ಜಾಗೃತಿ ಸಮಿತಿಯ ಸದಸ್ಯರ ನೇಮಕಾತಿ ವಿರೋಧಿಸಿ ದಲಿತ ಸಂಘಟನೆಗಳ ಪ್ರತಿಭಟನೆ
ಜಾಗೃತಿ ಸಮಿತಿಯ ಸದಸ್ಯರ ನೇಮಕಾತಿ ವಿರೋಧಿಸಿ ದಲಿತ ಸಂಘಟನೆಗಳಿAದ ಪ್ರತಿಭಟನೆ
ಕೋಲಾರ ಜಿಲ್ಲಾ ಜಾಗೃತಿ ಸಮಿತಿಯ ಸದಸ್ಯರನ್ನು ನೇಮಕಾತಿ ಮಾಡುವಾಗ ಅರ್ಹರನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ ಸಮಾಜ ಕಲ್ಯಾಣ ಇಲಾಖೆಯ ಕಛೇರಿಯ ಮುಂದೆ ದಲಿತ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.


ಕೋಲಾರ, ೨೮ ಏಪ್ರಿಲ್ (ಹಿ.ಸ) :

ಆ್ಯಂಕರ್ : ಜಿಲ್ಲಾ ದೌರ್ಜನ್ಯ ತಡೆ (ಅಟ್ರಾಸಿಟಿ) ಸಮಿತಿಗೆ ದಲಿತ ಸಂಘಟನೆಗಳನ್ನು ನಿರ್ಲಕ್ಷ್ಯ ಮಾಡಿ ಯಾವುದೇ ಅರ್ಜಿ ಆಹ್ವಾನಿಸದೆ ಪ್ರಚಾರವಿಲ್ಲದೆ ಸಮಿತಿಯನ್ನು ರಚನೆ ಮಾಡಿದ್ದು ಕೂಡಲೇ ಸಮಿತಿಯನ್ನು ರದ್ದು ಮಾಡಿ ಹೊಸ ಸಮಿತಿ ರಚನೆ ಮಾಡಬೇಕು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶ್ರೀನಿವಾಸನ್ ಅವರನ್ನು ಮಾತೃ ಇಲಾಖೆಯಾದ ತೋಟಗಾರಿಕೆ ಇಲಾಖೆಗೆ ವರ್ಗಾವಣೆ ಮಾಡುವಂತೆ ಒತ್ತಾಯಿಸಿ ವಿವಿಧ ದಲಿತಪರ ಸಂಘಟನೆಗಳ ಮುಖಂಡರು ನಗರದ ಸಮಾಜ ಕಲ್ಯಾಣ ಇಲಾಖೆಯ ಕಛೇರಿಯ ಮುಂದೆ ಮಂಗಳವಾರ ದಿಢೀರ್ ಪ್ರತಿಭಟನೆ ನಡೆಸಿದರು.

ದಮನಿತರ ಸೇವಾ ಸಮಿತಿ ರಾಜ್ಯ ಅಧ್ಯಕ್ಷ ಮೇಡಿಹಾಳ ಮುನಿಅಂಜಿನಪ್ಪ ಮಾತನಾಡಿ ಜಿಲ್ಲಾ ಮಟ್ಟದಲ್ಲಿ ದಲಿತರ ಕುಂದುಕೊರತೆಗಳ ಬಗ್ಗೆ ಚರ್ಚೆ ನಡೆಯಲು ಇದ್ದ ಜಾಗೃತಿ ಸಮಿತಿಯಲ್ಲಿ ದಲಿತ ಸಂಘಟನೆಗಳ ಮುಖಂಡರನ್ನು ನಿರ್ಲಕ್ಷ್ಯ ಮಾಡಲಾಗಿದೆ. ಸಮಿತಿ ರಚನೆಯ ಪೂರ್ವಭಾವಿಯಾಗಿ ಪತ್ರಿಕಾ ಹೇಳಿಕೆಯಾಗಲಿ, ಅರ್ಜಿಗಳ ಅಹ್ವಾನವಾಗಲಿ ಯಾವುದನ್ನು ನಿಯಮಾನುಸಾರ ನಡೆಸದೆ ಏಕಪಕ್ಷೀಯ ತೀರ್ಮಾನದಂತೆ ಸಮಿತಿಗೆ ನೇಮಕ ಮಾಡಲಾಗದೆ ಎಸ್ಸಿ, ಎಸ್ಟಿ ಮಹಿಳೆಯರು, ಬೋವಿ ಸೇರಿದಂತೆ ಎಲ್ಲಾ ಸಮುದಾಯಕ್ಕೂ ಅವಕಾಶ ನೋಡಬೇಕಾಗಿತ್ತು ಅದನ್ನು ಧಿಕ್ಕರಿಸಿದ್ದಾರೆ ಕೂಡಲೇ ಸಮಿತಿಯನ್ನು ರದ್ದು ಮಾಡಿ ಹೊಸದಾಗಿ ಸಮಿತಿ ನೇಮಕ ಮಾಡಬೇಕು ಇಲ್ಲದೇ ಹೋದರೆ ಮುಂದಿನ ದಿನಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಕೆಡಿಪಿ ಸಭೆ ಸೇರಿದಂತೆ ಪ್ರತಿಯೊಂದು ಕಾರ್ಯಕ್ರಮದಲ್ಲಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ದಲಿತ ಸೇನೆ ರಾಜ್ಯ ಅಧ್ಯಕ್ಷ ದಲಿತ್ ನಾರಾಯಣಸ್ವಾಮಿ ಮಾತನಾಡಿ ದಲಿತರು ಹೆಚ್ಚು ಜನಸಂಖ್ಯೆ ಇರುವ ಕೋಲಾರ ಜಿಲ್ಲೆಯಲ್ಲಿ ದಲಿತರ ಕುಂದುಕೊರತೆಗಳ ಚರ್ಚೆಯ ಸಮಿತಿಗೆ ನಿರ್ಲಕ್ಷ್ಯ ತೋರಿದ್ದ್ದು ದಲಿತ ಸಂಘಟನೆಗಳಿಗೆ ಸಮಾಜ ಕಲ್ಯಾಣ ಇಲಾಖೆ ಮಾಡಿದ ಅವಮಾನವಾಗಿದೆ ಕನಿಷ್ಠ ದಲಿತರ ಸಮಸ್ಯೆಗಳು ಅರಿತವರು ಆಗಲಿ ಸಂಘಟನೆಗಳಿAದ ಬಂದವರಾಗಲಿ ಕನಿ ಜ್ಞಾನವಿಲ್ಲದವರನ್ನು ನೇಮಕ ಮಾಡಲಾಗಿದೆ ಸಮಿತಿಯನ್ನು ರದ್ದು ಮಾಡಬೇಕು ಇದು ಈಗೇ ಮುಂದುವರೆದರೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಕೂಡಲೇ ಸಮಾಜ ಕಲ್ಯಾಣ ಇಲಾಖೆ ಮತ್ತು ಜಿಲ್ಲಾಡಳಿತ ತಪ್ಪನ್ನು ತಿದ್ದಿಕೊಂಡು ಹೊಸದಾಗಿ ಸಮಿತಿ ರಚನೆ ಮಾಡಬೇಕು ಎಂದು ಒತ್ತಾಯಿಸಿದರು.

ಗಾಂಧಿನಗರ ರಾಜಕುಮಾರ್ ಮಾತನಾಡಿ ಜಾಗೃತಿ ಸಮಿತಿ ರಚನೆಯಲ್ಲಿ ದಲಿತ ಸಂಘಟನೆಗಳಿಗೆ ದ್ರೋಹ ಬಗೆದ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಯನ್ನು ಕೂಡಲೇ ವರ್ಗಾವಣೆ ಮಾಡಬೇಕು ಕನಿಷ್ಠ ಮಾತು ಬರದ, ವಿಚಾರ ಗೊತ್ತಿಲ್ಲದವರನ್ನು ಆಯ್ಕೆ ಮಾಡಿ ಸಮಿತಿಯ ಉದ್ದೇಶವನ್ನು ಹಾಳು ಮಾಡಲಾಗಿದೆ. ಕೂಡಲೇ ಜಿಲ್ಲೆಯ ಎಲ್ಲಾ ದಲಿತ ಸಂಘಟನೆಗಳ ಮುಖಂಡರ ಸಭೆ ಮಾಡಿ ಚರ್ಚೆ ನಡೆಸಿ ಹೊಸದಾಗಿ ಸಮಿತಿ ರಚನೆ ಮಾಡಬೇಕು ಎಂದು ಒತ್ತಾಯಿಸಿದರು.

ದಲಿತ ಸಂಘಟನೆಗಳ ಸಂಯುಕ್ತ ರಂಗದ ಅಧ್ಯಕ್ಷ ಡಿಪಿಎಸ್ ಮುನಿರಾಜು, ಮುಖಂಡರಾದ ಮತ್ತಿಕುಂಟೆ ಕೃಷ್ಣಪ್ಪ, ಪಿವಿಸಿ ಕೃಷ್ಣಪ್ಪ, ಸಂಗಸ0ದ್ರ ವಿಜಯಕುಮಾರ್, ಮಂಜುಳಾ, ಚೇತನ್ ಬಾಬು, ಯುವರಾಜ್, ಮೋಚಿಪಾಳ್ಯ ನಾಗೇಶ್, ಮಂಜುನಾಥ್, ಹರಳಕುಂಟೆ ರಾಜ್, ಆನಂದ್, ಶ್ರೀರಾಮಪುರ ರವಿ ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande