ನರಸಾಪುರದಲ್ಲಿ ಅದ್ದೂರಿ ಹೂವಿನ ಕರಗ ಮಹೋತ್ಸವ
ನರಸಾಪುರದಲ್ಲಿ ಅದ್ದೂರಿ ಹೂವಿನ ಕರಗ ಮಹೋತ್ಸವ
ಕೋಲಾರ ತಾಲ್ಲೂಕಿನ ನರಸಾಪುರದಲ್ಲಿ ಕರಗ ಮಹೋತ್ಸವ ಸಂಭ್ರಮದಿAದ ನಡೆಯಿತು.


ಕೋಲಾರ, ೦೫ ಏಪ್ರಿಲ್ (ಹಿ.ಸ) :

ಆ್ಯಂಕರ್ : ತಾಲೂಕಿನ ನರಸಾಪುರ ಗ್ರಾಮದ ಶ್ರೀ ಧರ್ಮರಾಯಸ್ವಾಮಿಯ ಕರಗ ಮಹೋತ್ಸವದ ಅಭಿವೃದ್ಧಿ ಟ್ರಸ್ಟ್ ಹಾಗೂ ತಿಗಳ ಯುವಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ, ಶ್ರೀ ಧರ್ಮರಾಯ ಸ್ವಾಮಿ ಮತ್ತು ದ್ರೌಪದಮ್ಮನ ೯೫ ನೆಯ ವರ್ಷದ ಹೂವಿನ ಕರಗ ಮಹೋತ್ಸವವು ಸಾವಿರಾರು ಜನರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು.

ಕರಗ ಮಹೋತ್ಸವಕ್ಕೆ ಹೊಸಕೋಟೆ ತಾಲೂಕಿನ ಶಿವನಾಪುರ ಮಠದ ಶ್ರೀ ಪ್ರಣವಾನಂದಪುರಿ ಸ್ವಾಮೀಜಿ ಹಾಗೂ ದೇವನಹಳ್ಳಿ ತಾಲೂಕಿನ ಮುಳ್ಳಳ್ಳಿ ಶ್ರೀ ಬಾಲಯೋಗಿ ಸಾಯಿ ಮಂಜುನಾಥ ಮಹರಾಜ್ ಚಾಲನೆ ನೀಡಿದರು ರಾತ್ರಿ ೯ ಗಂಟೆಗೆ ವೇದಿಕೆಯ ಮೇಲೆ ಕರಗದ ಪೂಜಾರಿ ಕುಪ್ಪಂ ಬಾಲಾಜಿ ವಾದ್ಯ ಹಾಗೂ ತಮಟೆ ಮೇಳಗಳಿಂದ ವಿವಿಧ ರೀತಿಯ ನೃತ್ಯಗಳು ಸಾವಿರಾರು ಜನರ ಕಣ್ಣಿಗೆ ಆಕರ್ಷಕವಾಗಿ ಕಂಗೊಳಿಸುವAತೆ ಪ್ರದರ್ಶಿಸಿದರು.

ಹೂವಿನ ಕರಗಕ್ಕೆ ನರಸಾಪುರ ಗ್ರಾಮದ ಪ್ರತಿಯೊಂದು ದೇವಾಲಯಗಳಲ್ಲಿ ವಿಶೇಷ ಪೂಜೆಗಳನ್ನು ಸಲ್ಲಿಸಿದರು ಹಾಗೂ ಮನೆ ಮನೆಗಳಲ್ಲಿ ಮತ್ತು ಇಡೀ ಗ್ರಾಮದಲ್ಲಿ ಹಬ್ಬದ ವಾತಾವರಣ ತುಂಬಿತ್ತು ಧರ್ಮರಾಯ ಸ್ವಾಮಿ ದ್ರೌಪದಮ್ಮ ದೇವಾಲಯದಲ್ಲಿ ದೇವರುಗಳಿಗೆ ಹೂವಿನ ಅಲಂಕಾರ, ವಿಶೇಷ ಪೂಜೆ, ಮಹಾ ಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನಡೆಯಿತು. ಊರಿನಲ್ಲಿ ದೀಪಾಲಂಕಾರ ಹಾಗೂ ದೇವರುಗಳ ಪಲ್ಲಕ್ಕಿ ಉತ್ಸವ, ಮಹಿಳೆಯರಿಂದ ದೀಪಾರಾಧನೆ ಸೇರಿದಂತೆ ವಿವಿಧ ದೈವಿಕ ಕೈಂಕರ್ಯಗಳು ನಡೆದವು

ಈ ಸಂದರ್ಭದಲ್ಲಿ ಎಂಎಲ್ಸಿ ಎಂ.ಎಲ್ ಅನಿಲ್ ಕುಮಾರ್, ಡಿಐಜಿಪಿ ಡಿ.ದೇವರಾಜ್, ಮಾಜಿ ಸಭಾಪತಿ ವಿ.ಆರ್. ಸುದರ್ಶನ್, ಜಿಲ್ಲಾ ವಹ್ನಿಕುಲ ಕ್ಷತ್ರಿಯ ಅಧ್ಯಕ್ಷ ಉದಯ್ ಕುಮಾರ್, ಶ್ರೀ ಧರ್ಮರಾಯಸ್ವಾಮಿ ದೇವಾಲಯದ ಟ್ರಸ್ಟಿನ ಅಧ್ಯಕ್ಷ ಈರಪ್ಪ, ಕಾರ್ಯದರ್ಶಿ ಬಿ ಶ್ರೀನಿವಾಸ್, ಪದಾಧಿಕಾರಿಗಳಾದ ವೆಂಕಟೇಶಪ್ಪ, ಬೋಜಪ್ಪ, ಎನ್ ಪಿ ಶ್ರೀನಿವಾಸ್, ಚಂಡಯ್ಯ, ರಾಜ್ಯ ಉಪಾಧ್ಯಕ್ಷ ಎನ್ ವಿ ಗೋಪಿ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಕುಮಾರ್, ದೇವರಾಜ್, ಶಶಿ, ಲಕ್ಷಿö್ಮಪತಿ, ಟಿ ನಾಗರಾಜ್, ಕಾರ್ತಿಕ್, ಮೋಹನ್, ವೆಂಕಟಪ್ಪ, ಎನ್ ಎಲ್ ಶ್ರೀನಿವಾಸ್, ವಹ್ನಿಕುಲ ಕ್ಷತ್ರಿಯ ತಿಗಳರ ಸಮುದಾಯದ ಪದಾಧಿಕಾರಿಗಳು, ಕುಲಸ್ಥರು, ಹಿರಿಯರು, ಯುವ ಮುಖಂಡರು, ಹಾಗೂ ನರಸಾಪುರ ಮತ್ತು ಸುತ್ತಮುತ್ತಲಿನ ಗ್ರಾಮದ ಸಾವಿರಾರು ಭಕ್ತರು ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande