ಕಳೆದು ಹೋಗಿದ್ದ ಹಣ ಪೊಲೀಸರಿಗೆ ಒಪ್ಪಿಸಿದ ವ್ಯಕ್ತಿಗೆ ಸನ್ಮಾನ
ಕಳೆದು ಹೋಗಿದ್ದ ಹಣ ಪೊಲೀಸರಿಗೆ ಒಪ್ಪಿಸಿದ ವ್ಯಕ್ತಿಗೆ ಸನ್ಮಾನ
ಮಹಿಳೆ ಕಳುದುಕೊಂಡಿದ್ದ ವ್ಯಾನಿಟಿ ಬ್ಯಾಗ್ ಹಾಗೂ ಹಣವನ್ನು ಪೊಲೀಸ್ ಠಾಣೆಗೆ ಹಿಂತಿರುಗಿಸಿದ ಆನಂದ್ ಎಂಬುವರನ್ನು ಕೆಜಿಎಫ್ ಎಸ್.ಪಿ. ಶಿವಾಂಶು ರಜಪೂತ್ ಅಭಿನಂದಿಸಿದರು.


ಕೋಲಾರ, ೧೦ ಜೂನ್ (ಹಿ.ಸ) :

ಆ್ಯಂಕರ್ : ಕೆಜಿಎಫ್ ನಗರದ ರಾಬರ್ಟ್ಸನ್ಪೇಟೆ ಪೊಲೀಸ್ ಠಾಣೆಯ ವ್ಯಾಪ್ತಿಯ ಎಂ.ಜಿ.ಮಾರುಕಟ್ಟೆಯಲ್ಲಿ ಮಹಿಳೆಯೊಬ್ಬರು ೩ ಲಕ್ಷ ಬೆಲೆ ಬಾಳುವ ಚಿನ್ನದ ಆಭರಣ ಮತ್ತು ಐದು ಸಾವಿರ ರೂಪಾಯಿ ನಗದು ಹಣ ಇದ್ದಂತಹ ವ್ಯಾನಿಟಿ ಬ್ಯಾಗ್ ಅನ್ನು ಕಳೆದುಕೊಂಡಿದ್ದು ಇದನ್ನು ರಾಬರ್ಟ್ಸನ್ಪೇಟೆ ಪೊಲೀಸರು ವಾರಸುದಾರರಿಗೆ ಹಸ್ತಾಂತರಿಸಿರುತ್ತಾರೆ.

ಸ0ಜಯ್ಗಾ0ಧಿ ನಗರದ ಗೌತಮಿ ರಾಬರ್ಟ್ಸನ್ಪೇಟೆ ಪೊಲೀಸ್ ಠಾಣಾ ಸರಹದ್ದು ಎಂ.ಜಿ.ಮಾರುಕಟ್ಟೆಯಲ್ಲಿ ೩ ಲಕ್ಷ ಬೆಲೆ ಬಾಳುವ ಚಿನ್ನದ ಆಭರಣ ಮತ್ತು ರೂ.೫೦೦೦/- ನಗದು ಹಣ ಇದ್ದಂತಹ ತನ್ನ ವ್ಯಾನಿಟಿ ಬ್ಯಾಗ್ಅನ್ನು ಕಳೆದುಕೊಂಡಿದ್ದರು. ಜೂ.೮ ರಾತ್ರಿ ೮:೩೦ ಗಂಟೆಯಲ್ಲಿ ಚಂದರನ್ ಎಂಬುವರು ರಾಬರ್ಟ್ಸನ್ಪೇಟೆಯ ಎಂ.ಜಿ.ಮಾರುಕಟ್ಟೆಯಲ್ಲಿ ಹೋಗುತ್ತಿರುವಾಗ ಇವರಿಗೆ ಸದರಿ ವ್ಯಾನಿಟಿ ಬ್ಯಾಗ್ ದೊರಕಿದ್ದು ಅದನ್ನು ದುರುಪಯೋಗ ಪಡಿಸಿಕೊಳ್ಳದೆ ಪ್ರಮಾಣಿಕತೆಯಿಂದ ಖುದ್ದು ರಾಬರ್ಟ್ಸನ್ಪೇಟೆ ಪೊಲೀಸ್ ಠಾಣೆಯಲ್ಲಿ ಹಾಜರುಪಡಿಸಿದರು. ಆ ನಂತರ ರಾಬರ್ಟ್ಸನ್ಪೇಟೆ ಪೊಲೀಸರು ಮಹಿಳೆಗೆ ಚಿನ್ನ ಮತ್ತು ಹಣ ಇದ್ದಂತಹ ವ್ಯಾನಿಟಿ ಬ್ಯಾಗ್ಅನ್ನು ಹಿಂತಿರುಗಿಸಿದರು.

ಚಿನ್ನ ಮತ್ತು ಹಣ ಇದ್ದಂತಹ ವ್ಯಾನಿಟಿ ಬ್ಯಾಗ್ ಅನ್ನು ದುರುಪಯೋಗಪಡಿಸಿಕೊಳ್ಳದೆ ಪೊಲೀಸ್ ಠಾಣೆಯಲ್ಲಿ ಹಾಜರು ಪಡಿಸಿ ಪ್ರಾಮಾಣಿಕತೆ ತೋರಿರುವ ಚಂದರನ್ ರವರ ಉತ್ತಮ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್, ಡಿವೈಎಸ್ಪಿ ಲಕ್ಷö್ಮಯ್ಯ. ವಿ ಮತ್ತು ರಾಬರ್ಟ್ಸನ್ಪೇಟೆ ವೃತ್ತ ನಿರೀಕ್ಷಕರು ಅನಿಲ್ ಕುಮಾರ್ ಎಂ.ಎಸ್ ಮತ್ತು ರಾಬರ್ಟ್ಸನ್ಪೇಟೆ ಪಿ.ಎಸ್.ಐ ಮಾಹೇಶ್ ಮಾಲಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande