
ಕೋಲಾರ, ಏಪ್ರಿಲ್ ೧೫ :
ಆ್ಯಂಕರ್ : ಬೀದರ್ ಝೀರಾ ಕನ್ವೆನ್ನನ್ ಹಾಲ್ನಲ್ಲಿ ಏಪ್ರಿಲ್ ೧೧ ಮತ್ತು ೧೨, ಶನಿವಾರ ಮತ್ತು ಭಾನುವಾರ ನಡೆದ ೪೦ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಸಲ್ಲಿಸಿರುವ ಮೌಲಿಕವಾದ ಸೇವೆಯನ್ನು ಗುರುತಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಸುಣ್ಣುವಂಡ ಶ್ರೀನಿವಾಸ ಚಂಗಪ್ಪ ಪ್ರಶಸ್ತಿ (ಸೈನಿಕರ ಕುರಿತ ವರದಿಗೆ) ಕೆಯುಡಬ್ಲೂಜೆ ಪ್ರಶಸ್ತಿಯನ್ನು ಪಡೆದ ಮುಳಬಾಗಿಲು ವಿಜಯವಾಣಿ ವರದಿಗಾರ ಎ. ಅಪ್ಪಾಜಿಗೌಡರನ್ನು ಮುಳಬಾಗಿಲಿನ ಭಾರತೀಯ ಕಿಸಾನ್ ಸಂಘ ಕಾರ್ಯಾಲಯದಲ್ಲಿ ಬುಧವಾರ ಬಿಕೆಎಸ್ ಪದಾಧಿಕಾರಿಗಳು ಮತ್ತು ವಿವಿಧ ಸಂಘ ಸಂಸ್ಥೆ ಪ್ರಮುಖರು ಸನ್ಮಾನಿಸಿದರು.
ಪ್ರತಿ ವರ್ಷ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ವಿವಿಧ ವಿಭಾಗಗಳಲ್ಲಿ ಉತ್ತಮ ವರದಿಗಾರಿಕೆಗಾಗಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ, ಅದೇ ರೀತಿ ತಾಲೂಕಿನ ನಿವೃತ್ತ ಸೈನಿಕರ ಸಮಸ್ಯೆಗಳ ಕುರಿತು ವರದಿಗೆ ಪ್ರಶಸ್ತಿ ಲಭಿಸಿರುವುದು ಶ್ಲಾಘನೀಯ ಮುಂದೆಯೂ ಸೈನಿಕರು ರೈತರು ಸೇರಿದಂತೆ ಎಲ್ಲಾ ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ವರದಿ ಪ್ರಕಟಿಸುವ ಮೂಲಕ ಇನ್ನು ಹೆಚ್ಚು ಹೆಚ್ಚು ಸೇವೆ ಸಲ್ಲಿಸಲಿ ಎಂದು ಗಣ್ಯರು ಶುಭ ಹಾರೈಸಿದರು.
ಬಿಕೆಎಸ್ ಜಿಲ್ಲಾಧ್ಯಕ್ಷ ಕೆ. ರಘುನಾಥರೆಡ್ಡಿ, ಜಿಲ್ಲಾ ಉಪಾಧ್ಯಕ್ಷ ಅರಹಳ್ಳಿ ಶ್ರೀನಿವಾಸ ಗೌಡ, ಜಿಲ್ಲಾ ಖಜಾಂಚಿ ವಕೀಲ ವಿ. ಜಯಪ್ಪ, ತಾಲೂಕು ಅಧ್ಯಕ್ಷ ಆರ್. ನಾರಾಯಣಗೌಡ, ಉಪಾಧ್ಯಕ್ಷ ವೆಂಕಟರಾಮಾಚಾರಿ, ಕಾರ್ಯದರ್ಶಿ ಗಂಗಾಪುರ ಮುನಿರಾಮಯ್ಯ, ಸಂಘಟನಾ ಕಾರ್ಯದರ್ಶಿ ಎಂ. ಚಂಗಲರಾಯಪ್ಪ, ಖಜಾಂಚಿ ಕೆ. ಎನ್. ಕೃಷ್ಣಪ್ಪ, ಮುಳಬಾಗಿಲು ನಗರ ಘಟಕದ ಅಧ್ಯಕ್ಷ ಬೆಮೆಲ್ ಧನಂಜಯ, ಮಿಟ್ಟೂರು ಶಂಕರಪ್ಪ, ಪ್ರೇಮವತಮ್ಮ, ಅನೇಹಳ್ಳಿ ಶ್ರೀನಿವಾಸ್, ಹನುಮನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಬಿ. ಎಸ್. ಶಶಿಕಲಾ, ಮೋದಿ ಜನೌಷಧಿ ಕೇಂದ್ರದ ಮುಖ್ಯಸ್ಥೆ ಗೀತಾ, ಬಿಜೆಪಿ ಮುಖಂಡ ನಂಗಲಿ ಕೆ. ಸತೀಶ್, ನಗರ ಘಟಕದ ಮಾಜಿ ಅಧ್ಯಕ್ಷ ಅಮರ್, ಪ್ರಧಾನ ಕಾರ್ಯದರ್ಶಿಗಳಾದ ಮೈಕ್ ಶಂಕರಪ್ಪ, ಆರ್. ಕೆ. ವಿಶ್ವನಾಥ್ ಕುಮಾರ್, ಶ್ರೀನಿವಾಸ ಬಾಬು, ತಾಲೂಕು ಭೋವಿ ಸಂಘದ ಅಧ್ಯಕ್ಷ ಜಿ. ಶಂಕರಪ್ಪ , ಡಾ. ಡಿ ವಿ ಗುಂಡಪ್ಪ ಕನ್ನಡ ಸಂಘದ ಅಧ್ಯಕ್ಷ ಕೆ. ಮಧುಸೂದನ್, ಮುಡಿಯನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ ಸಮಿತಿ ಅಧ್ಯಕ್ಷ ಬೇವನಹಳ್ಳಿ ನಾಗರಾಜ್, ಕಾರ್ಯದರ್ಶಿ ಬಿ. ಎನ್. ಗಣೇಶನ್, ಖಜಾಂಚಿ ಮುಡಿಯನೂರು ಜಯಲಕ್ಷ್ಮಮ್ಮ ಮತ್ತಿತರರು ಕಿಸಾನ್ ಸಂಘದ ಕಾರ್ಯಾಲಯದಲ್ಲಿ ಸನ್ಮಾನಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಭೋವಿ ಸಂಘದ ಜಿಲ್ಲಾಧ್ಯಕ್ಷ ಹಾಗೂ ತಾಪಂ ಮಾಜಿ ಅಧ್ಯಕ್ಷ ಸಿ. ವಿ. ಗೋಪಾಲ್, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ, ಪದಾಧಿಕಾರಿಗಳಾದ ಫಾರೂಕ್ ಪಾಷಾ, ರಾಜೇಶ್, ಪುತ್ತೇರಿ ರಾಜು, ಗಿರೀಶ್, ನಾಗರಾಜ್, ನಟರಾಜ್ ರವರು ಸನ್ಮಾನಿಸಿದರು.
ಡಾ. ಮನೋಹರಸಾಯಿ ಗೌಡ ಆಸ್ಪತ್ರೆಯಲ್ಲಿ ಆಸ್ಪತ್ರೆ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ. ಡಿ.ಎಂ. ದೊಡ್ಡಭದ್ರೆಗೌಡ, ಮಾವು ಅಭಿವೃದ್ಧಿ ಮಂಡಳಿ ರಾಜ್ಯ ಮಾಜಿ ಅಧ್ಯಕ್ಷ ಎಂ. ಕೆ. ವಾಸುದೇವ್, ಬಿಜೆಪಿ ಒಬಿಸಿ ಜಿಲ್ಲಾ ಮಾಜಿ ಅಧ್ಯಕ್ಷ ಕೋಳಿ ನಾಗರಾಜ್ ಮತ್ತು ಆಸ್ಪತ್ರೆ ಸಿಬ್ಬಂದಿ ಸನ್ಮಾನಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್