ಕುಡತಿನಿ ಭೂ ಸಂತ್ರಸ್ತರ ಸರಣಿ ಉಪವಾಸ ಸತ್ಯಾಗ್ರಹ
ಬಳ್ಳಾರಿ, 01 ಮೇ (ಹಿ.ಸ.) : ಆ್ಯಂಕರ್ : ಕುಡತಿನಿ ಭೂ ಸಂತ್ರಸ್ತರು ಮೇ 2ರ ಶನಿವಾರದಿಂದ ಸರಣಿ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದು, ಬಳ್ಳಾರಿ ಬಂದ್ ಆಚರಿಸಲು ಚಿಂತನೆ ನಡೆಸಿದ್ದಾರೆ ಎಂದು ಭೂ ಸಂತ್ರಸ್ತ ಹೋರಾಟಗಾರರ ಮುಖಂಡ ಜೆ. ಸತ್ಯಬಾಬು ಅವರು ತಿಳಿಸಿದ್ದಾರೆ. ಪತ್ರಿಕಾ ಭವನದಲ್
ಕುಡತಿನಿ ಭೂ ಸಂತ್ರಸ್ತರ ಸರಣಿ ಉಪವಾಸ ಸತ್ಯಾಗ್ರಹ : `ರಿಪಬ್ಲಿಕ್ ಆಫ್ ಜಿಂದಾಲ್'


ಬಳ್ಳಾರಿ, 01 ಮೇ (ಹಿ.ಸ.) :

ಆ್ಯಂಕರ್ : ಕುಡತಿನಿ ಭೂ ಸಂತ್ರಸ್ತರು ಮೇ 2ರ ಶನಿವಾರದಿಂದ ಸರಣಿ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದು, ಬಳ್ಳಾರಿ ಬಂದ್ ಆಚರಿಸಲು ಚಿಂತನೆ ನಡೆಸಿದ್ದಾರೆ ಎಂದು ಭೂ ಸಂತ್ರಸ್ತ ಹೋರಾಟಗಾರರ ಮುಖಂಡ ಜೆ. ಸತ್ಯಬಾಬು ಅವರು ತಿಳಿಸಿದ್ದಾರೆ.

ಪತ್ರಿಕಾ ಭವನದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೆಐಎಡಿಬಿಯು ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದೆ. ಸರ್ಕಾರ ಕಡಿಮೆ ಬೆಲೆಗೆ ರೈತರ ಭೂಮಿಗಳನ್ನು ಖರೀದಿ ಮಾಡಿ, ಹೆಚ್ಚಿನ ಬೆಲೆಗೆ ಕೈಗಾರಿಕೆಗಳಿಗೆ ಮಾರಾಟ ಮಾಡುತ್ತಿದೆ. ಇದನ್ನು ಖಂಡಿಸಿ ಮೂರು ವರ್ಷಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ, ಸರ್ಕಾರ ಭೂ ಸಂತ್ರಸ್ತರ ಪರವಾಗಿ ಯಾವುದೇ ನಿರ್ಣಯಗಳನ್ನು ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ಸರ್ಕಾರ, ಕೆಐಎಡಿಬಿ ಮತ್ತು ಜಿಲ್ಲಾ ಅಧಿಕಾರಿಗಳು - ಸಂಸದರು ಹಾಗೂ ಕುಡತಿನಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವವರ ವಿರುದ್ಧ ಕುಡತಿನಿಯಲ್ಲಿ ಪ್ರತಿಭಟನೆ ನಡೆಯುತ್ತಿರುವ ಸ್ಥಳದಲ್ಲಿಯೇ ಸರಣಿ ಉಪವಾಸ ಸತ್ಯಾಗ್ರಹವನ್ನು ಶನಿವಾರದಿಂದ ಪ್ರಾರಂಭಿಸಲಿದ್ದೇವೆ. ನಮ್ಮ ಬೇಡಿಕೆಗಳ ಈಡೇರಿಕೆಗೆ ಸೂಕ್ತ ಸ್ಪಂದನೆ ಸಿಗದೇ ಇದ್ದಲ್ಲಿ `ಬಳ್ಳಾರಿ ಬಂದ್' ಮೂಲಕ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸುತ್ತೇವೆ ಎಂದರು.

ಬಳ್ಳಾರಿಯು ಈವರೆಗೆ ರಿಪಬ್ಲಿಕ್ ಆಫ್ ರೆಡ್ಡಿಗಳು ಆಗಿತ್ತು. ಈಗ, ಬಳ್ಳಾರಿ ಜಿಲ್ಲೆಯು `ರಿಪಬ್ಲಿಕ್ ಆಫ್ ಜಿಂದಾಲ್' ಆಗಿದೆ. ಪರಿಸ್ಥಿತಿ ಹೀಗೇ ಮುಂದುವರೆದಲ್ಲಿ ಜಿಂದಾಲ್ ಕಂಪನಿಯು ಇಡೀ ಜಿಲ್ಲೆಯನ್ನು ಮತ್ತು ಜಿಲ್ಲಾಡಳಿತವನ್ನು ತಮ್ಮ ಕಪಿಮುಷ್ಠಿಯಲ್ಲಿ ಇರಿಸಿಕೊಂಡು, ವ್ಯವಸ್ಥೆಯನ್ನು ತನ್ನ ಕೈಗೊಂಬೆ ಮಾಡಿಕೊಳ್ಳಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ತಿಪ್ಪೇಸ್ವಾಮಿ ಇನ್ನಿತರರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande