
ಗದಗ, 02 ಮೇ (ಹಿ.ಸ.) :
ಆ್ಯಂಕರ್ : ರಾಜ್ಯ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ಕಾಲೂನಿಗಳ ಅಭಿವೃದ್ದಿಗಾಗಿ 650 ಕೋಟಿ ರೂಪಾಯಿಗಳನ್ನು ಅಲ್ಪಸಂಖ್ಯಾತರ ಕಾಲೂನಿಗಳಿಗೆ ಕೋಡಬೇಕೆಂದು ನಡೆದ ಸಚಿವ ಸಂಪುಟದ ಸಭೆಯಲ್ಲಿ ತೀರ್ಮಾನ ಕೈಗೊಂಡಿದ್ದು ಇದೊಂದು ತಘಲಕ್ ಸರ್ಕಾರದ ತೀರ್ಮಾನವಾಗಿದೆ ಎಂದು ಜಿಲ್ಲಾ ಬಿಜೆಪಿ ವಕ್ತಾರರಾದ ಎಂ.ಎಂ.ಹಿರೇಮಠ ರವರು ರಾಜ್ಯ ಸರ್ಕಾರದ ನಡೆಯನ್ನ ತೀವ್ರವಾಗಿ ಖಂಡಿಸಿದ್ದಾರೆ.
ಸಚಿವ ಸಂಪುಟದ ಸಭೆಯಲ್ಲಿ ಅಲ್ಪಸಂಖ್ಯಾತರಿಗೆ ಮತ್ತೆ 650 ಕೋಟಿ ರೂಪಾಯಿ ನೀಡಲು ತೀರ್ಮಾನ ಕೈಗೊಂಡಿದ್ದು, ಈ ಸರ್ಕಾರ ಮಾತ್ರ ಪದೆ, ಪದೆ ಅಲ್ಪಸಂಖ್ಯಾತರನ್ನು ಓಲೈಸಲು ಹಣವನ್ನು ನೀಡುತ್ತಿರುವುದು. ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಹಿಂದೂಗಳು ಮತಗಳನ್ನು ಹಾಕಿಲ್ಲವೇ? ಮೇಲಿಂದ ಮೇಲೆ ರಾಜ್ಯ ಸರ್ಕಾರ ಹಿಂದೂಗಳಿಗೆ ಅಪಮಾನವನ್ನು ಮಾಡುತ್ತಿರುವುದು ಅಕ್ಷಮ್ಯ ಅಪರಾಧ. ಈ ಕಾಂಗ್ರೆಸ್ ಸರ್ಕಾರದ ಪಾಪದ ಕೊಡ ತುಂಬಿದೆ ಅಲ್ಪಸಂಖ್ಯಾತರನ್ನ ಓಲೈಸುವ ನಿರ್ಧಾರವನ್ನು ಪದೇ, ಪದೆ ಕೈಗೊಳ್ಳುತ್ತಿರುವ ಈ ಸರ್ಕಾರವನ್ನು ರಾಜ್ಯದ ಜನ ಕ್ಷಮಿಸುವುದಿಲ್ಲಾ.
ಹಿಂದೂಗಳ ಅಭಿವೃದ್ದಿಗಾಗಿ 1 ಪೈಸೆಯನ್ನು ಕೂಡ ಕೊಡದೇ ಕೇವಲ ಅಲ್ಪಸಂಖ್ಯಾತರ ಓಲೈಸಲು ಪ್ರತಿವರ್ಷ ಸಾವಿರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿರುವುದು.
ರಾಜ್ಯದ ಮುಖ್ಯಮಂತ್ರಿ ಹೋದಲ್ಲಿ, ಬಂದಲ್ಲಿ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಅಂತ ಹೇಳುತ್ತಾ ಹೋಗುತ್ತಿರುವರು. ಕೇಂದ್ರ ಸರ್ಕಾರ ಯಾವುದೇ ಯೋಜನೆಗಳನ್ನು ಮಾಡಿದರೂ ಜಾತಿ ಬೇಧ ಎನಿಸದೇ ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೂ ಕೂಡ ಆ ಯೋಜನೆಯ ಲಾಭ ತಟ್ಟುವ ಹಾಗೆ ನೀತಿ ನಿರೂಪಣೆ ಮಾಡುವದು. ಆದರೆ ರಾಜ್ಯದಲ್ಲಿರುವ ಕಾಂಗ್ರೇಸ್ ಸರ್ಕಾರ ತನ್ನ ಓಟಿನ ಆಸೆಗಾಗಿ ಹಿಂದೂಗಳಿಗೆ ತೀವ್ರವಾದ ಅಪಮಾನ ಮಾಡುತ್ತಿರುವುದು.
ದಾವಣಗೇರಿ ಉಪಚುನಾವಣೆಯಲ್ಲಿ ಅಲ್ಪಸಂಖ್ಯಾತರಿಗೆ ಟೀಕೆಟ್ ಕೋಡದೇ ಅವರಿಗೆ ಮೋಸ ಮಾಡಿದ್ದಕ್ಕಾಗಿ ಅವರನ್ನು ಓಲೈಸಲು ನೂರಾರೂ ಕೋಟಿ ಹಣವನ್ನು ಅಲ್ಪಸಂಖ್ಯಾತರಿಗಾಗಿ ನೀಡುತ್ತಿರುವರು. ರಾಜ್ಯದ ಬಜೆಟ್ನಲ್ಲಿಯೂ ಕೂಡ ಅಲ್ಪಸಂಖ್ಯಾತರಿಗಾಗಿ ಶಾಲಾ, ಕಾಲೇಜು, ವಿಶೇಷ ಹಾಸ್ಟೇಲ್, ಮಹಿಳೆಯರಿಗಾಗಿ ವಿಶೇಷ ತರಬೇತಿ, ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುವರಿಗಾಗಿ ಲಕ್ಷಾಂತರೂಪಾಯಿ ಧನ ಸಹಾಯ ಮಾಡುತ್ತಿರುವರು. ಕಾಂಗ್ರೇಸ್ ವಿರುದ್ಧ ಮುಸ್ಲಿಂರು ತಿರುಗಿ ಬಿದ್ದಿದ್ದಾರೆ. ಹಲವರು ಪಕ್ಷದಿಂದ ಅಮಾನತ್ತ ಆಗಿದ್ದಾರೆ. ಹೀಗಾಗಿ ಸರ್ಕಾರ ಪ್ಯಾಚ್ಪ್ಗೆ ಮುಂದಾಗಿದ್ದು 650 ಕೋಟಿ ರೂಪಾಯಿ ಮೀಸಲಿಡುವ ತೀರ್ಮಾನ ಮಾಡಿದೆ.
ಆದರೆ ಮುಸ್ಲಿಂರ ಮನಸ್ಸು ಮುರಿದು ಹೋಗಿದೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆ ಕೈಕೊಟ್ಟಿದ್ದಾರೆ.
ರಾಜ್ಯ ಸರ್ಕಾರ ಇನ್ನಾದರೂ ಕೇವಲ ಅಲ್ಪಸಂಖ್ಯಾತರನ್ನು ಓಲೈಸುವುದನ್ನು ಬಿಟ್ಟು ಸಮಾಜದ ಎಲ್ಲ ಜನತೆಗೆ ಸರ್ಕಾರದ ಯೋಜನೆಗಳು ತಲುಪುವ ಹಾಗೆ ಕ್ರಮಕೈಗೊಳ್ಳಬೇಕು. ರಾಜ್ಯ ಸರ್ಕಾರ ದಿವಾಳಿಯಾಗಿದ್ದು ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದು ಹೋಗಿದೆ. ಮುಖ್ಯಮಂತ್ರಿ ಹಾಗು ಉಪಮುಖ್ಯಮಂತ್ರಿಗಳ ಗುದ್ದಾಟದಿಂದ ರಾಜ್ಯದ ಅಭಿವೃದ್ದಿಗೆ ತೀವ್ರವಾದ ಹಿನ್ನೆಡೆಯಾಗಿದ್ದು ಆಡಳಿತದ ಕಡೆ ಲಕ್ಷ ಕೋಡಬೇಕೆಂದು ಜಿಲ್ಲಾ ಬಿಜೆಪಿ ವಕ್ತಾರರಾದ ಎಂ.ಎಂ.ಹಿರೇಮಠರವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP