ಹೊಸ ಬಸ್ ಸೇವೆ ಆರಂಭ ; ಗ್ರಾಮೀಣ ಜನರಲ್ಲಿ ಸಂಭ್ರಮ
ಗದಗ, 13 ಜೂನ್ (ಹಿ.ಸ.) : ಆ್ಯಂಕರ್ : ಗದಗ ನಗರದಿಂದ ಕದಾಂಪುರ, ಡೋಣಿ ಹಾಗೂ ಡೋಣಿ ತಾಂಡ ಮಾರ್ಗವಾಗಿ ಅತ್ತಿಕಟ್ಟಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ನೂತನ ಬಸ್ ಸೇವೆ ಅಧಿಕೃತವಾಗಿ ಆರಂಭಗೊಂಡಿದ್ದು, ಗ್ರಾಮೀಣ ಭಾಗದ ಜನರಲ್ಲಿ ಸಂತಸದ ಅಲೆ ಮೂಡಿದೆ. ಪ್ರತಿದಿನ ಬೆಳಿಗ್ಗೆ 10 ಗಂಟೆಗೆ ಗದಗ ನಗರದಿಂದ ಹೊರಡುವ
ಫೋಟೋ


ಗದಗ, 13 ಜೂನ್ (ಹಿ.ಸ.) :

ಆ್ಯಂಕರ್ : ಗದಗ ನಗರದಿಂದ ಕದಾಂಪುರ, ಡೋಣಿ ಹಾಗೂ ಡೋಣಿ ತಾಂಡ ಮಾರ್ಗವಾಗಿ ಅತ್ತಿಕಟ್ಟಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ನೂತನ ಬಸ್ ಸೇವೆ ಅಧಿಕೃತವಾಗಿ ಆರಂಭಗೊಂಡಿದ್ದು, ಗ್ರಾಮೀಣ ಭಾಗದ ಜನರಲ್ಲಿ ಸಂತಸದ ಅಲೆ ಮೂಡಿದೆ.

ಪ್ರತಿದಿನ ಬೆಳಿಗ್ಗೆ 10 ಗಂಟೆಗೆ ಗದಗ ನಗರದಿಂದ ಹೊರಡುವ ಈ ಬಸ್ ಅತ್ತಿಕಟ್ಟಿ ಗ್ರಾಮ ತಲುಪಿದ ಸಂದರ್ಭದಲ್ಲಿ ಮುಂಡರಗಿ ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ರಾಮಣ್ಣ ಮೇಗಲಮನಿ ಅವರು ಬಸ್ಗೆ ಪೂಜೆ ಸಲ್ಲಿಸಿ ಸ್ವಾಗತಿಸಿದರು.

ಈ ವೇಳೆ ಮಾತನಾಡಿದ ಅವರು, ಗ್ರಾಮೀಣ ಜನರ ಸಂಚಾರ ಸಮಸ್ಯೆಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಬಸ್ ಸೇವೆ ಆರಂಭಗೊಂಡಿದ್ದು, ರೋಣ ಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ ಹಾಗೂ ಗದಗ ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ ಅವರ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದು ಹೇಳಿದರು.

ವಿದ್ಯಾರ್ಥಿಗಳು, ರೈತರು, ವ್ಯಾಪಾರಿಗಳು ಹಾಗೂ ಸಾಮಾನ್ಯ ಪ್ರಯಾಣಿಕರಿಗೆ ಗದಗ ನಗರಕ್ಕೆ ತೆರಳಲು ಈ ಬಸ್ ಅತ್ಯಂತ ಅನುಕೂಲಕರವಾಗಲಿದ್ದು, ಗ್ರಾಮೀಣ ಭಾಗದ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಸಹಾಯಕವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು. ಸಾರ್ವಜನಿಕರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದರು.

ಬಸ್ ಸೇವೆ ಆರಂಭಗೊಂಡಿರುವುದಕ್ಕೆ ಗ್ರಾಮಸ್ಥರು ಸಾರಿಗೆ ಇಲಾಖೆಗೆ ಅಭಿನಂದನೆ ಸಲ್ಲಿಸಿ ಸಂತೋಷ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಹಾಲನಗೌಡ ಪಾಟೀಲ, ನಿಂಗಪ್ಪ ಮಳ್ಳಣ್ಣವರ, ನಿಂಗಪ್ಪ ಮೂಲಿಮನಿ, ಕೆಂಚಪ್ಪ ಪೀಚಿ, ಹನಮಪ್ಪ ಗೋಡಿ, ಶೇಕಪ್ಪ ಗುಡ್ಡದ, ಸಿದ್ದನಗೌಡ ಜಾಯನಗೌಡರ, ಸಿದ್ದಪ್ಪ ಹಿತ್ತಲಮನಿ, ಹನಮಪ್ಪ ಯಲಸೂರ, ಥಾವರೇಪ್ಪ ನಾಯಕ, ಪರಸಪ್ಪ ಪೀಚಿ, ನಿಂಗಪ್ಪ ಕಲ್ಯಾಣದವರ, ಪರಸಪ್ಪ ಹರಕೇರಿ ಸೇರಿದಂತೆ ಅನೇಕ ಗ್ರಾಮಸ್ಥರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande