ಇಲ್ಲಿನ ಕಾರ್ಖಾನೆಗಳನ್ನು ಎಂ.ಬಿ ಪಾಟೀಲರು ತಮ್ಮೂರಲ್ಲಿ ಹಾಕಿಕೊಳ್ಳಲಿ
ಕೊಪ್ಪಳ, 03 ಏಪ್ರಿಲ್ (ಹಿ.ಸ.) : ಆ್ಯಂಕರ್ : ತಾಲ್ಲೂಕಿನ ಹಾಲವರ್ತಿ ಗ್ರಾಮದಲ್ಲಿ ಕೊಪ್ಪಳ ಕಾರ್ಖಾನೆ ಬಾಧಿತ ರೈತ ಸಂಘದ ಗ್ರಾಮ ಘಟಕ ಉದ್ಘಾಟನೆ, ಹಸಿರು ಶಾಲು ದೀಕ್ಷೆ, ಬೋರ್ಡ್ ಅನಾವರಣ, ಪದಾಧಿಕಾರಿಗಳಿಗೆ ಪದಗ್ರಹಣ ಹಾಗೂ ಪ್ರಮಾಣ ವಚನ ಬೋಧನೆ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. ಇಲ್ಲಿನ ನಗರಸಭೆ ಮ
ಎಂ.ಬಿ ಪಾಟೀಲರು ಇಲ್ಲಿನ ಕಾರ್ಖಾನೆಗಳನ್ನು ತಮ್ಮೂರಲ್ಲಿ ಹಾಕಿಕೊಳ್ಳಲಿ


ಎಂ.ಬಿ ಪಾಟೀಲರು ಇಲ್ಲಿನ ಕಾರ್ಖಾನೆಗಳನ್ನು ತಮ್ಮೂರಲ್ಲಿ ಹಾಕಿಕೊಳ್ಳಲಿ


ಎಂ.ಬಿ ಪಾಟೀಲರು ಇಲ್ಲಿನ ಕಾರ್ಖಾನೆಗಳನ್ನು ತಮ್ಮೂರಲ್ಲಿ ಹಾಕಿಕೊಳ್ಳಲಿ


ಕೊಪ್ಪಳ, 03 ಏಪ್ರಿಲ್ (ಹಿ.ಸ.) :

ಆ್ಯಂಕರ್ : ತಾಲ್ಲೂಕಿನ ಹಾಲವರ್ತಿ ಗ್ರಾಮದಲ್ಲಿ ಕೊಪ್ಪಳ ಕಾರ್ಖಾನೆ ಬಾಧಿತ ರೈತ ಸಂಘದ ಗ್ರಾಮ ಘಟಕ ಉದ್ಘಾಟನೆ, ಹಸಿರು ಶಾಲು ದೀಕ್ಷೆ, ಬೋರ್ಡ್ ಅನಾವರಣ, ಪದಾಧಿಕಾರಿಗಳಿಗೆ ಪದಗ್ರಹಣ ಹಾಗೂ ಪ್ರಮಾಣ ವಚನ ಬೋಧನೆ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.

ಇಲ್ಲಿನ ನಗರಸಭೆ ಮುಂಭಾಗದಲ್ಲಿ ನಡೆಯುತ್ತಿರುವ ಕಾರ್ಖಾನೆ ವಿರೋಧಿ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ 154 ದಿನ ಪೂರೈಸಿದ್ದು, ಹೋರಾಟಕ್ಕೆ ಏಕ ರೂಪ ಮತ್ತು ತೀವ್ರಸ್ವರೂಪ ನೀಡಲು 22 ಗ್ರಾಮಗಳಲ್ಲಿ ರೈತ ಸಂಘ ಸ್ಥಾಪಿಸುವ ಕಾರ್ಯ ನಡೆದಿದೆ.

ಹಾಲವರ್ತಿ ಗ್ರಾಮದಲ್ಲಿ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅಲ್ಲಮಪ್ರಭು ಬೆಟ್ಟದೂರು ಅವರು, ರೈತರು ಹೆದರದೇ ಜೀವಿಸುವ ಮತ್ತು ಪಟ್ಟಭದ್ರರನ್ನು ಎದುರಿಸುವ ಶಕ್ತಿ ಮೈಗೂಡಿಸಿಕೊಂಡು ಸಾಗಿರಿ, ಜಂಟಿ ಕ್ರಿಯಾ ವೇದಿಕೆ ಸದಾ ನಿಮ್ಮ ಜೊತೆಗೆ ನಿಲ್ಲುತ್ತದೆ, ಕಂಪನಿಗಳ ಗೂಂಡಾಗಿರಿ, ದಬ್ಬಾಳಿಕೆ, ಕಪಟತನ ಇನ್ನು ಮುಂದೆ ನಡೆಯುವುದಿಲ್ಲ. ರೈತರು ಜಾತಿ ಮತ ಧರ್ಮ ಮೀರಿ ಒಂದಾಗಿ ನಡೆಯಬೇಕು, ಹೋರಾಟಕ್ಕೆ ಸಹಕಾರ ನೀಡಬೇಕು ಎಂದು ಕರೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಂಟಿ ಕ್ರಿಯಾ ವೇದಿಕೆ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ, ಕಂಪನಿಯ ಏಜಂಟರು ಒಂದೆಡೆ ಹೋರಾಟದ ಸೋಗು ಹಾಕಿದ್ದಾರೆ, ಅವರಿಗೆ ಕಾರ್ಖಾನೆಗಳು ಹಣ ಕೊಟ್ಟು ಹೋರಾಟ ಮಾಡಿಸುತ್ತಿರುವದಕ್ಕೆ ನಮ್ಮ ಬಳಿ ಸಾಕ್ಷಿ ಇದ್ದು ಅವಶ್ಯಕತೆ ಬಿದ್ದಾಗ ಸಾರ್ವಜನಿಕವಾಗಿ ಬಿಡುಗಡೆ ಮಾಡುತ್ತೇವೆ, ಅಂತಹ ಕೆಲಸಗಳಲ್ಲಿ ಯಾರೆಲ್ಲಾ ಇದಾರೆ ಎಂಬ ಮಾಹಿತಿ ಸಹ ಇದೆ.

ಮತ್ತೋರ್ವ ಜಂಟಿ ಕ್ರಿಯಾ ವೇದಿಕೆ ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ ಮಾತನಾಡಿ, ತುಂಗಭದ್ರಾ ನಸಿಯಿಂದ ನಿರಾಶ್ರಿತರಾಗಿರುವ ಭಾಗ್ಯನಗರದ ಜನರನ್ನು ಮತ್ತೊಮ್ಮೆ ಪುನರ್ವಸತಿ ಮಾಡಲು ಸಂವಿಧಾನವೇ ಒಪ್ಪುವುದಿಲ್ಲ ಆದ್ದರಿಂದ ಏನೇ ಆಗಲಿ ಕಾರ್ಖಾನೆ ಇಲ್ಲಿಂದ ತೊಲಗಬೇಕು, ನಮಗೆ ಯಾವ ಕಾರ್ಖಾನೆ ಎಂಬ ಬೇಧವಿಲ್ಲ ಸಮಸ್ಯೆ ಅಷ್ಟೇ ಮುಖ್ಯ, ಕಾರ್ಖಾನೆ ಪರವಾಗಿ ಬಂದು ಗ್ರಾಮಗಳನ್ನು ಸ್ಥಳಾಂತರ ಮಾಡಿ ಎನ್ನುವ ಜನಪ್ರತಿನಿಧಿಗಳನ್ನು ಊರಲ್ಲಿ ಬಿಟ್ಟುಜೊಳ್ಳಬಾರದು, ನಮ್ಮದು ರಾಜಿ ಇಲ್ಲದ ರೈತ ಸಂಘವಾಗಿದ್ದು ಇತಿಹಾಸವನ್ನು ಬರೆಯುವ ಕಾರ್ಯ ಮಾಡುತ್ತೇವೆ, ನಮ್ಮ ಹೋರಾಟ ದೇಶಕ್ಕೆ ಮಾದರಿಯಾಗಿದೆ ಎಂದರು. ಮಹಿಳಾ ಮುಖಂಡರಾದ ಸರೋಜಾ ಬಾಕಳೆ, ಮಹಿಳಾ ಮುಖಂಡರಾದ ಜ್ಯೋತಿ ಎಂ. ಗೊಂಡಬಾಳ, ಅನೇಕ ರೈತರು ಮಾತನಾಡಿದರು.

ವೇದಿಕೆ ಮೇಲೆ ಬಸಾಪುರ ಮೂಕಪ್ಪ ಮೇಸ್ತ್ರಿ, ಯಮನೂರಪ್ಪ ಹಾಲಳ್ಳಿ, ಹನುಮಪ್ಪ ತಳವಾರ, ಸಣ್ಣಹನುಮಪ್ಪ ಗಿಣಿಗೇರಿ, ಮಂಗಳೇಶ ರಾಠೋಡ್, ಕುಣಿಕೇರಿಯ ಚನ್ನವೀರಯ್ಯ ಹಿರೇಮಠ, ಹುಲಿಗೇಶ ಭೋವಿ, ಜಂಟಿ ಕ್ರಿಯಾ ವೇದಿಕೆಯ ಮಹಾದೇವಪ್ಪ ಮಾವಿನಮಡು, ವೈ. ಸತ್ಯನಾರಾಯಣ, ಹಾಲವರ್ತಿ ಗ್ರಾಮದ ಗವಿರಾಜ ಎಂ. ಗೊರವರ, ಪರಶುರಾಮ ಕಂಕಿ, ದೇವಪ್ಪ ಶಿರಿಗೇರಿ, ಶಿವಪ್ಪ ಗೊರವರ, ಮಾಬುಸಾಬ ಪಟ್ವಾರಿ, ಶಂಕ್ರಪ್ಪ ಹಳ್ಳಿ, ವಿಕ್ರಮ್ ಈಳಗೇರ, ದೇವಪ್ಪ ಗೊರವರ, ಗವಿಸಿದ್ದಪ್ಪ ನಡಗುಡ್ತಿ, ಶಿವು ಬೂದಿಹಾಳ, ಗುಂಡಪ್ಪ ಗರಳ್ಳಿ, ಅಶೋಕ ಕೊಡ್ತಿ, ಸುರೇಶ ಹಲಗೇರಿ, ಹನುಮಂತಪ್ಪ ಹೊಸಮನಿ, ಫಕೀರೇಶ ಗೌಡ್ರು, ನಾಗಪ್ಪ ತಾವರಗೇರಿ, ಪ್ರಕಾಶ ಮೈನಳ್ಳಿ, ಶೇಖಪ್ಪ ನಡಗುಡ್ತಿ, ಮಾರುತಿ ಮೇಟಿ, ಶ್ರೀಕಾಂತ್ ಮುರಡಿ, ಮುಸ್ತಫಾ ಪಟ್ವಾರಿ, ಯಲ್ಲಪ್ಪ ಕೌದಿ, ನಾಗರಾಜ ಅಜ್ಜಿ, ಶಿವಪ್ಪ ಕೌದಿ, ಬಸಯ್ಯ ಹಿರೇಮಠ, ಕೃಷ್ಣ ಅಜ್ಜಿ, ಮಹಾಂತೇಶ ಮೇಟಿ, ಹನುಮಪ್ಪ ನಾಯಕರು, ರಾಮಪ್ಪ ಗೊರ್ರ, ನೀಲಪ್ಪ ಮೇಟಿ, ದಾನಪ್ಪ ಪಾಟೀಲ್, ಶ್ರೀಕಾಂತ್ ಗೊರವರ, ನಿಂಗಪ್ಪ ಚಿಲವಾಡಗಿ, ಶರಣಪ್ಪ ರಡ್ಡೇರ, ಹೇಮಣ್ಣ ತಳವಾರ, ಶ್ರೀನಿವಾಸ ಈಳಿಗೇರ, ದೇವಪ್ಪ ಕೊಡ್ತಿ, ಸಣ್ಣಹನುಮಪ್ಪ ಕಿನ್ನಾಳ, ಮಂಜುನಾಥ ಕಿನ್ನಾಳ, ಮಂಜುನಾಥ ಹೊಸಮನಿ, ಜಡಿಯಪ್ಪ ಗೊರ್ರ, ಬಾಳಪ್ಪ ಹೊಸಳ್ಳಿ, ಗವಿಸಿದ್ದಯ್ಯ ಹಿರೇಮಠ, ಸೂರ್ಯಪ್ಪ ಹಲಗೇರಿ, ಜಡಿಯಪ್ಪ ಕೆಂಚನಗೌಡ್ರು, ನಾಗಪ್ಪ ಶಿರಗೇರಿ, ಮಲ್ಲಿಕಾರ್ಜುನ ಶಿರಗೇರಿ, ಶಿವಾನಂದ ಗೊರ್ರ, ಹನುಮಪ್ಪ ಕೆಂಚನಗೌಡ್ರು, ಶಿವಪ್ಪ ಗೊರವರ, ರಾಮಕೃಷ್ಣ ಬಳ್ಳಾರಿ, ರಂಗಪ್ಪ ಕೌದಿ, ಮಲ್ಲಪ್ಪ ಹೊಸಮನಿ ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande