ಸುಗಟೂರು ಸಬರಮತಿ ಶಾಲೆಯಲ್ಲಿ ಗುರುವಂದನಾ ಕಾರ್ಯಕ್ರಮ
ಸುಗಟೂರು ಸಬರಮತಿ ಶಾಲೆಯಲ್ಲಿ ಗುರುವಂದನಾ ಕಾರ್ಯಕ್ರಮ
ಕೋಲಾರ ತಾಲ್ಲೂಕಿನ ಸುಗಟೂರಿನ ಸಬರಮತಿ ಪ್ರೌಢಶಾಲೆಯ ಆವರಣದಲ್ಲಿ ಹಳೆಯ ವಿದ್ಯಾರ್ಥಿಗಳು ತಮ್ಮ ಶಿಕ್ಷಕರಿಗೆ ಗುರುವಂದನೆ ಸಲ್ಲಿಸಿದರು.


ಕೋಲಾರ, ೨೮ ಏಪ್ರಿಲ್ (ಹಿ.ಸ) :

ಆ್ಯಂಕರ್ : ಅಕ್ಷರ ಕಲಿಸಿದ ಗುರುವನ್ನು ಮರೆಯದೇ ೨೪ ವರ್ಷಗಳ ನಂತರವೂ ಸ್ಮರಿಸುವ ಕೆಲಸಕ್ಕೆ ಮುಂದಾಗಿರುವ ಹಳೆ ವಿದ್ಯಾರ್ಥಿಗಳ ಕಾರ್ಯ ಶಾಲೆಯ ಮಕ್ಕಳಿಗೆ ಆದರ್ಶವಾಗಿದೆ ಎಂದು ತಾಲ್ಲೂಕಿನ ಸುಗಟೂರು ಸಬರಮತಿ ಪ್ರೌಢಶಾಲೆ ಆಡಳಿತಾಧಿಕಾರಿ ಬಿ.ವೆಂಕಟೇಶ್ ಹರ್ಷ ವ್ಯಕ್ತಪಡಿಸಿದರು.

ಸುಗಟೂರಿನ ಸಬರಮತಿ ಶಾಲೆಯ ಆವರಣದಲ್ಲಿ ೨೦೦೦-೦೧ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಮುಗಿಸಿದ್ದ ನೂರಾರು ವಿದ್ಯಾರ್ಥಿಗಳು ಒಟ್ಟುಗೂಡಿ `ನಮ್ಮ ಶಾಲೆ ನಮ್ಮ ಹೆಮ್ಮೆ'ಕಾರ್ಯಕ್ರಮದಡಿ ಗುರುಗಳನ್ನು ಸ್ಮರಿಸುವ ಆಯೋಜಿಸಿದ್ದ ಸ್ನೇಹಮಿಲನ ಹಾಗೂ ಗುರುವಂದನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮೂರು ವರ್ಷಗಳ ಕಾಲ ಮಕ್ಕಳಿಗೆ ನೀಡಿದ ನೈತಿಕ ಶಿಕ್ಷಣದಿಂದಲೇ ಇಂದು ಹಳೆ ವಿದ್ಯಾರ್ಥಿಗಳು ಮತ್ತೆ ಶಾಲೆಯತ್ತ ಬಂದು ಅಕ್ಷರ ಕಲಿಸಿದ ಗುರುಗಳ ಋಣ ತೀರಿಸುವ ಕೆಲಸ ಮಾಡುತ್ತಿದ್ದಾರೆ. ಶಾಲೆಗಳನ್ನು ಮುನ್ನಡೆಸುವುದ ಕಷ್ಟದ ಕೆಲಸವಾಗಿದೆ ಇಂತಹ ಸಂದರ್ಭದಲ್ಲೂ ೫೪ ವರ್ಷ ಶಾಲೆಯನ್ನು ಮುನ್ನಡೆಸಿದ್ದು, ಇಂದು ೧೮೦೦ ಮಕ್ಕಳು ಓದುತ್ತಿದ್ದಾರೆ.

ಇದೇ ಸಂದರ್ಭದಲ್ಲಿ ಶಾಲೆಯ ಕೊಠಡಿಗಳಿಗೆ ಕಿಟಕಿಗಳನ್ನು ಕೊಡುಗೆಯಾಗಿ ನೀಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

ನಿವೃತ್ತ ಶಿಕ್ಷಕರಾದ ಜಿ.ನಂಜು0ಡಪ್ಪ, ಎನ್.ಶ್ರೀನಿವಾಸರೆಡ್ಡಿ, ಧಾನಪ್ರಕಾಶ್ ಮತ್ತಿತರರು ಮಾತನಾಡಿ, ನಿವೃತ್ತರಾದ ನಂತರವೂ ೨೦ ವರ್ಷಗಳ ಹಿಂದಿನ ಶಿಷ್ಯರು ಸ್ಮರಿಸಿ ಕರೆದಿರುವುದು ಅತಿ ಹೆಚ್ಚು ಸಂತಸ ಉಂಟು ಮಾಡಿದೆ. ಗುರಿ ಸಾಧನೆಗೆ ಗುರು ಇರಬೇಕು ಎಂಬ ಮಾತಿದೆ ಆದರೆ ಇತ್ತೀಚಿನ ದಿನಗಳಲ್ಲಿ ಗುರುವನ್ನು ಮರೆಯುವ ಸಂಸ್ಕೃತಿ ಹೆಚ್ಚಿದೆ ಎಂದ ಅವರು, ಇಂತಹ ಪರಿಸ್ಥಿತಿಯಲ್ಲೂ ಗುರುಗಳನ್ನು ನೆನಪು ಮಾಡಿಕೊಂಡಿರುವ ಹಳೆ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

ತ0ದೆ,ತಾಯಿ ದುಡಿದು, ಕೂಲಿ ಮಾಡಿ ನಿಮ್ಮನ್ನು ಶಾಲೆಗೆ ಕಳುಹಿಸಿದ್ದಾರೆ, ನೀವು ಚೆನ್ನಾಗಿ ಓದುವ ಮೂಲಕ ಅವರ ಆಶಯಗಳನ್ನು ಈಡೇರಿಸುವ ಸಂಕಲ್ಪ ಹೊಂದಿರಬೇಕು,ಗುರುಹಿರಿಯರನ್ನು ಗೌರವಿಸುವ ಸಂಸ್ಕಾರ ಬೆಳೆಸಿಕೊಳ್ಳಿ, ವಿದ್ಯೆಗೆ ವಿನಯವೇ ಆಭರಣ ಎಂಬುದನ್ನು ಮರೆಯದಿರಿ ಎಂದು ಹೇಳಿದರು.

ಹಳೆ ವಿದ್ಯಾರ್ಥಿಗಳಾದ ಶ್ಯಾಮಲ, ರಾಮಾಂಜಿ, ಕಮಲ,ಉಮಾಶಂಕರ್, ಸುಭಾಷ್ಚಂದ್ರಬೋಸ್, ಮತ್ತಿತರರು ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದು, ಸ್ಪರ್ಧಾತ್ಮಕ ಯುಗದಲ್ಲಿ ಯಾರಲ್ಲಿ ಶ್ರಮ,ಕನಸು, ಪ್ರಯತ್ನ ಇರುತ್ತದೆಯೋ ಅವರು ಮಾತ್ರ ಬೆಳೆಯುತ್ತಾರೆ, ಎಸ್ಸೆಸ್ಸೆಲ್ಸಿ ಟರ್ನಿಂಗ್ ಪಾಯಿಂಟ್ ಆಗಿದ್ದು, ಇಲ್ಲೇ ನಿಮ್ಮ ಮುಂದಿನ ಭವಿಷ್ಯದ ಹಾದಿ ನಿರ್ಧಾರವಾಗುತ್ತದೆ ಎಂದರು.

ಪ್ರಪ0ಚ ಇಂದು ಗ್ಲೋಬಲ್ ವಿಲೇಜ್ ಆಗಿದೆ,ಕಂಪ್ಯೂಟರ್ ಜ್ಞಾನವಿಲ್ಲದಿದ್ದರೆ ಮುಂದಿನ ದಿನಗಳಲ್ಲಿ ಅಂತಹವರನ್ನೇ ಅನಕ್ಷರಸ್ಥರೆಂದು ಪರಿಗಣಿಸುವ ಕಾಲ ಬರಲೂಬಹುದು ಎಂದು ತಿಳಿಸಿ, ಮಕ್ಕಳು ಇಂದಿನಿ0ದಲೇ ಕಂಪ್ಯೂಟರ್ ಜ್ಞಾನ ಬೆಳೆಸಿಕೊಳ್ಳಿ ಎಂದರು.

ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಶಾಲೆಯ ನಾಲ್ವರು ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

ಕಾರ್ಯಕ್ರಮದಲ್ಲಿ ಶಿಕ್ಷಕರಾದ ಪಿ.ಎಂ.ನಾರಾಯಣಸ್ವಾಮಿ, ಎಸ್.ಆರ್.ಮೋಹನ್,ಎನ್.ಶ್ರೀರಾಮರೆಡ್ಡಿ, ಸಿ.ನಾರಾಯಣಸ್ವಾಮಿ,ಕೆಂಚೇಗೌಡ, ವಿಶ್ವನಾಥ್, ನಾರಾಯಣಸ್ವಾಮಿ, ನಾಗಭೂಷಣ್, ಅನಂತಪದ್ಮನಾಭ್, ಹೆಚ್.ನಾರಾಯಣಸ್ವಾಮಿ,ಆರ್.ವೆಂಕಟೇಶ್, ಸಿ. ವೆ0ಕಟೇಶಪ್ಪ, ಬಾಲಕೃಷ್ಣ, ಕೆ.ವಿ.ರಾಜಣ್ಣ ಮತ್ತಿತರರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande