ಸ್ವರ್ಣಭೂಮಿ ಫೌಂಡೇಷನ್ನಿ0ದ ಡಾ. ಶಿವಕುಮಾರಸ್ವಾಮಿಯವರ ಜನ್ಮ ಜಯಂತಿ ಆಚರಣೆ
ಸ್ವರ್ಣಭೂಮಿ ಫೌಂಡೇಷನ್ನಿ0ದ ಡಾ. ಶಿವಕುಮಾರಸ್ವಾಮಿಯವರ ಜನ್ಮ ಜಯಂತಿ ಆಚರಣೆ
ಕೋಲಾರದ ಸ್ವರ್ಣಭೂಮಿ ಫೌಂಡೇಷನ್ನಿAದ ಡಾ. ಶಿವಕುಮಾರಸ್ವಾಮಿಯವರ ಜನ್ಮ ಜಯಂತಿ ಆಚರಿಸಲಾಯಿತು.


ಕೋಲಾರ, 0೧ ಎಪ್ರಿಲ್ (ಹಿ.ಸ) :

ಆ್ಯಂಕರ್ : ತುಮಕೂರಿನ ಸಿದ್ದಗಂಗಾ ಮಠದ ತ್ರಿವಿಧ ದಾಸೋಹಿ, ನಡೆದಾಡುವ ದೇವರು ಎಂದೇ ಖ್ಯಾತರಾಗಿದ್ದ ಡಾ. ಶಿವಕುಮಾರ ಸ್ವಾಮೀಜಿಯವರ ಜನ್ಮದಿನೋತ್ಸವವನ್ನು ಮಕ್ಕಳ ಉದ್ಯಾನವನದಲ್ಲಿ ಸ್ವರ್ಣಭೂಮಿ ಫೌಂಡೇಷನ್ ವತಿಯಿಂದ ಆಚರಿಸಲಾಯಿತು.

ಅನ್ನ, ಅಕ್ಷರ ಮತ್ತು ವಸತಿ ದಾಸೋಹದ ಮೂಲಕ ಲಕ್ಷಾಂತರ ಬಡ ವಿದ್ಯಾರ್ಥಿಗಳ ಬಾಳನ್ನು ಬೆಳಗಿದ ಶ್ರೀಗಳ ಆದರ್ಶಗಳನ್ನು, ಸೇವಾ ಕಾರ್ಯಗಳನ್ನು ಈ ದಿನ ಸ್ಮರಿಸಲಾಗುತ್ತದೆ ಎಂದು ಸ್ವರ್ಣಭೂಮಿ ಫೌಂಡೇಷನ್ ಅಧ್ಯಕ್ಷರಾದ ಬಿ. ಶಿವಕುಮಾರ್ ತಿಳಿಸಿದರು.

ರಂಗ ಇಂಚರ ಟ್ರಸ್ಟ್ ಅಧ್ಯಕ್ಷರಾದ ಡಾ. ಇಂಚರ ನಾರಾಯಣಸ್ವಾಮಿ ಮಾತಾನಾಡಿ ಶ್ರೀಗಳ ಆದರ್ಶಗಳು, ಬದುಕಿನ ಚಿಂತನೆಗಳು, ನಡೆದುಕೊಂಡ ರೀತಿ ನೀತಿ, ಆಚಾರ-ವಿಚಾರಗಳು ಇಂದಿಗೂ ಜೀವಂತವಾಗಿವೆ. ಅವರ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಆದರ್ಶಪ್ರಾಯರಾಗಬೇಕೆಂದರು.

ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪಿ ನಾರಾಯಣಪ್ಪ ಮಾತಾನಾಡಿ ನಡೆದಾಡುವ ದೇವರು ಅನ್ನ, ಅಕ್ಷರ, ವಸತಿಗಳನ್ನು ಕೊಟ್ಟು ಸಾವಿರಾರು ಬಡಮಕ್ಕಳ ಬಾಳನ್ನು ಬೆಳಗಿದ ತ್ರಿವಿಧ ದಾಸೋಹಿ, ಪರಮಪೂಜ್ಯ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರ ಬದುಕಿದಂತೆ ನಾವು ಜೀವನ ನಡೆಸಬೇಕೆಂದರು.

ಕಾರ್ಯಕ್ರಮದಲ್ಲಿ ಕವಿ ಡಾ. ಶರಣಪ್ಪ ಗಬ್ಬೂರು, ಕಾಸರಗೋಡು ಕನ್ನಡ ಭವನದ ಕೋಲಾರ ಜಿಲ್ಲಾಘಟಕ ಜಿಲ್ಲಾಧ್ಯಕ್ಷ ಬಿ.ವಿ,ನಂಜು0ಡಪ್ಪ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪಿ. ನಾರಾಯಣಪ್ಪ, ರಂಗ ಇಂಚರ ಟ್ರಸ್ಟ್ ಅಧ್ಯಕ್ಷ ಕವಿ ಡಾ ಇಂಚರ ನಾರಾಯಣಸ್ವಾಮಿ, ಸುಪ್ರೀಂ ವಿಕಲಚೇತನ ಸಂಸ್ಥೆಯ ಅಧ್ಯಕ್ಷ ಸುಪ್ರೀಂ, ಅರ್ಬನ್ ಬ್ಯಾಂಕ್ ನಿರ್ದೇಶಕರಾದ ಶ್ರೀಧರ್, ನಿವೃತ್ತ ಬಿಐಆರ್ ಟಿ ಶಂಕರ್, ನಿವೃತ್ತ ಆರೋಗ್ಯ ಶಿಕ್ಷಣಾಧಿಕಾರಿ ವೆಂಕಟರಾಮಶೆಟ್ಟಿ, ಸುರೇಶ್, ಬಂಕ್ ವ್ಯವಸ್ಥಾಪಕರಾದ ಮುರಳಿ ಭಾಗವಹಿಸಿದ್ದರು..

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande