
ವಿಜಯಪುರ, 28 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಭವಿಷ್ಯದ ಬದುಕಿಗೆ ನೀರಿನ ಮಿತ ಬಳಕೆ ಅತ್ಯಗತ್ಯ ಎಂಬ ಸಂದೇಶದೊಂದಿಗೆ ವಿಜಯಪುರ ತಾಲೂಕಿನ ನಾಗಠಾಣ ಗ್ರಾಮದ ಮಲ್ಲಿಕಾರ್ಜುನ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಜಲ ಶಕ್ತಿ ಅಭಿಯಾನದಡಿ ಜಲ ಪಖ್ವಾಡ್ ಕಾರ್ಯಕ್ರಮ ಅಂಗವಾಗಿ ವಿಚಾರ ಸಂಕೀರ್ಣ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಾಹಿತಿ, ಶಿಕ್ಷಕ ಸಂತೋಷ ಬಂಡೆ, “ನೀರು ವಿಶ್ವದ ಸಕಲ ಜೀವರಾಶಿಗಳಿಗೆ ಜೀವನಾಧಾರ. ಜನಸಂಖ್ಯೆ ಏರಿಕೆ, ನಗರೀಕರಣ ಹಾಗೂ ಜಾಗತಿಕ ತಾಪಮಾನದಿಂದ ಜಲ ಸಂಪನ್ಮೂಲಗಳ ಮೇಲೆ ಭಾರೀ ಒತ್ತಡ ಉಂಟಾಗಿದೆ. ಆದ್ದರಿಂದ ನೀರನ್ನು ಮಿತವಾಗಿ ಬಳಸಿ, ಮರುಬಳಕೆ ಮಾಡುವ ಸಂಸ್ಕೃತಿ ಬೆಳೆಸುವುದು ಅನಿವಾರ್ಯ” ಎಂದು ತಿಳಿಸಿದರು.
“ನೀರು ಉಳಿಸಿ, ಜೀವ ಉಳಿಸಿ” ಎಂಬುದು ಕೇವಲ ಘೋಷಣೆಯಲ್ಲ, ಅದು ನಮ್ಮ ಭವಿಷ್ಯದ ಬದುಕಿಗೆ ಅಗತ್ಯವಾದ ಸಂಕಲ್ಪವಾಗಿದೆ. ಪ್ರತಿಯೊಬ್ಬರೂ ನೀರನ್ನು ವ್ಯರ್ಥ ಮಾಡದೆ, ಹನಿ ಹನಿ ನೀರನ್ನು ಸಂರಕ್ಷಿಸುವ ಮೂಲಕ ಮುಂದಿನ ಪೀಳಿಗೆಗೆ ಉಳಿಸುವ ಜವಾಬ್ದಾರಿಯನ್ನು ನಿಭಾಯಿಸಬೇಕು ಎಂದು ಅವರು ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande