
ಕೋಲಾರ, ೧೮ ಏಪ್ರಿಲ್ (ಹಿ.ಸ) :
ಆ್ಯಂಕರ್ : ಹೈನುಗಾರಿಕೆಯು ಗ್ರಾಮೀಣ ಜನರ ಆರ್ಥಿಕತೆಯ ಬದುಕಿಗೆ ಆಸರೆಯಾಗಿದ್ದು ಅವರಿಗೆ ಮತ್ತಷ್ಟು ಆಸರೆಯಾಗುವ ನಿಟ್ಟಿನಲ್ಲಿ ಕೋಮುಲ್ ವತಿಯಿಂದ ಸೌಲಭ್ಯಗಳ ಜೊತೆಗೆ ಪ್ರತಿಯೊಂದು ಗ್ರಾಮದಲ್ಲಿ ಹೊಸ ಕಟ್ಟಡಗಳನ್ನು ಕಟ್ಟುವ ಗುರಿ ಹೊಂದಲಾಗಿದೆ ಎಂದು ಕೋಮುಲ್ ನಿರ್ದೇಶಕ ಚೆಲುವನಹಳ್ಳಿ ಡಿ ನಾಗರಾಜ್ ತಿಳಿಸಿದರು
ದಿಂಬಚಾಮನಹಳ್ಳಿ ಮತ್ತು ನೆರ್ನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಗಳ ನೂತನ ಆಡಳಿತ ಮಂಡಳಿಯಿ0ದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಕೋಮುಲ್ ರಚನೆಯಾಗಿ ಪ್ರಥಮ ಆಡಳಿತ ಬಂದ ನಂತರ ಒಕ್ಕೂಟದಲ್ಲಿ ೧೪ ಕೋಟಿ ನಷ್ಟದಲ್ಲಿ ಇತ್ತು ಕ್ರಮೇಣ ಹಂತಹ0ತವಾಗಿ ಸರಿದೂಗಿಸಿ ಇವತ್ತು ೮ ಕೋಟಿ ಲಾಭ ಗಳಿಸಲಾಗಿದೆ ಹೈನುಗಾರಿಕೆಯಲ್ಲಿ ತೊಡಗಿರುವ ಹಾಲು ಉತ್ಪಾದಕರಿಗೆ ಒಕ್ಕೂಟವು ಸೂಕ್ತ ಬೆಲೆ ನೀಡಿ ಹಾಲು ಖರೀದಿ ಮಾಡುತ್ತಿದ್ದು, ಡೇರಿಗೆ ಗುಣಮಟ್ಟದ ಹಾಲು ನೀಡುವ ಮೂಲಕ ಸಂಘಗಳೂ ಕೂಡ ಉತ್ತಮ ಲಾಭಾಂಶವನ್ನು ಪಡೆದುಕೊಳ್ಳಬೇಕು ಎಂದರು.
ಪ್ರತಿಯೊAದು ಗ್ರಾಮದಲ್ಲಿ ಡೇರಿ ಹೆಸರಿನಲ್ಲಿ ಜಾಗ ಇದ್ದರೆ ನೂತನ ಕಟ್ಟಡ ಕಟ್ಟಲು ಕೋಮುಲ್ ಒಕ್ಕೂಟ, ಕೆಎಂಎಫ್ ಹಾಗೂ ಧರ್ಮಸ್ಥಳ ಸಂಘದ ಮೂಲಕ ಅನುದಾನವನ್ನು ನೀಡಲಾಗುತ್ತದೆ ಇದರ ಸದುಪಯೋಗ ಪಡಿಸಿಕೊಳ್ಳಬೇಕು ಉತ್ಪಾದಕರನ್ನು ಪೋತ್ಸಾಹಿಸುವ ಕೆಲಸವನ್ನು ಸಂಘಗಳು ಮಾಡಬೇಕಾಗಿದೆ ಸಿಬ್ಬಂದಿಗಳಿಗೂ ಗೌರವಯುತವಾದ ಸೌಲಭ್ಯಗಳನ್ನು ಒಕ್ಕೂಟವು ನೀಡುತ್ತಿದೆ ಕೋಮುಲ್ ವತಿಯಿಂದ ನೀಡುವ ಸವಲತ್ತುಗಳನ್ನು ಹಾಲು ಉತ್ಪಾದಕರು ಸಮರ್ಪಕವಾಗಿ ಬಳಸಿಕೊಂಡು ಆರ್ಥಿಕವಾಗಿ ಮುಂದೆ ಬರಬೇಕು ಎಂದರು.
ವಕ್ಕಲೇರಿ ಸೊಸೈಟಿ ಅಧ್ಯಕ್ಷ ಪಾಲಾಕ್ಷಗೌಡ ಮಾತನಾಡಿ ಚುನಾವಣೆಯ ಸಂದರ್ಭದಲ್ಲಿ ಚೆಲುವನಹಳ್ಳಿ ನಾಗರಾಜ್ ಅವರು ಮೈಸೂರಿನಲ್ಲಿ ವ್ಯವಹಾರದಲ್ಲಿ ಇದ್ದಾರೆ ಅವರಿಗೆ ಯಾರು ಮತ ಹಾಕಬಾರದು ಎಂದು ಅಪಪ್ರಚಾರ ಮಾಡಿದ್ದರು ಇವತ್ತು ಅವರು ಹಾಲು ಉತ್ಪಾದಕರ ಅಭಿವೃದ್ಧಿಗೆ ಶ್ರಮಿಸುತ್ತಿದ್ದು ಅವರ ಕಾರ್ಯ ಚಟುವಟಿಕೆಗಳನ್ನು ಕೋಲಾರದಲ್ಲಿ ವಿರೋಧಿಗಳು ನೋಡಬೇಕಾಗಿದೆ ಸೊಸೈಟಿಗಳಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಒಳ್ಳೆಯ ಹೆಸರು ಬರುತ್ತದೆ ನಿಟ್ಟಿನಲ್ಲಿ ನೂತನ ಆಡಳಿತ ಮಂಡಳಿಗಳು ಹೋಗಬೇಕು ಎಂದರು.
ಬೆಗ್ಲಿ ಡೇರಿ ಅಧ್ಯಕ್ಷ ನಾರಾಯಣಸ್ವಾಮಿ, ದಿಂಬಚಾಮನಹಳ್ಳಿ ಅಧ್ಯಕ್ಷ ವಿ.ಆನಂದ್ ಕುಮಾರ್ ಕಾರ್ಯದರ್ಶಿ ಅಶೋಕ್ ನೆರ್ನಹಳ್ಳಿ ಅಧ್ಯಕ್ಷ ವೆಂಕಟಲಕ್ಷಮ್ಮ, ಕಾರ್ಯದರ್ಶಿ ನಾರಾಯಣಸ್ವಾಮಿ, ವಕ್ಕಲೇರಿ ಸೊಸೈಟಿ ಮಾಜಿ ನಿರ್ದೇಶಕ ರಮೇಶ್, ಮುಖಂಡರಾದ ಪಾಶ್ವಗಾನಹಳ್ಳಿ ಅಶ್ವಥ್ ರಾಮ್, ಮುನೇಂದ್ರ ವಕೀಲ ಮಂಜು ಸೇರಿದಂತೆ ನಿರ್ದೇಶಕರು ಗ್ರಾಮಸ್ಥರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್