
ಬಳ್ಳಾರಿ, 18 ಏಪ್ರಿಲ್ (ಹಿ.ಸ.) :
ಆ್ಯಂಕರ್ : ವೀರಶೈವ ವಿದ್ಯಾವರ್ಧಕ ಸಂಘದ ಹಾನಗಲ್ ಶ್ರೀ ಕುಮಾರೇಶ್ವರ ಪಾಲಿಟೆಕ್ನಿಕ್ ತಾಂತ್ರಿಕ ವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳಿಗಾಗಿ ಸಾಸ್ಮೋಸ್ ಪ್ರೈವೇಟ್ ಲಿಮಿಟೆಡ್ ಮತ್ತು ಅವಿರತ ಡಿಫೇನ್ಸ್ಸಿಸ್ಟಂನ ಕ್ಯಾಂಪಸ್ ಇಂಟರ್ಯೂ ಶನಿವಾರ ಏರ್ಪಡಿಸಿತ್ತು.
ಕಾಲೇಜಿನ ಮೆಕ್ಯಾನಿಕಲ್ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ಆಂಡ್ ಕಮ್ಯುನಿಕೇಶನ್ ವಿಭಾಗದ ವಿದ್ಯಾರ್ಥಿಗಳು ಕ್ಯಾಂಪಸ್ ಇಂಟರ್ಯೂನಲ್ಲಿ ಪಾಲ್ಗೊಂಡು, ಉದ್ಯೋಗವಕಾಶಗಳನ್ನು ಪಡೆದುಕೊಂಡರು.
ಹಾನಗಲ್ ಶ್ರೀ ಕುಮಾರೇಶ್ವರ ಪಾಲಿಟೆಕ್ನಿಕ್ ತಾಂತ್ರಿಕ ವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷರಾದ ಪಲ್ಲೇದ ಪ್ರಭುಲಿಂಗ, ಪ್ರಾಚಾರ್ಯರಾದ ಬಿ. ಶ್ರೀಶೈಲಗೌಡ, ಹಾನಗಲ್ ಶ್ರೀ ಕುಮಾರೇಶ್ವರ ಪಾಲಿಟೆಕ್ನಿಕ್ ತಾಂತ್ರಿಕ ವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರಾದ ಬಾಣಾಪುರ ಜಡೆಸಿದ್ದನಗೌಡ, ಚಂದ್ರಶೇಖರ ಪಾಶ್ಚಾಪುರ್, ಬಿ. ಶ್ರೀಶೈಲಗೌಡ, ಮತ್ತು ಹಾನಗಲ್ ಶ್ರೀ ಕುಮಾರೇಶ್ವರ ಪಾಲಿಟೆಕ್ನಿಕ್ ತಾಂತ್ರಿಕ ವಿದ್ಯಾಲಯದ ಉದ್ಯೋಗಾಧಿಕಾರಿ ಕುಲ್ಲಯ್ಯಸ್ವಾಮಿ ಇನ್ನಿತರರು ವೇದಿಕೆಯಲ್ಲಿದ್ದರು.
ಸಾಸ್ಮೋಸ್ ಪ್ರೈವೇಟ್ ಲಿಮಿಟೆಡ್ ಮತ್ತು ಅವಿರತ ಡಿಫೇನ್ಸ್ಸಿಸ್ಟಂನ ಮಾನವ ಸಂಪನ್ಮೂಲ ಅಧಿಕಾರಿಗಳಾದ ಪುರುಷೋತ್ತಮ್, ಮಂಜುಳಾ,ಮತ್ತು ಸಿಂಚನ್ ಅವರು ವಿದ್ಯಾರ್ಥಿಗಳ ಸಂದರ್ಶನವನ್ನು ನಡೆಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್