
ಕೋಲಾರ, ೨೮ ಏಪ್ರಿಲ್ (ಹಿ.ಸ) :
ಆ್ಯಂಕರ್ : ಕೆಜಿಎಫ್ ನಗರದ ಅಶೋಕ ದಮ್ಮಧೂತ ಬುದ್ದ ಸಂಘದ ಆಧ್ಯಾತ್ಮಕ ಮಂದಿರದಲ್ಲಿ ಮೇ.೧ ರಂದು ಶುಕ್ರವಾರ ಬುದ್ದ ಜಯಂತಿಯ ಆಚರಣೆ ಕಾರ್ಯಕ್ರಮ ವೈಶಾಖ ಬುದ್ದ ಹುಣ್ಣಿಮೆಯ ೨೫೭೦ನೇ ಪವಿತ್ರ ಬುದ್ದ ಜಯಂತಿ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ಭಾಗವಹಿಸುವರು.
ಮಹಾ ಬುದ್ದ ಸಂಸ್ಥೆಯ ವತಿಯಿಂದ ವೈಶಾಖ ಬುದ್ದ ಹುಣ್ಣಿಮೆಯ ೨೫೭೦ನೇ ಪವಿತ್ರ ಬುದ್ದ ಜಯಂತೋತ್ಸವದ ಅಂಗವಾಗಿ ಧಮ್ಮ ಪಾದಉತ್ಸವವು ಇದೇ ಬುದ್ದ ಹುಣ್ಣಿಮೆಯ ಆಚರಣೆ ಕಾರ್ಯಕ್ರಮ ಸಂದರ್ಭದಲ್ಲಿ ವಿಶೇಷವಾದ ರೀತಿಯಲ್ಲಿ ನಡೆಯಲಿದೆ.
ಬೆಂಗಳೂರು ಮಹಾಬೋಧಿ ಸಮಾಜದ ಭಂತೇಜಿ ಧಮ್ಮಚಿತ್ತ ಮಹಾತೀರ, ಕಾರ್ಯದರ್ಶಿ ಭಂತೇಜಿಜೀನವಾಸ ಬಿಕ್ಕು, ಅಶೋಕ ದಮ್ಮದತ್ತ ಬೌದ್ದ ಸಮಾಜದ ಕಾರ್ಯದರ್ಶಿ ಭಂತೇಜಿ ಖೇಮಿಂಡೋ ಅವರುಗಳ ಸಾನ್ನಿದ್ಯದಲ್ಲಿ ಹಲವಾರು ಭಂತೇಜಿಗಳು, ಉಪಾಸಕರು ಮತ್ತು ಉಪಾಸಿಕರು ಭಕ್ತಿಭಾವದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿಕೊಡುವರು.
ವೈಶಾಖ ಬುದ್ದ ಹುಣ್ಣಿಮೆಯ ೨೫೭೦ನೇ ಪವಿತ್ರ ಬುದ್ದ ಜಯಂತಿ ಹಾಗೂ ಬುದ್ದ ಹುಣ್ಣಿಮೆಯ ಆಚರಣೆ ಕಾರ್ಯಕ್ರಮದಲ್ಲಿ ಸಮಸ್ತ ನಾಗರೀಕ ಬಂಧುಗಳು, ಬುದ್ದನ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಲು ಬುದ್ದ ಸಂಘದ ಉಪಾಸಕ ಡಾ. ಆರ್.ಪ್ರಭುರಾಂ ಅವರು ಕೋರಿದ್ದಾರೆ.
ಮೇ.೧ ರಂದು ಶುಕ್ರವಾರ ಬೆಳಿಗ್ಗೆ ೧೦ ಗಂಟೆಗೆ ನಡೆಯುವ ಧಮ್ಮ ಪಾದ ಉತ್ಸವ ಹಾಗೂ ಬುದ್ದ ಜಯಂತಿಯ ಆಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ಅವರನ್ನು ಬುದ್ದಗುರು ಕೆಮೆಂಡೋ ಬಂತೇಜಿ, ಉಪಾಸಕ ಡಾ. ಆರ್.ಪ್ರಭುರಾಂ ಸಾಂಪ್ರದಾಯಿಕವಾಗಿ ಆಮಂತ್ರಿಸಿದರು.
ಚಿತ್ರ : ಕೆಜಿಎಫ್ನ ಬೌದ್ದ ಸಂಘದಲ್ಲಿ ನಡೆಯುವ ಬುದ್ದ ಜಯಂತಿಯ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ಅವರನ್ನುಆಮಂತ್ರಿಸಲಾಯಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್