ್ತರಿಗೆ ಉಚಿತ ನಿವೇಶನಗಳ ಹಕ್ಕುಪತ್ರಗಳನ್ನು ವಿತರಣೆ ಮಾಡಲು ಶ್ರಮಿಸಲಾಗುವುದೆಂದು ಭರವಸೆ ನೀಡಿದರು.
ಜಿಲ್ಲೆಯ ಬಂಗಾರಪೇಟೆ ಕ್ಷೇತ್ರದಲ್ಲಿ ಸತತ ಮೂರು ಬಾರಿ ಶಾಸಕರಾಗಿ ಗೆಲುವು ಸಾಧಿಸಲು ಮುಖ್ಯವಾಗಿ ಅಭಿವೃದ್ದಿಯೇ ಮೂಲಮಂತ್ರವಾಗಿರುವುದರಿ0ದ ವಿರೋಧ ಪಕ್ಷಗಳು ಏನೇ ಆರೋಪಗಳು ಮಾಡಿದರೂ ಸಹ ಜನರ ಪರವಾಗಿ ದಿನದ ೨೪ ಗಂಟೆಯೂ ಕೆಲಸ ಮಾಡುತ್ತಿರುವುದಕ್ಕೆ ಪ್ರತಿಯಾಗಿ ಜನರು ನನ್ನನ್ನು ೩ನೇ ಬಾರಿಗೆ ಗೆಲುವು ನೀಡಿದ್ದಾರೆ. ಕ್ಷೇತ್ರದಲ್ಲಿ ಜಾತ್ಯತೀತವಾಗಿ, ವರ್ಗಾತೀತವಾಗಿ, ಧರ್ಮಾತೀತವಾಗಿ ಕೆಲಸ ಮಾಡುತ್ತಿರುವುದಕ್ಕೆ ಸಂದ ಜಯವಾಗಿದೆ. ಹಾಗೇಯೇ ಪತ್ರಕರ್ತರು ಸಹ ನಮ್ಮವರೇ ಆಗಿರುವುದರಿಂದ ಅವರ ಸಮಸ್ಯೆಗಳಿಗೂ ಸ್ಪಂಧಿಸುವ ಕೆಲಸ ಮಾಡಬೇಕಾಗಿರುವುದರಿಂದ ನನ್ನ ಕ್ಷೇತ್ರಕ್ಕೆ ಎರಡು ತಾಲೂಕುಗಳು ಸೇರಿರುವುದರಿಂದ ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಅವರೊಂದಿಗೆ ಚರ್ಚೆ ನಡೆಸಿ ಕ್ರಮಕೈಗೊಳ್ಳಲಾಗುವುದೆಂದರು.
ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್, ಉಪಾಧ್ಯಕ್ಷ ಅಬ್ಬಿಣಿ ಶಂಕರ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎ.ಜಿ.ಸುರೇಶ್ ಕುಮಾರ್, ಖಜಾಂಚಿ ರಾಜೇಂದ್ರ ಸಿಂಹ, ಉಪಾಧ್ಯಕ್ಷ ರವಿಕುಮಾರ್, ಕಾರ್ಯದರ್ಶಿ ಶಮ್ಗರ್, ಸಹಕಾರ ಸಂಘದ ನಿರ್ದೇಶಕರಾದ ಹೆಚ್.ಎನ್.ಮುರಳೀಧರ್, ಸೋಮಶೇಖರ್, ಬಾಲನ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಮೋಹನ್, ಮಾಜಿ ಅಧ್ಯಕ್ಷ ಎಂ.ಸಿ.ಮ0ಜುನಾಥ್, ಪ್ರಧಾನ ಕಾರ್ಯದರ್ಶಿ ಎಸ್.ಪಿ.ವೆಂಕಟೇಶ್, ಖಜಾಂಚಿ ಎನ್.ಮುರಳಿ ಮೋಹನ್, ಶ್ರೀನಿವಾಸಪುರ ಅಧ್ಯಕ್ಷ ನಾಗರಾಜ್, ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್, ಕೆಜಿಎಫ್ ಅಧ್ಯಕ್ಷ ತ್ಯಾಗರಾಜ್, ಚಾನ್ ಪಾಷ, ವೆಂಕಟೇಶ ಬಾಬಾ, ಕೆ.ಎನ್.ಚಂದ್ರಶೇಖರ್, ಮಾಲೂರು ಮಾರುತೇಶ್, ಸಂಘರ್ಷ, ಕೆಜಿಎಫ್ ರಾಜೇಶ್ ಇತರರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್