ಕೊಪ್ಪಳ : 182ನೇ ದಿನದ ಬಲ್ಡೋಟ ಹಟಾವೋ ಧರಣಿ
ಕೊಪ್ಪಳ, 01 ಮೇ (ಹಿ.ಸ.) : ಆ್ಯಂಕರ್ : ನಗರ ಸಭೆ ಆವರಣದ ಮಾಲಿನ್ಯಕಾರಿ ಕಾರ್ಖಾನೆ ತೊಲಗಿಸಿ ಧರಣಿ 182 ದಿನ ಪೂರೈಸಿತು. 2011ರಿಂದ ಕೊಪ್ಪಳ ನಗರಕ್ಕೆ ಹೊಂದಿಕೊಂಡು ಕಾರ್ಯಾಚರಣೆ ಮಾಡುತ್ತಿರುವ ಬಲ್ಡೋಟ ಎಂಎಸ್ಪಿಎಲ್ ಪೆಲ್ಲೆಟ್ ಘಟಕ ನಗರದ ಅರ್ಧ ಭಾಗ ಮಾಲಿನ್ಯ ಮಾಡುತ್ತಿದ್ದು, ಜಿಲ್ಲಾಧಿಕಾರಿ ಕಚೇರಿ
ಕೊಪ್ಪಳ: 182ನೇ ದಿನದ ಬಲ್ಡೋಟ ಹಟಾವೋ ಧರಣಿ ಪೂರ್ಣ


ಕೊಪ್ಪಳ: 182ನೇ ದಿನದ ಬಲ್ಡೋಟ ಹಟಾವೋ ಧರಣಿ ಪೂರ್ಣ


ಕೊಪ್ಪಳ, 01 ಮೇ (ಹಿ.ಸ.) :

ಆ್ಯಂಕರ್ : ನಗರ ಸಭೆ ಆವರಣದ ಮಾಲಿನ್ಯಕಾರಿ ಕಾರ್ಖಾನೆ ತೊಲಗಿಸಿ ಧರಣಿ 182 ದಿನ ಪೂರೈಸಿತು. 2011ರಿಂದ ಕೊಪ್ಪಳ ನಗರಕ್ಕೆ ಹೊಂದಿಕೊಂಡು ಕಾರ್ಯಾಚರಣೆ ಮಾಡುತ್ತಿರುವ ಬಲ್ಡೋಟ ಎಂಎಸ್ಪಿಎಲ್ ಪೆಲ್ಲೆಟ್ ಘಟಕ ನಗರದ ಅರ್ಧ ಭಾಗ ಮಾಲಿನ್ಯ ಮಾಡುತ್ತಿದ್ದು, ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಆಸ್ಪತ್ರೆ, ಕವಲೂರು ಬಡಾವಣೆ, ಗವಿಶ್ರೀನಗರ, ಡಾಲರ್ಸ್ ಕಾಲೊನಿ, ಸದಾಶಿವನಗರ, ಶ್ರೀಗವಿಮಠ, ದಿವಟರನಗರ, ಬಿ.ಟಿ.ಪಾಟೀಲ್ ನಗರ, ಕಲ್ಯಾಣ ನಗರ, ಅಗಡಿ ಲೇಔಟ್ ತೀವ್ರ ಧೂಳು ಬಾಧಿತವಾಗಿವೆ. ಈ ಕಾರ್ಖಾನೆಯ ಏಕೈಕ ಚಿಮಣಿ ಇಷ್ಟು ಪ್ರದೇಶದ ಪರಿಸರ ಮಾಲಿನ್ಯ ಮಾಡುತ್ತಿದೆ. ಇದಲ್ಲದೆ ಹಿರೇಬಗನಾಳ, ಅಲ್ಲಾನಗರ ಸುತ್ತಲಿನ ಸ್ಪಾಂಜ್ ಐರನ್, ಪೆಲ್ಲೆಟ್ ಘಟಕಗಳನ್ನು ಕೇಂದ್ರ ಪರಿಸರ ಇಲಾಖೆ ಶಿಫಾರಸು ಮಾಡಿರುವಂತೆ ಶೀಘ್ರದಲ್ಲಿ ಸ್ಥಳಾಂತರ ಮಾಡಬೇಕು. ಬಲ್ಡೋಟ ಅತಿಕ್ರಮಿಸಿರುವ ಬಸಾಪುರ ಕೆರೆಯನ್ನು ಹೈಕೋರ್ಟ್ ಆದೇಶದಂತೆ ಸುತ್ತಲಿನ ಗ್ರಾಮಗಳ ಜಾನುವಾರು ನೀರು ಕುಡಿಯಲು ಮುಕ್ತಗೊಳಿಸಬೇಕು. ತುಂಗಭದ್ರಾ ವಿಷಗೊಳಿಸುವ ಕಾರ್ಖಾನೆಗಳನ್ನು ಮುಚ್ಚಬೇಕು, ಎಐಐಎಂಸ್, ಐಐಎಸ್ಸಿ ಸಂಸ್ಥೆಗಳಿಂದ ಕಾರ್ಖಾನೆ ಮಾಲಿನ್ಯ ಬಾಧಿತ 22 ಹಳ್ಳಿ ಜನರ ಆರೋಗ್ಯ ಮತ್ತು ಪರಿಸರ, ತುಂಗಭದ್ರಾ ನೀರು ವಿಷಗೊಳಿಸಿದ್ದರ ಸಮೀಕ್ಷೆ ನಡೆಸಬೇಕು. ಬಾಧಿತ ಹಳ್ಳಿಗಳ ಪುನರುಜ್ಜೀವನಕ್ಕಾಗಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ನಡೆಯುತ್ತಿರವ ಅನಿರ್ದಿಷ್ಟ ಧರಣಿ ವೇದಿಕೆಯ 200ನೇ ದಿನದ ಹೋರಾಟ ಬೆಂಬಲಿಸಲು ಹಂಪಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರು, ಕೊಪ್ಪಳ ಅಭಿವೃದ್ಧಿ ಬಗ್ಗೆ ಪುಸ್ತಕ ಬರೆದ, ಖ್ಯಾತ ಆರ್ಥಿಕ ತಜ್ಞ ಟಿ.ಆರ್.ಚಂದ್ರಶೇಖರ ಅವರು ಅತಿಥಿಯಾಗಿ ಆಗಮಿಸುತ್ತಾರೆ ಎಂದು ಸಂಘಟಕರು ತಿಳಿಸಿದರು.

ಧರಣಿಯಲ್ಲಿ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಮಹಾಂತೇಶ ಕೊತಬಾಳ, ನಟರಾಜ ಸವಡಿ, ವಿದ್ಯಾರ್ಥಿನಿಗಳಾದ ಪ್ರಗತಿ ಕೆ.ವಿ.ಎಸ್, ಉಮಾದೇವಿ, ಶಂಭುಲಿಂಗಪ್ಪ ಹರಗೇರಿ, ರಾಜಶೇಖರ ಏಳುಭಾವಿ, ಶಿವಾನಂದಯ್ಯ ಬೀಳಗಿಮಠ, ಯಮನೂರಪ್ಪ ಹಾಲಳ್ಳಿ ಬಸಾಪುರ, ಹನುಮಂತ ತಳವಾರ ಬಸಾಪುರ, ಎಂ.ಡಿ. ಬಸೀರ್ ಅರಗಂಜಿ, ಭೀಮಪ್ಪ ಯಲಬುರ್ಗಾ, ರತ್ನಮ್ಮ, ಗಂಗಮ್ಮ ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande