ಏಪ್ರಿಲ್ ೧೬ರಿಂದ ಕೋಲಾರ ಜಿಲ್ಲಾದ್ಯಂತ ಜನಗಣತಿಯ ಮೊದಲ ಹಂತದ ಕಾರ್ಯಾರಂಭ
ಏಪ್ರಿಲ್ ೧೬ರಿಂದ ಕೋಲಾರ ಜಿಲ್ಲಾದ್ಯಂತ ಜನಗಣತಿಯ ಮೊದಲ ಹಂತದ ಕಾರ್ಯಾರಂಭ
ಕೋಲಾರ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಜನಗಣತಿಯ ಬಗ್ಗೆ ಅಧಿಕಾರಿಗಳ ಸಭೆ ನಡೆಸಿದರು.


ಕೋಲಾರ, ಏಪ್ರಿಲ್ ೧೫ (ಹಿ.ಸ) :

ಆ್ಯಂಕರ್ : ಭಾರತದ ಜನಗಣತಿ ೨೦೨೭ರ ಪ್ರಕ್ರಿಯೆಗಳು ಜಿಲ್ಲೆಯಲ್ಲಿ ಚಾಲನೆ ಪಡೆದಿದ್ದು, ಮೊದಲ ಹಂತದ 'ಮನೆ ಪಟ್ಟಿ ಮತ್ತು ವಸತಿ ಗಣತಿ' ಕಾರ್ಯವು ಏಪ್ರಿಲ್ ೧೬ರಿಂದ ಅಧಿಕೃತವಾಗಿ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ದ. ಎಂ. ಆರ್ ರವಿ ಅವರು ಇಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬರುವ ಒಂದು ತಿಂಗಳ ಕಾಲ ನಡೆಯಲಿರುವ ಈ ಬೃಹತ್ ಕಾರ್ಯಕ್ಕೆ ಜಿಲ್ಲಾಡಳಿತವು ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ. ಈ ಹಂತದಲ್ಲಿ ಗಣತಿದಾರರು ತಮಗೆ ಹಂಚಿಕೆಯಾಗಿರುವ ನಗರ ಮತ್ತು ಗ್ರಾಮೀಣ ಪ್ರದೇಶದ ಬ್ಲಾಕ್ಗಳಿಗೆ ಭೇಟಿ ನೀಡಿ ಪ್ರಮುಖ ಮಾಹಿತಿಯನ್ನು ಸಂಗ್ರಹಿಸಲಿದ್ದಾರೆ ಗಣತಿ ಬ್ಲಾಕ್ನ ನಕ್ಷೆ ತಯಾರಿಸಿ, ಪ್ರತಿ ಮನೆಗೆ ಪ್ರತ್ಯೇಕ ಸಂಖ್ಯೆ ನೀಡುವುದು. ಕಟ್ಟಡವು ಪಕ್ಕಾ ಅಥವಾ ಕಚ್ಚಾ ಮನೆಯೇ ಮತ್ತು ಅದರ ಬಳಕೆ (ವಸತಿ ಅಥವಾ ವಾಣಿಜ್ಯ) ಹಾಗೂ ಕೊಠಡಿಗಳ ಸಂಖ್ಯೆಯ ಮಾಹಿತಿ ಸಂಗ್ರಹ ಮಾಡಬೇಕು. ಕುಡಿಯುವ ನೀರಿನ ಮೂಲ, ಶೌಚಾಲಯ ವ್ಯವಸ್ಥೆ, ವಿದ್ಯುತ್ ಹಾಗೂ ಅಡುಗೆ ಇಂಧನದ ಮೂಲಗಳ ಮಾಹಿತಿ. ಮನೆಯಲ್ಲಿರುವ ಟಿವಿ, ವಾಹನಗಳ ವಿವರ ಹಾಗೂ ಒಟ್ಟಿಗೆ ವಾಸಿಸುತ್ತಾ ಒಟ್ಟಾಗಿ ಊಟ ಮಾಡುವ ಕುಟುಂಬಗಳನ್ನು ಗುರುತಿಸುವುದು ಮುಂತಾದ ವಿವರಗಳನ್ನು ಸಂಗ್ರಹಿಸಲಾಗುತ್ತದೆ ಎಂದು ತಿಳಿಸಿದರು.

ಜಿಲ್ಲೆಯಾದ್ಯಂತ ಒಟ್ಟು ೩,೩೭೩ ಗಣತಿ ಬ್ಲಾಕ್ಗಳಿದ್ದು, ಕಾರ್ಯನಿರ್ವಹಿಸಲು ೨,೫೮೬ ಗಣತಿದಾರರು ಹಾಗೂ ೪೨೭ ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ.

ಕೋಲಾರ ತಾಲ್ಲೂಕಿನಲ್ಲಿ ೮೧೦ ಹೆಚ್ ಎಲ್ ಬಿ ಗಳಿದ್ದು, ೬೩೩ ಗಣತಿದಾರರು, ೧೦೬ ಮೇಲ್ವಿಚಾರಕರು ಸೇರಿ ಒಟ್ಟು ೭೩೯ ಸಿಬ್ಬಂದಿ ನಿಯೋಜಿಸಲಾಗಿದೆ.

ಮಾಲೂರು ತಾಲ್ಲೂಕಿನಲ್ಲಿ ೬೧೦ ಹೆಚ್ ಎಲ್ ಬಿ ಗಳನ್ನು ಗುರುತಿಸಲಾಗಿದೆ. ೪೭೩ ಗಣತಿದಾರರು ಮತ್ತು ೭೮ ಮೇಲ್ವಿಚಾರಕರು ಸೇರಿ ೫೫೧ ಸಿಬ್ಬಂದಿ ನೇಮಕ ಮಾಡಲಾಗಿದೆ. ಮುಳಬಾಗಿಲು ತಾಲ್ಲೂಕಿನಾದ್ಯಾಂತ ೫೮೧ ಹೆಚ್ ಬಿ ಎಲ್ ಗಳನ್ನು ಗುರುತಿಸಿದ್ದು, ೪೨೫ ಗಣತಿದಾರರು ಮತ್ತು ೭೧ ಮೇಲ್ವಿಚಾರಕರನ್ನು ಸೇರಿ ಒಟ್ಟು ೪೯೬ ಸಿಬ್ಬಂದಿ ನೇಮಿಸಲಾಗಿದೆ.

ಶ್ರೀನಿವಾಸಪುರ ತಾಲ್ಲೂಕಿನಲ್ಲಿ ೫೪೪ ಹೆಚ್ ಬಿ ಎಲ್ ಗಳನ್ನು ಗುರುತಿಸಲಾಗಿದ್ದು, ೩೫೯ ಗಣತಿದಾರರು ಮತ್ತು ೫೯ ಮೇಲ್ವಿಚಾರಕರು ಸೇರಿ ೪೧೮ ಸಿಬ್ಬಂದಿ ನೇಮಕ ಮಾಡಲಾಗಿದೆ. ಕೆ.ಜಿ.ಎಫ್ ತಾಲ್ಲೂಕಿನಲ್ಲಿ ೪೩೦ ಹೆಚ್ ಬಿ ಎಲ್ ಗಳನ್ನು ಗುರುತಿಸಿ ೩೪೫ ಗಣತಿದಾರರು ಮತ್ತು ೫೫ ಮೇಲ್ವಿಚಾರಕರು ಸೇರಿದಂತೆ ೪೦೦ ಸಿಬ್ಬಂದಿಗಳನ್ನು ನೇಮಿಸಲಾಗಿದೆ.

ಬಂಗಾರಪೇಟೆ ತಾಲ್ಲೂಕಿನಲ್ಲಿ ೩೯೮ ಹೆಚ್ ಬಿ ಎಲ್ ಗಳನ್ನು ಗುರುತಿಸಿ ೩೫೧ ಗಣತಿದಾರರು ಮತ್ತು ೫೮ ಮೇಲ್ವಿಚಾರಕರು ಸೇರಿ ಒಟ್ಟು ೪೦೯ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ ಎಂದರು.

ಈಗಾಗಲೇ ಮೂರು ದಿನಗಳ ಕಾಲ ತರಬೇತಿ ಪಡೆದಿರುವ ಸಿಬ್ಬಂದಿಗಳು ದಿನಾಂಕ ೧೬-೦೪-೨೦೨೬ ರಿಂದ ೧೫-೦೫-೨೦೨೬ರ ವರೆಗೆ ಕ್ಷೇತ್ರ ಕಾರ್ಯ ನಿರ್ವಹಿಸಲಿದ್ದಾರೆ. ಯಾವುದೇ ತುರ್ತು ಸಂದರ್ಭಗಳಿಗಾಗಿ ಜಿಲ್ಲಾದ್ಯಂತ ಶೇ. ೧೦ ರಷ್ಟು ಅಂದರೆ ಒಟ್ಟು ೨೫೬ ಗಣತಿದಾರರು ಮತ್ತು ೪೩ ಮೇಲ್ವಿಚಾರಕರನ್ನು* ಮೀಸಲು ಸಿಬ್ಬಂದಿಗಲಾಗಿ ಇರಿಸಿಕೊಳ್ಳಲಾಗಿದೆ. ಗಣತಿದಾರರು ಸಂಗ್ರಹಿಸಿದ ಮಾಹಿತಿಯನ್ನು ಮೇಲ್ವಿಚಾರಕರು ಪರಿಶೀಲಿಸಿ, ತಮ್ಮ ಲಾಗಿನ್ ಮೂಲಕ ಅಂತಿಮಗೊಳಿಸಲಿದ್ದಾರೆ. ಸಾರ್ವಜನಿಕರು ಗಣತಿದಾರರಿಗೆ ನಿಖರ ಮಾಹಿತಿ ನೀಡಿ ಈ ರಾಷ್ಟ್ರೀಯ ಕಾರ್ಯಕ್ಕೆ ಸಹಕರಿಸಲು ಕೋರಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande