
ಕೋಲಾರ, ೦೨ ಮೇ (ಹಿ.ಸ) :
ಆ್ಯಂಕರ್ : ನಗರದ ಪಿ.ಸಿ.ಬಡಾವಣೆಯ ರೇಣುಕಾಯಲ್ಲಮ್ಮ ಸೇವಾ ಸಮಿತಿ ವತಿಯಿಂದ ರೇಣುಕಾ ಯಲ್ಲಮ್ಮ ದೇವಿಯ ಹೂವಿನ ಕರಗ ಮಹೋತ್ಸವ ಅದ್ದೂರಿಯಿಂದ ನಡೆದಿದ್ದು, ಕರಗದ ಪೂಜಾರಿ ಬಿ.ವಿ.ಮಂಜುನಾಥ್ರ ಅಭೂತಪೂರ್ವ ನೃತ್ಯಕ್ಕೆ ಸಹಸ್ರಾರು ಮಂದಿ ಸಾಕ್ಷಿಯಾಗಿದ್ದ ಜನಸ್ತೋಮದ ಕರತಾಡನ ಮುಗಿಲು ಮುಟ್ಟಿತ್ತು.
ಕರಗ ಹೊತ್ತ ಕರಗದ ಪೂಜಾರಿ ಬೇತಮಂಗಲ ಮಂಜುನಾಥ್ ಹೊರ ಬರುತ್ತಿದ್ದಂತೆ ಗೋವಿಂದಾ, ಗೋವಿಂದಾ ಜೈಕಾರಗಳೊಂದಿಗೆ ಜನರ ಕರತಾಡನ ಮುಗಿಲು ಮುಟ್ಟಿತು. ದೇವಾಲಯದ ಮುಂಭಾಗ ನಿರ್ಮಿಸಿದ್ದ ಸುಂದರ ವೇದಿಕೆಯಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಡೆದ ವಿವಿಧ ಭಂಗಿಗಳಿ0ದ ಕೂಡಿದ ಕರಗ ನೃತ್ಯ ಜನಮನ ಸೂರೆಗೊಂಡಿತು. ಕರಗದ ಪೂಜಾರಿ ಮಂಜುನಾಥ್ರ ವಿವಿಧ ಭಂಗಿಗಳ ನೃತ್ಯಕ್ಕೆ ತಮಟೆ ವಾದ್ಯದ ನಾದ ಮುದ ನೀಡಿದ್ದು, ಕರಗದ ಪೂಜಾರಿ ಮಾಡಿದ ನೃತ್ಯಕ್ಕೆ ಜನರ ಕರತಾಡನ ಮುಗಿಲು ಮುಟ್ಟಿತು. ಇದೇ ಸಂದರ್ಭದಲ್ಲಿ ಕರಗದೊಂದಿಗೆ ವಿವಿಧ ದೇವರುಗಳ ಭವ್ಯ ಪಲ್ಲಕ್ಕಿ ಮೆರವಣಿಗೆ ತಮಟೆ,ವಾದ್ಯಗಳ ವಿನಾದಕ್ಕೆ ಜನ ಕುಣಿತು ಕುಪ್ಪಳಿಸಿದರು. ದೇವಾಲಯ ಸಮಿತಿ ಅಧ್ಯಕ್ಷ ಕೆ.ಗಣೇಶ್ ಇದೇ ಮೊದಲ ಬಾರಿಗೆ ಕೇರಳದಿಂದ ಚಂಡೆ ವಾದ್ಯ, ವಿವಿಧ ದೇವರುಗಳ ವೇಷಧಾರಿಗಳು ಗಮನ ಸೆಳೆದರು.
ಇದೇ ಸಂದರ್ಭದಲ್ಲಿ ದೇವಾಲಯ ಸಮಿತಿ ಸದಸ್ಯ ಹಾಗೂ ಕಲಾವಿದ ರ್ಮುಗಂ ಪಂಜಿನ ನೃತ್ಯ ನಡೆಸಿಕೊಟ್ಟು ರಂಜಿಸಿದರು.
ಹಸಿ ಕರಗ ಮಹೋತ್ಸವದಲ್ಲಿ ಅರ್ಚಕ ಸುರೇಶಾಚಾರ್ಯ ಪೂಜೆ ನಡೆಸಿಕೊಟ್ಟಿದ್ದು, ಕರಗದ ಪೂಜಾರಿ ಬಿ.ವಿ.ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಕೆ.ಜಯದೇವ್, ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್, ಮಾರ್ಕೊಂಡಪ್ಪ, ಗೋಪಿ,ಮೂರ್ತಿ, ಸಂತೋಷ್, ದೇವಾಲಯ ಸಮಿತಿ ಅಧ್ಯಕ್ಷ ಗಣೇಶ್, ಉಪಾಧ್ಯಕ್ಷ ಚಂದ್ರಪ್ರಕಾಶ್, ದೇವಾಲಯ ಸಮಿತಿ ಖಜಾಂಚಿ ಕೆ.ಎಸ್.ಮಂಜುನಾಥ್, ಕಾರ್ಯದರ್ಶಿ ಕಲಾ ರಮೇಶ್, ಉಪಕಾರ್ಯದರ್ಶಿ ವಿ.ಸುರೇಶ್, ಸಂತೋಷ್, ರ್ಮುಗಂ, ಟಿ.ಸಂಪತ್ ಕುಮಾರ್,ಎ.ಮಹೇಶ್, ಮೇಸ್ತಿç ಕೃಷ್ಣಪ್ಪ, ಗೋವಿಂದರಾಜು, ಸಿ.ಶ್ರೀನಿವಾಸ್, ವೆಂಕಟೇಶಪ್ಪ, ಮುತ್ತಪ್ಪ, ಗಣೇಶ್ ಹಾಗೂ ರೇಣುಕಾ ಯಲ್ಲಮ್ಮ ಮಿತ್ರಬಳಗದ ಪದಾಧಿಕಾರಿಗಳು ಹಾಗೂ ರೇಣುಕಾ ಯಲ್ಲಮ್ಮ ಮಿತ್ರಬಳಗದ ಸದಸ್ಯರು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್