ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿ ವಿಜೇತರಿಗೆ ಅಭಿನಂದನೆ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿ ವಿಜೇತರಿಗೆ ಅಭಿನಂದನೆ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿ ವಿಜೇತರಿಗೆ ಕೋಲಾರದಲ್ಲಿ ಅಭಿನಂದಿಸಲಾಯಿತು.


ಕೋಲಾರ, 0೩ ಎಪ್ರಿಲ್ (ಹಿ.ಸ.) :

ಆ್ಯಂಕರ್ : ಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿಗಳನ್ನು ಜನರು ಗುರುತಿಸಿ ಶ್ಲಾಘಿಸುವಂತೆ ಆದಾಗ ಮಾತ್ರ ಪತ್ರಕರ್ತರಾಗಿರುವುದು ಸಾರ್ಥಕವಾಗುತ್ತದೆ. ಸುದ್ದಿಗಳು ಕಾಪಿ ರೈಟ್ ಇಲ್ಲದೆ ವಿಭಿನ್ನ. ವಿಶಿಷ್ಟತೆಯನ್ನು ಹೊಂದಿರುವಂತ ಸುದ್ದಿಗಳನ್ನು ಬರೆಯುವ ಮೂಲಕ ಓದುಗರ ಗಮನ ಸೆಳೆಯುವಂತೆ ಆದಾಗ ಮಾತ್ರ ಪತ್ರಕರ್ತರು ಪ್ರತಿಭಾವಂತರಾಗಿ ಸಮಾಜದಲ್ಲಿ ಗುರುತಿಸಲು ಸಾಧ್ಯವಾಗುವುದು ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಕೆ.ಚಂದ್ರಶೇಖರ್ ಅಭಿಪ್ರಾಯಪಟ್ಟರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕೊಡ ಮಾಡುವ ೨೦೨೪ನೇ ಸಾಲಿನಲ್ಲಿ ಸುಣ್ಣವಂಡ ಶ್ರೀನಿವಾಸ್ ಚಂಗಪ್ಪ ಪ್ರಶಸ್ತಿಗೆ ಭಜನರಾದ ಮುಳಬಾಗಿಲಿನ ಹಿರಿಯ ಪತ್ರಕರ್ತರಾದ ಎ.ಅಪ್ಪಾಜಿಗೌಡ ಮತ್ತು ಮಂಡ್ಯದ ಕೆ.ಪ್ರಹ್ಲಾದ ರಾವ್ ಪ್ರಶಸ್ತಿಗೆ ಭಜನರಾದ ಬಂಗಾರಪೇಟೆ ವರದಿಗಾರರಾದ ಕೆ.ರಮೇಶ್ ಅವರಿಗೆ ನಗರದ ಪತ್ರಕರ್ತರ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ್ದ ಅಭಿನಂದನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಂತೆ ಪತ್ರಿಕೋದ್ಯಮದಲ್ಲಿ ಸಾಧನೆ ಮಾಡಿದವರಿಗೆ ಸ್ವಲ್ಪ ತಡವಾಗಿಯಾದರೂ ಪ್ರಶಸ್ತಿ ಸಿಗುವುದು ಖಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ನಮ್ಮ ಬರವಣಿಗೆ ಮೂಲಕ ಜನರು ನಮ್ಮನ್ನು ಗುರುತಿಸುತ್ತಾರೆ ಹೊರತು ಪತ್ರಕರ್ತರ ಸಂಘದಲ್ಲಿ ನಾನು ಪದಾಧಿಕಾರಿಯಾದರೆ ನಮ್ಮನ್ನ ಜನರು ಗುರುತಿಸುತ್ತಾರೆ ಎಂಬ ಭ್ರಮೆಯಲ್ಲಿ ಕೆಲವು ಪತ್ರಕರ್ತರು ಇದ್ದಾರೆ. ಪ್ರಶಸ್ತಿಗಳು ಸುಮ್ಮನೆ ಬರೋದಿಲ್ಲ ನಮ್ಮ ಬರವಣಿಗೆ ನಮಗೆ ಎಲ್ಲಾ ರೀತಿಯ ಅವಕಾಶಗಳನ್ನು ಒದಗಿಸುತ್ತದೆ. ಪತ್ರಕರ್ತರಿಗೆ ಪ್ರಶಸ್ತಿಗಳು ಬಂದಾಗ ಅವರನ್ನ ಪ್ರೋತ್ಸಾಹಿಸುವ ಕೆಲಸ ಮಾಡಬೇಕು. ಅದು ಬಿಟ್ಟು ಅಸೂಹೆ ಪಡಬಾರದು. ಪತ್ರಕರ್ತರ ಸಂಘದಿಂದ ಪ್ರಶಸ್ತಿ ಪುರಸ್ಕೃತರನ್ನು ಪ್ರೋತ್ಸಾಹಿಸುವ ಕೆಲಸ ಮಾಡಿಕೊಂಡು ಬರುತ್ತಿದ್ದೇವೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಖಜಾಂಜಿ ವಾಸುದೇವ ಹೊಳ್ಳ ಮಾತನಾಡಿ ಪ್ರಶಸ್ತಿಗೆ ಭಜನರಾದವರನ್ನು ಅಭಿನಂಧಿಸಿ ಗೌರವಿಸ ಬೇಕಾಗಿರುವುದು ಪ್ರತಿಯೊಬ್ಬ ಪತ್ರಕರ್ತರ ಜವಾಬ್ದಾರಿಯಾಗಿದೆ. ಅಭಿನಂದಿಸಿ ಗೌರವಿಸುವುದು ಇತರೆ ಪತ್ರಕರ್ತರಿಗೆ ಪೇರಣೆಯಾಗಲಿದೆ ಎಂದರು.

ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಬೇಕಾದರೆ ನಿಯಮಗಳನ್ನು ಹೊಂದಿದ್ದು ಅವರ ಲೇಖನಗಳನ್ನು ತೊಗಿ ಅಳೆದು ಪರಿಶೀಲಿಸಿ ನಿರ್ದರಿಸಲಾಗುವುದು ಯಾವೂದೇ ರೀತಿ ಒತ್ತಡ, ಲಾಭಿಗಳಿಗೆ ಸಂಘವು ಮಣಿಯದು ಎಂದ ಅವರು ಪ್ರಶಸ್ತಿಗೆ ಕೋಲಾರ ಜಿಲ್ಲೆಯಿಂದ ಕೇವಲ ೨ ಮಾತ್ರ ಆಯ್ಕೆಯಾಗಿದ್ದಾರೆ. ಜಿಲ್ಲೆಯಲ್ಲಿ ಬಹುತೇಕ ಪ್ರತಿಭೆಗಳಿದ್ದರೂ ಅರ್ಜಿಗಳನ್ನು ಹಾಕದೆ ನಿರ್ಲಕ್ಷಿಸಿರುವುದ ವಿಷಾಧನೀಯ ಸಂಗತಿಯಾಗಿದೆ ಎಂದು ಹೇಳಿದರು.

ರಾಜ್ಯ ಪತ್ರಕರ್ತರ ಸಂಘದ ನಿರ್ದೇಶಕರಾದ ವಿ.ಮುನಿರಾಜು ಮಾತನಾಡಿ ಪತ್ರಕರ್ತರಾದ ಅಪ್ಪಾಜಿಗೌಡರು ಮತ್ತು ಕೆ.ರಮೇಶ್ ಅವರುಗಳನ್ನು ರಾಜ್ಯ ಪತ್ರಕರ್ತರ ಸಂಘ ಗುರುತಿಸಿ ಪ್ರಶಸ್ತಿ ನೀಡಿರುವುದು ಅರ್ಥಪೂರ್ಣವಾಗಿದೆ. ಈ ಪ್ರಶಸ್ತಿಗೆ ಇಬ್ಬರು ಆರ್ಹರಾಗಿರುವ ಪತ್ರಕರ್ತರಾಗಿದ್ದಾರೆ.ಮಾತು ಕಡಿಮೆ ಕೆಲಸ ಹೆಚ್ಚು ಎಂಬಂತೆ ಇಬ್ಬರು ಎಲೆಯ ಮರೆಯ ಕಾಯಿಯಂತೆ ಕಾರ್ಯನಿರ್ವಹಿಸುತ್ತಿದ್ದ ಪ್ರತಿಭೆಗಳನ್ನು ಗುರುತಿಸಿ ಪ್ರಶಸ್ತಿ ನೀಡಿರುವುದು ಸಮಂಜಸವಾಗಿದೆ, ಇವರನ್ನು ಮಾದರಿಯಾಗಿಸಿ ಕೊಂಡು ಯುವ ಪ್ರತಿಭೆಗಳನ್ನು ಬೆಳಕಿಗೆ ತರುವಂತಗ ಬೇಕೆಂದು ಕರೆ ನೀಡಿದರು.

ಹಿರಿಯ ಪತ್ರಕರ್ತ ಪಾ.ಶ್ರೀ. ಆನಂತರಾಮ್ ಮಾತನಾಡಿ, ಪ್ರಶಸ್ತಿಗೆ ಆಯ್ಕೆಯಾಗಿರುವ ಅಪ್ಪಾಜಿಗೌಡರು ಮತ್ತು ಕೆ.ರಮೇಶ್ ಇಬ್ಬರೊಂದಿಗೆ ತಮ್ಮ ಒಡನಾಟವನ್ನು ನೆನಪಿಸಿದ ಅವರು ಜಿಲ್ಲಾ ಪತ್ರಕರ್ತರ ಸಂಘವು ಇವರನ್ನು ಅಭಿನಂದಿಸಿ ಗೌರವಿಸುತ್ತಿರುವುದು ಸಂಪ್ರಾದಯವಾಗಿದೆ. ಇಬ್ಬರಿಗೆ ಪತ್ರಿಕೋದ್ಯಮದಲ್ಲಿ ಬದ್ದತೆ, ಕಾಳಜಿ ಹೊಂದಿರುವಂತವರಿಗೆ ಪ್ರಸಸ್ತಿ ಲಭಿಸಿರುವುದು ಸಮಾಂಜಸವಾಗಿದೆ ಎಂದು ಅಭಿಪ್ರಾಯ ಪಟ್ಟರು.

ಇಬ್ಬರಲ್ಲೂ ಸಹಾಯದ ಮನೋಭಾವ ಇದೆ. ಯಾವೂದೇ ವಿಷಯಗಳ ಸುದ್ದಿಗಳನ್ನು ಮಾಡಲು ತಿಳಿಸಿದಾಗ ಅಚ್ಚುಕಟ್ಟಾಗಿ ವರದಿ ನೀಡುತ್ತಿದ್ದರು. ಪತ್ರಿಕೋದ್ಯಮದ ಬಗ್ಗೆ ಇಬ್ಬರಲ್ಲೂ ಇರುವಂತ ಕಾಳಜಿಯು ಅಭಿನಂದಾರ್ಹವಾಗಿದೆ ಎಂದರು.

ಪತ್ರಕರ್ತರ ಸಂಘದ ನಿಕಟ ಪೂರ್ವ ಅಧ್ಯಕ್ಷ ಹಾಗೂ ಹಿರಿಯ ಪತ್ರಕರ್ತರಾದ ಬಿ.ವಿ. ಗೋಪಿನಾಥ್ ಮಾತನಾಡಿ, ಪತ್ರಿಕೋದ್ಯಮದಲ್ಲಿ ಈ ಹಿಂದೆ ಇದ್ದಂತ ಕಾಳಜಿಯು ತೀರಾ ಕಡಿಮೆಯಾಗಿದ್ದು ಬಹತೇಕ ಕಟ್ ಅಂಡ್ ಪೇಸ್ಟ್ ವರದಿಗಳು ಸ್ಥಳೀಯ ಪತ್ರಿಕೆಗಳಲ್ಲಿ ಹೆಚ್ಚಾಗುತ್ತಿರುವುದು ಕಳವಳಕಾರಿಯಾಗಿದೆ. ನಕಲಿ ಪತ್ರಕರ್ತರ ನಡುವೆಯು ನೈಜ ಪತ್ರಕರ್ತರನ್ನು ರಾಜ್ಯ ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದಕ್ಕೆ ಕೋಲಾರ ಜಿಲ್ಲೆಯ ಪತ್ರಕರ್ತರ ಸಂಘದಿಂದ ಅಭಿನಂದಿಸುತ್ತಿರುವುದು ಸ್ವಾಗತಾರ್ಹವಾಗಿದೆ ಎಂದರು.

