
ಕೋಲಾರ, ೧೮ ಏಪ್ರಿಲ್ (ಹಿ.ಸ) :
ಆ್ಯಂಕರ್ : ಜಿಲ್ಲಾ ಮಟ್ಟದ ಚೆಸ್ ಸ್ಪರ್ಧೆಗಳು ಏ.೨೦ರ ಸೋಮವಾರಂದು ಕೋಲಾರದ ಸ್ಕೌಟ್ ಭವನದಲ್ಲಿ ಬೆಳಿಗ್ಗೆ ೯ ಗಂಟೆಗೆ ಪ್ರಾರಂಭವಾಗಲಿವೆ.
ಆಸಕ್ತಿ ಉಳ್ಳ ಚೆಸ್ ಕ್ರೀಡಾಪಟುಗಳು ಚೆಸ್ ಕ್ರೀಡೆಯಲ್ಲಿ ಭಾಗವಹಿಸಲು ಕೋರಿದೆ. ಚೆಸ್ ಆಟವನ್ನು ರಾಷ್ರಮಟ್ಟದ ಆರ್ಬಿರ್ಸ್ ನಡೆಸಿಕೊಡಲಿದ್ದಾರೆ. ಆಟವನ್ನು ಹೇಗೆ ಆಡಬೇಕೆಂದು ಹೇಳಿಕೊಡುವುದರ ಜೊತೆಗೆ ಸಮಯದ ಗಡಿಯಾರವನ್ನು ಬಳಿಸಿಕೊಂಡು ಆಟ ಹೇಗೆ ಆಡಬೇಕೆಂದು ಕಲಿಯಲು ಸಹಾಯವಾಗುತ್ತದೆ.
ಆಟವನ್ನು ೫ ರೌಂಡ್ಗಳಲ್ಲಿ ಆಡಿಸಲಾಗುವುದು. ಸಮಯ ೧೫+೫ ನಿಮಿಷಗಳನ್ನು ನೀಡಲಾಗುವುದು. ೦೧-೦೧-೨೦೧೯ ರಲ್ಲಿ ಅಥವಾ ತದನಂತರ ಹುಟ್ಟಿದವರು ೭ ನೇ ವಯೋಮಿತಿಯಲ್ಲಿ ಆಟವನ್ನು ಆಡಬೇಕು. ೦೧-೦೧-೨೦೧೭ರಲ್ಲಿ ಅಥವಾ ತದನಂತರ ಹುಟ್ಟಿದವರು ೯ ನೇ ವಯೋಮಿತಿಯಲ್ಲಿ ಆಟವನ್ನು ಆಡಬೇಕು. ೦೧-೦೧-೨೦೧೫ ರಲ್ಲಿ ಅಥವಾ ತದನಂತರ ಹುಟ್ಟಿದವರು ೧೧ ನೇ ವಯೋಮಿತಿಯಲ್ಲಿ ಆಟವನ್ನು ಆಡಬೇಕು. ೦೧-೦೧-೨೦೧೩ ರಲ್ಲಿ ಅಥವಾ ತದನಂತರ ಹುಟ್ಟಿದವರು ೧೩ ನೇ ವಯೋಮಿತಿಯಲ್ಲಿ ಆಟವನ್ನು ಆಡಬೇಕು.
೦೧-೦೧-೨೦೧೧ ರಲ್ಲಿ ಅಥವಾ ತದನಂತರ ಹುಟ್ಟಿದವರು ೧೫ ನೇ ವಯೋಮಿತಿಯಲ್ಲಿ ಆಟವನ್ನು ಆಡಬೇಕು. ೦೧-೦೧-೨೦೦೯ ರಲ್ಲಿ ಅಥವಾ ತದನಂತರ ಹುಟ್ಟಿದವರು ೧೭ ನೇ ವಯೋಮಿತಿಯಲ್ಲಿ ಆಟವನ್ನು ಆಡಬೇಕು. ೦೧-೦೧-೨೦೦೭ರಲ್ಲಿ ಅಥವಾ ತದನಂತರ ಹುಟ್ಟಿದವರು ೧೯ ನೇ ವಯೋಮಿತಿಯಲ್ಲಿ ಆಟವನ್ನು ಆಡಬೇಕು.
ಒಟ್ಟಾರೆಯಾಗಿ ೭ ವಿಭಾಗದಲ್ಲಿ ಹುಡುಗರು ಹಾಗೂ ಹುಡುಗಿಯರು ಆಟವನ್ನು ಆಡಬೇಕು. ಪ್ರತಿ ವಿಭಾಗದಲ್ಲಿ ಬಾಲಕರಿಗೆ ಹಾಗೂ ಬಾಲಕಿಯರಿಗೆ ಪ್ರಥಮ ಸ್ಥಾನ, ದ್ವೀತಿಯ ಸ್ಥಾನ, ತೃತೀಯ ಸ್ಥಾನ, ನಾಲ್ಕನೇ ಸ್ಥಾನ, ಹಾಗೂ ೫ನೇ ಸ್ಥಾನವನ್ನು ನೀಡಲಾಗುವುದು. ಆಟದಲ್ಲಿ ಭಾಗವಹಿಸಿದ ಎಲ್ಲಾ ಆಟಗಾರರಿಗೂ ಸಮದಾನಕರ ಬಹುಮಾನವನ್ನು ನೀಡಲಾಗುವುದು. ಎಲ್ಲಾ ಆಟಗಾರರಿಗೂ ಭಾಗವಹಿಸಿದ ಸರ್ಟಿಫಿಕೇಟ್ ನೀಡಲಾಗುವುದು ಎಂದು ಜಿಲ್ಲಾ ಚೆಸ್ ಅಸೋಸಿಯೇಷನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್