
ಕೋಲಾರ, ೧೦ ಜೂನ್ (ಹಿ.ಸ) :
ಆ್ಯಂಕರ್ : ಜಿಲ್ಲೆಯ ಮಾಲೂರು ತಾಲ್ಲೂಕು, ಕಸಬಾ ಹೋಬಳಿ, ತೊರ್ನಹಳ್ಳಿ ಗ್ರಾಮದ ಸರ್ಕಾರಿ ಜಮೀನುಗಳಿಗೆ ಅಕ್ರಮ ದಾಖಲೆ ಸೃಷ್ಟಿಸಿ ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಿ ಸುಮಾರು ೮೦ ಕೋಟಿ ರೂ ಸರ್ಕಾರಕ್ಕೆ ನಷ್ಟ ಉಂಟು ಮಾಡಲು ಕಾರಣರಾಗಿರುವ ಅಲ್ಲಿನ ತಹಸೀಲ್ದಾರ್ ರೂಪ, ಕಂದಾಯ ನಿರೀಕ್ಷಕ ಬಿ.ವಿ.ಅರುಣ್ಕುಮಾರ್, ಗ್ರಾಮ ಲೆಕ್ಕಾಧಿಕಾರಿ ದೀಪಕ್ ಮತ್ತು ಕಛೇರಿ ವಿಷಯನಿರ್ವಾಹಕಿ ಚಿತ್ರ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಮಾಜಿ ಶಾಸಕ ಕೆ.ಎಸ್.ಮಂಜುನಾಥಗೌಡ ನೇತೃತ್ವದಲ್ಲಿ ಎಂ. ಬಾಬು ಎಂಬುವವರು ಲೋಕಾಯುಕ್ತ ಪೊಲೀಸ್ ಅಧೀಕ್ಷಕರಿಗೆ ಬುಧವಾರ ದೂರು ಸಲ್ಲಿಸಿದರು.
ಮಾಲೂರು ತಾಲ್ಲೂಕು, ಕಸಬಾ ಹೋಬಳಿ, ತೊರ್ನಹಳ್ಳಿ ಗ್ರಾಮದ ಸರ್ಕಾರಿ ಜಮೀನುಗಳಾದ ಸ.ನಂ.೨೭೭/೩, ೨೭೭/೪, ೨೮೦, ೨೮೨/೧, ೨೮೨/೩, ೨೮೩/೨, ೨೮೩/೪, ೨೮೪/೧, ೨೮೪/೭, ೨೮೫/೧, ೨೮೫/೩ ಸರ್ಕಾರಿ ಜಮೀನುಗಳಿಗೆ ಅಕ್ರಮ ದಾಖಲೆ ಸೃಷ್ಟಿಸಿ ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಿದ್ದಾರೆ ಎಂದು ದಾಖಲೆಗಳೊಂದಿಗೆ ಲೋಕಾಯುಕ್ತ ಅಧಿಕ್ಷಕರಿಗೆ ದೂರು ಸಲ್ಲಿಸಲಾಯಿತು.
ಸದರಿ ನಕಲಿ ದಾಖಲೆಗಳ ಸೃಷ್ಟಿಗೆ ಮಾಲೂರು ತಹಸೀಲ್ದಾರ್ ರೂಪ ಅವರು, ಎಂ.ಆರ್.ನA.ಊ.೩೬/೨೦೨೪-೨೫ ರಂತೆ ಮುನಿಶಾಮಪ್ಪ ಅಕ್ರಮವಾಗಿ ಖಾತೆ ಮಾಡಲಾಗಿದೆ. ಈ ಅಕ್ರಮ ಖಾತೆಯನ್ನು ಮಾಡಲು ಕಂದಾಯ ನಿರೀಕ್ಷಕ ಬಿ.ವಿ.ಅರುಣ್ಕುಮಾರ್, ಗ್ರಾಮ ಲೆಕ್ಕಾಧಿಕಾರಿ ದೀಪಕ್ ಮತ್ತು ಕಛೇರಿ ವಿಷಯನಿರ್ವಾಹಕ ಚಿತ್ರ ರವರು ಸೃಷ್ಟಿತ ದಾಖಲೆಗಳು ನೈಜವಾಗಿರುತ್ತದೆ ಎಂದು ವರದಿ ನೀಡಿ ತಪ್ಪೆಸಗುವ ಮೂಲಕ ಸರ್ಕಾರಕ್ಕೆ ನಷ್ಟವುಂಟು ಮಾಡಿದ್ದಾರೆ ಎಂದು ದೂರಿದರು.
ಮೇಲ್ಕಂಡ ಸರ್ವೆ ನಂಬರಿಗಳಿಗೆ ಸಂಬAಧಿಸಿದAತೆ ೧೯೮೨ ರಿಂದ ೧೯೮೫ ರವರೆಗೂ ಆದಂತಹ ನಡವಳಿಗಳ ಪ್ರಕಾರ ತಹಶೀಲ್ದಾರ್ ಮಾಲೂರು ರವರ ನಂ.ಎಲ್ಎನ್ಡಿ:೯೩/೮೨-೮೩, ದಿನಾಂಕ:೩೦-೦೯-೧೯೮೨ ರವರ ಆದೇಶದಂತೆ ಈ ಹಿಂದೆ ಕೆಲವರಿಗೆ ಮಂಜೂರಿಯಾಗಿದ್ದು, ಈ ಮಂಜೂರಿಗೆ ಸಂಬAಧಿಸಿದAತೆ ಕೆಳಕಂಡ ನ್ಯಾಯಾಲಯಗಳಲ್ಲಿ ಮೇಲ್ಮನವಿ (ಹಾಲಿ ಈಗ ದಾಖಲೆಗಳನ್ನು ತಮ್ಮ ಹೆಸರಿಗೆ ಸೃಷ್ಟಿಸಿಕೊಂಡಿರುವ ಮುನಿಶಾಮಪ್ಪ ಬಿನ್ ಚಿಕ್ಕಬಸಪ್ಪ ಹಾಗೂ ವೆಂಕಟರವಣಪ್ಪ ರವರ ವಾರಸುದಾರರು) ದಾಖಲಿಸಿರುತ್ತಾರೆ. ಇದಕ್ಕೆ ಸಂಬAಧಿಸಿದAತೆ ಈ ಕೆಳಕಂಡ ನ್ಯಾಯಾಲಯಗಳಲ್ಲಿ ಆದೇಶವಾಗಿರುವುದು ಗೊತ್ತಿದ್ದರೂ ಸಹ ಅಕ್ರಮವಾಗಿ ದಾಖಲೆಗಳನ್ನು ಸೃಷ್ಟಿಸಿ ಖಾತೆ ಮಾಡಿದ್ದಾರೆ ಎಂದು ನ್ಯಾಯಾಲಯದ ಆದೇಶಗಳೊಂದಿಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸಹಾಯಕ ಕಮೀಷನರ್, ಕೋಲಾರ ಉಪ-ವಿಭಾಗ ರವರ ನ್ಯಾಯಾಲಯದ ಪ್ರಕರಣ ಸಂಖ್ಯೆ: ಆರ್.ಎ-೪೨/೮೩-೮೪ ಆದೇಶ ದಿನಾಂಕ:೩೦-೧೦-೧೯೮೪, ಸ್ಪೆಷಲ್ ಡೆಪ್ಯೂಟಿ ಕಮೀಷನರ್ ಕೋಲಾರ ರವರ ನ್ಯಾಯಾಲಯದ ಪ್ರಕರಣ ಸಂಖ್ಯೆ:ಆರ್.ಎ:೭೯/೮೪-೮೫ ಆದೇಶ ದಿನಾಂಕ:೦೭-೦೬-೧೯೮೫ , ಮತ್ತು ಕರ್ನಾಟಕ ಅಪೀಲು ಪ್ರಾಧಿಕಾರ ಬೆಂಗಳೂರು ರವರ ರಿವಿಜನ್ ಪಿಟೀಷನ್ ಸಂ:೧೦೬/೮೫ ಆದೇಶ ದಿನಾಂಕ:೦೬-೦೯-೧೯೮೫.
ಈ ಮೇಲ್ಕಂಡ ಸಕ್ಷಮ ಪ್ರಾಧಿಕಾರದಲ್ಲಿ ಸ.ನಂ.೨೭೭, ೨೮೦, ೨೮೨, ೨೮೩, ೨೮೪, ೨೮೫ ರಲ್ಲಿ ಭೂಮಂಜೂರಾತಿಗೆ ಸಂಬAಧಿಸಿದAತೆ ನೀಡಲಾದ ಸ್ಪಷ್ಟವಾದ ಆದೇಶಗಳಿದ್ದರೂ ಎಲ್ಲವನ್ನು ಮರೆಮಾಚಿ ಬೋಗಸ್ ದಾಖಲೆಗಳನ್ನು ಸೃಷ್ಟಿಸಿ ಸುಮಾರು ೫೦-೬೦ಕೋಟಿ ಬೆಲೆ ಬಾಳುವ ಸರ್ಕಾರಿ ಜಮೀನನ್ನು ಖಾಸಗಿ ವ್ಯಕ್ತಿಗಳ ಹೆಸರಿಗೆ ದಾಖಲೆ ಸೃಷ್ಟಿಸಲಾಗಿದೆ ಎಂದು ತಿಳಿಸಿದ್ದಾರೆ.
ವೆಂಕಟರಮಣಪ್ಪ ಬಿನ್ ಮುನಿಯಪ್ಪ ವರ್ಸಸ್ ನಾರಾಯಣರಾವ್ ಇತರೆ ಜೋಡಿದಾರರು ಇವರಿಗೆ ನೀಡಿರುವ ಆದೇಶದಲ್ಲಿ ಪ್ರಕರಣದಲ್ಲಿ ಎದುರುದಾರರಾದ ನಾರಾಯಣರಾವ್ ಜೋಡಿದಾರರಿಗೆ ಯಾವುದೇ ಹಕ್ಕು ಇರುವುದಿಲ್ಲ. ಇದು ಸರ್ಕಾರಿ ಖರಾಬು ಆಗಿರುತ್ತದೆ. ಆದರೆ ನಕಲಿ ದಾಖಲೆ ಸೃಷ್ಟಿಸುವಾಗ ಅರ್ಜಿದಾರರಾದ ವೆಂಕಟರಮಣಪ್ಪ ರವರು ``ಸಾಗುವಳಿ ಚೀಟಿ'' ಸಲ್ಲಿಸಿರುವುದಾಗಿ ಉಲ್ಲೇಖಿಸಿರುವುದು ಹಾಸ್ಯಾಸ್ಪದ ಏಕೆಂದರೆ ``ಭೂಮಂಜೂರಾತಿ'' ಸರ್ಕಾರಿ ಜಮೀನಿಗೆ ಅನ್ವಯಿಸುತ್ತದೆ. ``ಸರ್ಕಾರಿ'' ಜಮೀನು ಮಂಜೂರಾತಿಯನ್ನು ಸ್ಪೆಷಲ್ ಡಿ.ಸಿ(ಇನಾಂ ರದ್ದಿತಿಯಾತಿ) ಮಂಜೂರು ಮಾಡಲು ಕಾನೂನಿನಲ್ಲಿ ಅವಕಾಶ ಇರುವುದಿಲ್ಲ ಎಂದು ತಿಳಿಸಿದರು.
ಈ ಅಧಿಕಾರಿಗಳು ಸೃಷ್ಟಿಸಿರುವ ನಕಲಿಯಾದ ಇನಾಂ ಡಿ.ಸಿ ಆದೇಶದಲ್ಲಿ ಉಲ್ಲೇಖಿಸಿರುವ ದಿನಾಂಕ:೧೪-೦೧-೧೯೬೩ ಸರ್ಕಾರಿ ರಜೆ ಮಕರ ಸಂಕ್ರಾAತಿ ಆಗಿರುತ್ತದೆ ಎಂಬುದನ್ನು ಉಲ್ಲೇಖಿಸಿದ್ದು, ತಪ್ಪು ಮಾಡುವಾಗ ರಜೆದಿನ ಎಂಬುದನ್ನು ಮರೆತು ನಕಲಿ ದಾಖಲೆ ಸೃಷ್ಟಿಸಿದ್ದಾರೆ ಎಂದರು.
ಸೃಷ್ಟಿತ ದಾಖಲೆಗಳಿಗೆ ಅಕ್ರಮ ಖಾತೆ, ಸರ್ಕಾರಕ್ಕೆ ೮೦ ಕೋಟಿ ನಷ್ಟವಾಗಿದ್ದು, ಮೇಲ್ಕಂಡ ಸೃಷ್ಟಿತ ದಾಖಲೆಗಳಿಗೆ ರೂಪ, ತಹಶೀಲ್ದಾರ್ ಅವರು ಎಂ.ಆರ್.ನA.ಊ.೩೬/೨೦೨೪-೨೫ ರಂತೆ ಶ್ರೀ ಮುನಿಶಾಮಪ್ಪ ಬಿನ್ ಚಿಕ್ಕಬಸಪ್ಪ ರವರಿಗೆ ಅಕ್ರಮವಾಗಿ ಖಾತೆ ಮಾಡಿರುತ್ತಾರೆ. ಈ ಅಕ್ರಮ ಖಾತೆಯನ್ನು ಮಾಡಲು ಕಂದಾಯ ನಿರೀಕ್ಷಕ ಬಿ.ವಿ.ಅರುಣ್ ಕುಮಾರ್, ಗ್ರಾಮ ಲೆಕ್ಕಾಧಿಕಾರಿ ದೀಪಕ್ ಮತ್ತು ಕಛೇರಿ ವಿಷಯನಿರ್ವಾಹಕಿ ಚಿತ್ರ ಸೃಷ್ಟಿತ ದಾಖಲೆಗಳು ನೈಜವಾಗಿರುತ್ತದೆ ಎಂದು ವರದಿ ನೀಡಿ ಈ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ನ್ಯಾಯಾಲಯಗಳ ಆದೇಶದ ಪ್ರತಿಯನ್ನೂ ದೂರಿನೊಂದಿಗೆ ಲಗತ್ತಿಸಿದ್ದು, ಸದರಿ ಆದೇಶಗಳನ್ನು ಧಿಕ್ಕರಿಸಿ ಸರ್ಕಾರಿ ಜಮೀನಿಗೆ ಬೋಗಸ್ ದಾಖಲೆ ಸೃಷ್ಟಿಸಿ ಅನುಮೋದನೆ ಮಾಡಿ ಸುಮಾರು ೮೦ ಕೋಟಿ ಬೆಲೆ ಬಾಳುವ ಜಮೀನನ್ನು ಖಾಸಗಿ ವ್ಯಕ್ತಿಗಳಿಗೆ ಮಂಜೂರು ಮಾಡಿರುವ ಅಧಿಕಾರಿಗಳು, ನೌಕರರ ಹಾಗೂ ಖಾಸಗಿ ವ್ಯಕ್ತಿಗಳು/ಫಲಾನುಭವಿಗಳು) ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ದೂರು ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಾಸಕ ಮಂಜುನಾಥಗೌಡರೊAದಿಗೆ ದೂರುದಾರ ಅಧಿಕಾರ ಹಟ್ಟಿ ಬಾಬು,ಬನಹಳ್ಳಿ ಮುನಿಸ್ವಾಮಿ ಗೌಡ, ವಕೀಲರಾದ ಕೃಷ್ಣಪ್ಪ,
ರಾಜ್ ಕುಮಾರ್, ಮುಖಂಡರಾದ ಓಬಳಾಪುರ ಶಂಕರ್, ಗೇರಪುರ ನಾಗರಾಜ್, ತೊರ್ನಹಳ್ಳಿ ಮಂಜುನಾಥ್, ಶ್ರೀನಿವಾಸ್ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್