ಪ್ರಶಸ್ತಿಗಳಿಗೆ ಈ ಹಿಂದೆ ಯಾರೂ ಅರ್ಜಿಗಳನ್ನು ಹಾಕುತ್ತಿರಲ್ಲಿಲ್ಲ ಪತ್ರಕರ್ತರ ರತಿಭೆಯನ್ನು ಗುರುತಿಸಿ ಪ್ರಶಸ್ತಿಗಳೇ ಅವರನ್ನು ಹುಡುಕಿ ಕೊಂಡು ಬರುತ್ತಿದ್ದನ್ನು ನೆನಪಿಸಿದ ಅವರು ಇಂದು ಪತ್ರಕರ್ತರು ಅರ್ಜಿ ಹಾಕಿಕೊಂಡು ಪ್ರಶಸ್ತಿಗಳನ್ನು ಪಡೆಯ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅರ್ಜಿಯ ಜೂತೆಗೆ ಲಾಭಿಗಳು ಮಾಡಲಾಗುತ್ತಿರುವುದು ಕಂಡು ಬರುತ್ತದೆ. ಅದರೆ ಯಾವೂದೇ ಲಾಭಿಗಳಿಗೆ ಮಣಿಯದೆ ಕ್ರಿಯಶೀಲಾ ಹಾಗೂ ನೈಜ ಪತ್ರಕರ್ತರನ್ನು ರಾಜ್ಯ ಸಂಘವು ಗುರುತಿಸುತ್ತಿರುವುದಕ್ಕೆ ನಮ್ಮ ಜಿಲ್ಲೆಯ ಈ ಎರಡು ಮಾಣಿಕ್ಯಗಳೇ ನಿದರ್ಶನವಾಗಿದೆ ಎಂದ ಅವರು ಪತ್ರಕರ್ತರ ವರದಿಗಳನ್ನು ಸಾರ್ವಜನಿಕರು ಮೆಚ್ಚುಗೆ ವ್ಯಕ್ತ ಪಡೆಸುವಂತ ಪ್ರಶಸ್ತಿಯ ಮುಂದೆ ಎಲ್ಲಾ ಪ್ರಶಸ್ತಿಗಳು ಶೂನ್ಯ ಎಂದು ಅಭಿಪ್ರಾಯ ಪಟ್ಟರು.

ಪ್ರಶಸ್ತಿಗಳು ಕಿರೀಟವಲ್ಲ ಪ್ರಶಸ್ತಿ ಪಡೆದವರ ಜವಬ್ದಾರಿಯನ್ನು ಹೆಚ್ಚಿಸುವುದಾಗಿದೆ. ಬರೆಯುವಂತ ಸಂಸ್ಕೃತಿಯನ್ನು ಪತ್ರಕರ್ತರು ಉಳಿಸಿ ಕೊಳ್ಳ ಬೇಕು. ಪತ್ರಕರ್ತರು ತೋರಿಕೆಗೆ ಮಾತ್ರವಾಗದೆ ತಮ್ಮ ವೃತ್ತಿಯನ್ನು ಉಳಿಸಿ ಕೊಂಡಾಗ ಮಾತ್ರ ಸಮಾಜದಲ್ಲಿ ಅವರಿಗೆ ಗೌರವ ಸಿಗಲು ಸಾಧ್ಯ, ಪತ್ರಕರ್ತರ ಬದುಕು ನಡುವಳಿಕೆಗಳು ಬರಹಗಳು ಹರಿಯುವ ನೀರಿನಂತೆ ಇರುವುದು ಎಂದು ಉದಾಹರಿಸಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎ.ಜಿ.ಸುರೇಶ್ ಕುಮಾರ್ ಪ್ರಸ್ತಾವಿಕ ನುಡಿಗಳನ್ನಾಡಿ, ಪತ್ರಕರ್ತರು ತಮ್ಮ ವೃತ್ತಿಗೆ ಗೌರವ ಕೊಟ್ಟು ಶ್ರದ್ಧೆಯಿಂದ ಕೆಲಸ ಮಾಡಿದಾಗ ಮಾತ್ರ ಪ್ರಶಸ್ತಿಗಳು ತಾನೇ ಹುಡುಕಿಕೊಂಡು ಬರುತ್ತವೆ. ಇದರ ಬಗ್ಗೆ ಯುವ ಪತ್ರಕರ್ತರು ಗಮನ ಹರಿಸಬೇಕೆಂದು ಕಿವಿ ಮಾತು ಹೇಳಿದರು.

ಪತ್ರಕರ್ತರ ಸಂಘದ ವತಿಯಿಂದ ನಡೆಯುವ ಯಾವುದೇ ಕಾರ್ಯಕ್ರಮಗಳಾಗಲಿ ಪತ್ರಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರೋತ್ಸಾಹಿಸಿದಾಗ ಮಾತ್ರ ಪ್ರಶಸ್ತಿ ಪುರಸ್ಕೃತರಿಗೆ ಗೌರವ ನೀಡಿದಂತಾಗುತ್ತದೆ ಎಂದರು.

ಅಭಿನಂದನೆ ಸ್ವೀಕರಿಸಿದ ಅಪ್ಪಾಜಿ ಗೌಡ ಮಾತನಾಡಿ ವಿದ್ಯಾರ್ಥಿ ದೆಸೆಯಿಂದಲೂ ಪತ್ರಿಕೋದ್ಯಮವನ್ನು ಹವ್ಯಾಸವಾಗಿ ರೊಡಿಸಿ ಕೊಂಡು ಬಂದೆ. ಪೊಲೀಸ್ ಹಾಗೂ ಕಂಡೆಕ್ಟರ್ ಹುದ್ದೆಗಳು ಅರಿಸಿ ಬಂದಿದ್ದರೂ ಹೋಗಲಿಲ್ಲ. ವಿವಿದ ಪತ್ರಿಕೆಗಳಲ್ಲಿ ಹಾಗೂ ಹಿರಿಯ ಪತ್ರಕರ್ತರೊಂದಿಗೆ ಕಾರ್ಯನಿರ್ವಹಿಸಿದ ಸಂದರ್ಭಗಳನ್ನು ಮೆಲುಕು ಹಾಕಿದರು.

ಬಂಗಾರಪೇಟೆಯ ಕೆ.ರಮೇಶ್ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ ಪ್ರಶಸ್ತಿಗಳು ಮಾರಾಟದ ವಸ್ತುವಲ್ಲ ಅದರ ಹಿಂದೆ ಶ್ರಮದ ಪ್ರತಿಫಲವೆಂದು ಗುರುತಿಸ ಬೇಕು. ಪ್ರಶಸ್ತಿಗಳನ್ನು ಪಡೆಯಲು ಆರ್ಹತೆ, ಯೋಗ್ಯತೆಗಳು ಇದ್ದರೆ ಮಾತ್ರ ಸಿಗಲು ಸಾಧ್ಯ ಎಂಬುವುದನ್ನು ಈಗಾಗಲೇ ಹಿರಿಯ ಪತ್ರಕರ್ತರ ವಿವರಿಸಿರುವುದರಲ್ಲಿ ಸತ್ಯಾಂಶವಿದೆ. ಕಲ್ಲನ್ನು ಶಿಲೆಯಾಗಿ ರೂಪಿಸ ಬೇಕಾದರೆ ಹಲವಾರು ಊಳಿ ಪೆಟ್ಟುಗಳು ಬಿದ್ದ ಮೇಲೆಯೆ ತನ್ನ ರೂಪ ಬದಲಿಸಲು ಸಾಧ್ಯ ಎಂಬಂತೆ ಪ್ರಶಸ್ತಿಯ ಹಿಂದೆ ಪತ್ರಕರ್ತನ ಶ್ರಮವಿರುತ್ತದೆ ಎಂದು ತಮ್ಮ ಅನುಭವವನ್ನು ಹಂಚಿ ಕೊಂಡರು.

ಹಿರಿಯ ಪತ್ರಕರ್ತ ಪಿ.ಟಿ.ಐ. ಸುರೇಶ್.ಬಿ. ಸಿ.ಜಿ.ಮುರಳಿ, ಮುಳಬಾಗಿಲಿನ ಪ್ರಕಾಶ್, ದೇವಾನಂದ್, ಬಂಗಾರಪೇಟೆ ನಾಗರಾಜ್, ಶ್ರೀನಿವಾಸಪುರ ಬಾಬು ಮಾತನಾಡಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande