
ಕೋಲಾರ, ೧ ಏಪ್ರಿಲ್ (ಹಿ.ಸ) :
ಆ್ಯಂಕರ್ : ಜಿಲ್ಲಾಡಳಿತ ಭವನದ ಆವರಣದಲ್ಲಿ ಸುಮಾರು ೧.೫ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುವ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ರವರ ಭವ್ಯ ಪ್ರತಿಮೆ ಸ್ಥಾಪಿಸಲು ಗುದ್ದಲಿ ಪೂಜೆ ಕಾರ್ಯಕ್ರಮ ಬುಧವಾರ ನಡೆಯಿತು.
ಕೋಲಾರ ಶಾಸಕ ಕೊತ್ತೂರು. ಜಿ. ಮಂಜುನಾಥ್ ಮಾತನಾಡಿ, ಬಾಬಾಸಾಹೇಬ್ ಅಂಬೇಡ್ಕರ್ ಅವರು ಯಾವುದೇ ಒಂದು ಸಮುದಾಯಕ್ಕೆ ಸೇರಿದವರಲ್ಲ. ಅವರು ಇಡೀ ವಿಶ್ವಕ್ಕೆ ಮಾದರಿಯಾದ ಮಹಾನ್ ವ್ಯಕ್ತಿ. ಅವರ ಪ್ರತಿಮೆ ನಿರ್ಮಾಣ ಕಾರ್ಯದಲ್ಲಿ ಜಿಲ್ಲೆಯ ಎಲ್ಲಾ ಶಾಸಕರು, ಅಧಿಕಾರಿಗಳು ಮತ್ತು ಸಾರ್ವಜನಿಕರು ಕೈಜೋಡಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಎಂ. ಎಲ್. ಅನಿಲ್ ಕುಮಾರ್ ಮಾತನಾಡಿ ಕೋಲಾರ ಜಿಲ್ಲೆಯ ಇತಿಹಾಸದಲ್ಲಿ ಇದೊಂದು ಮೈಲಿಗಲ್ಲು ಆಗಲಿದೆ. ಈ ಪ್ರತಿಮೆಯನ್ನು ತುಮಕೂರಿನಲ್ಲಿರುವ ೧೨ ಅಡಿಯ ಪ್ರತಿಮೆಗಿಂತಲೂ ಎತ್ತರವಾಗಿ, ಅಂದರೆ ೨೧ ಅಡಿ ಎತ್ತರದಲ್ಲಿ ಸುಮಾರು ೧೨೦೦ ಕೆಜಿಗೂ ಅಧಿಕ ತೂಕದ ಕಂಚಿನಿAದ ನಿರ್ಮಿಸಲಾಗುತ್ತಿದೆ.
ಸುಮಾರು ೯೫ ಲಕ್ಷ ರೂಪಾಯಿಗಳ ವೆಚ್ಚ ದಲ್ಲಿ ಪ್ರತಿಮೆ ಹಾಗೂ ಪ್ರತಿಮೆಯ ಸುತ್ತಮುತ್ತಲಿನ ಪರಿಸರವನ್ನು ಸುಂದರಗೊಳಿಸಲು ೫೫ ಲಕ್ಷ ರೂಪಾಯಿಗಳನ್ನು ಮೀಸಲಿಡಲಾಗಿದೆ ಎಂದರು. ಈ ಯೋಜನೆಗೆ ಸರ್ಕಾರದ ನೇರ ಅನುದಾನದ ಲಭ್ಯತೆ ಇಲ್ಲದ ಕಾರಣ, ಸ್ಥಳೀಯ ಸಂಸ್ಥೆಗಳು ಮತ್ತು ಜನಪ್ರತಿನಿಧಿಗಳ ಸಹಕಾರದಿಂದ ಹಣ ಕ್ರೋಢೀಕರಿಸಲಾಗಿದೆ ಎಂದರು.
ಶಾಸಕ ಕೊತ್ತೂರು ಮಂಜುನಾಥ್ ಅವರು ೨೫ ಲಕ್ಷ ರೂ., ಅನಿಲ್ ಕುಮಾರ್ ಮತ್ತು ನಜೀರ್ ಅಹಮದ್ ಸೇರಿ ೨೫ ಲಕ್ಷ ರೂ., ನಗರಸಭೆಯಿಂದ ೩೦ ಲಕ್ಷ ರೂ., ಗ್ರಾಮ ಪಂಚಾಯಿತಿಗಳಿAದ ೨೫ ಲಕ್ಷ ರೂ. ಹಾಗೂ ಹಾಲು ಒಕ್ಕೂಟ ಮತ್ತು ಕುಡಾ ವತಿಯಿಂದಲೂ ದೇಣಿಗೆ ಪಡೆಯಲಾಗುವುದು.
ಪ್ರತಿಮೆಯ ಕೆಲಸವನ್ನು ಅತ್ಯಂತ ಗುಣಮಟ್ಟದಿಂದ ನಿರ್ವಹಿಸಬೇಕೆಂದು ಸೂಚಿಸಿದ ಅನಿಲ್ ಕುಮಾರ್ ಅವರು, ಮುಂದಿನ ಮೂರು ತಿಂಗಳ ಒಳಗಾಗಿ ಕಾಮಗಾರಿಯನ್ನು ಪೂರ್ಣಗೊಳಿಸಿ ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಅದ್ಧೂರಿಯಾಗಿ ಉದ್ಘಾಟನೆ ಮಾಡಲಾಗುವುದು ಎಂದು ತಿಳಿಸಿದರು.
ಕೋಲಾರದ ಯುವಜನತೆ ಮತ್ತು ಮುಂದಿನ ಪೀಳಿಗೆಗೆ ಅನುಕೂಲವಾಗುವಂತೆ ಕೋಲಾರ ನಗರದ ೫ ಕಿ.ಮೀ ವ್ಯಾಪ್ತಿಯಲ್ಲಿ 'ಅಂಬೇಡ್ಕರ್ ಅಧ್ಯಯನ ಕೇಂದ್ರ' ಸ್ಥಾಪಿಸುವ ಮಹತ್ವದ ಪ್ರಸ್ತಾವನೆಯನ್ನು ಮುಂದಿಟ್ಟರು.ಗೌರಿಬಿದನೂರಿನ ಮಾದರಿಯಲ್ಲಿ ಸುಸಜ್ಜಿತ ಗ್ರಂಥಾಲಯ, ಮ್ಯೂಸಿಯಂ ಮತ್ತು ಡಿಜಿಟಲ್ ಲೈಬ್ರರಿ ಒಳಗೊಂಡ ಕೇಂದ್ರವನ್ನು ನಿರ್ಮಿಸಲು ಮನವಿ ಮಾಡಿದರು.
ಈ ಕೇಂದ್ರದ ನಿರ್ಮಾಣಕ್ಕೆ ತಮ್ಮ ವೈಯಕ್ತಿಕ ಅನುದಾನದಿಂದ ೧ ಕೋಟಿ ರೂಪಾಯಿಗಳನ್ನು ನೀಡುವುದಾಗಿ ಅನಿಲ್ ಕುಮಾರ್ ಘೋಷಿಸಿದರು.
ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಮಾತನಾಡಿ ಜಿಲ್ಲೆಯ ಶಕ್ತಿ ಕೇಂದ್ರವಾದ ಜಿಲ್ಲಾಡಳಿತದ ಆವರಣದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ ನಿರ್ಮಾಣವಾಗುತ್ತಿರುವುದು ಸಮಾನತೆ ಮತ್ತು ಸಂವಿಧಾನಕ್ಕೆ ನಾವು ಸಲ್ಲಿಸುವ ದೊಡ್ಡ ಗೌರವ, ಎಂದು ಅವರು ತಿಳಿಸಿದರು.
ಇಡೀ ಜಿಲ್ಲೆಯ ಆಡಳಿತ ಯಂತ್ರ ನಿಯಂತ್ರಿಸುವ ಶಕ್ತಿ ಕೇಂದ್ರದಲ್ಲಿ ಅಂಬೇಡ್ಕರ್ ಅವರು 'ಶಕ್ತಿ ದೇವತೆ'ಯಾಗಿ ವಿರಾಜಮಾನರಾಗುವುದು ಜಿಲ್ಲೆಯ ಇತಿಹಾಸದಲ್ಲಿ ಒಂದು ಅರ್ಥಪೂರ್ಣ ಘಟನೆ. ಆಧುನಿಕ ಭಾರತದ ಇತಿಹಾಸದಲ್ಲಿ ಅಂಬೇಡ್ಕರ್ ಅವರಷ್ಟು ಚರ್ಚೆ, ವಿಮರ್ಶೆ ಮತ್ತು ಪರಾಮರ್ಶೆಗೆ ಒಳಗಾದ ಮತ್ತೊಬ್ಬ ರಾಜಕೀಯ ನಾಯಕರಿಲ್ಲ. ಅವರು ಇಡೀ ಜಗತ್ತಿಗೆ ಸೇರಿದ ಆಸ್ತಿ ಎಂದರು
ಪ್ರತಿಮೆ ನಿರ್ಮಾಣಕ್ಕೆ ಅಂದಾಜು ೧.೫ ಕೋಟಿ ರೂಪಾಯಿ ವೆಚ್ಚವಾಗಲಿದ್ದು, ಸಾರ್ವಜನಿಕರು, ಜನಪ್ರತಿನಿಧಿಗಳು ಮತ್ತು ವಿವಿಧ ಸಂಸ್ಥೆಗಳ ಸಹಕಾರದೊಂದಿಗೆ ಒಂದು ಕೋಟಿಗೂ ಅಧಿಕ ಹಣ ಸಂಗ್ರಹವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರುಗಳಾದ ಕೊತ್ತೂರು ಮಂಜುನಾಥ್ ಮತ್ತು ಅನಿಲ್ ಕುಮಾರ್ ಅವರು ಈ ಕಾರ್ಯಕ್ಕೆ ಸಂಪೂರ್ಣ ಬೆಂಬಲ ನೀಡಿದ್ದಾರೆ ಎಂದರು
ಪ್ರತಿಮೆಯ ಜೊತೆಗೆ ಕೋಲಾರದಲ್ಲಿ ಅಂಬೇಡ್ಕರ್ ಅವರ ಜೀವನ ಮತ್ತು ಸಾಧನೆಯನ್ನು ಬಿಂಬಿಸುವ ಅತ್ಯಾಧುನಿಕ ಮ್ಯೂಸಿಯಂ ಸ್ಥಾಪಿಸಲು ಈಕಂಬಳ್ಳಿಯಲ್ಲಿ ೫ ಎಕರೆ ಜಮೀನು ಗುರುತಿಸಲಾಗಿದೆ. ಹಾಗೆಯೇ ಮಂಗಸ0ದ್ರದ ಬಳಿ ೨ ಎಕರೆ ಜಮೀನಿನಲ್ಲಿ ಬೌದ್ಧ ವಿಹಾರ ನಿರ್ಮಿಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.
ಇಪ್ಪತ್ತೊ0ದು ಅಡಿಯ ಈ ಕಂಚಿನ ಪ್ರತಿಮೆಯನ್ನು ಸಿದ್ಧಪಡಿಸಲು ಸುಮಾರು ಎರಡು ತಿಂಗಳ ಕಾಲಾವಕಾಶ ಬೇಕಾಗುತ್ತದೆ. ಪ್ರತಿಮೆಯ ಜೊತೆಗೆ ಸುತ್ತಮುತ್ತಲ ಪ್ರದೇಶದ ಸೌಂದರ್ಯೀಕರಣ ಕಾರ್ಯವನ್ನೂ ಕೈಗೊಳ್ಳಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಪ್ರವೀಣ್ ಪಿ. ಬಾಗೇವಾಡಿ, ಅಪರ ಜಿಲ್ಲಾಧಿಕಾರಿ ಎಸ್. ಎಂ ಮಂಗಳ, ಜಿಲ್ಲಾ ವರಿಷ್ಟಾಧಿಕಾರಿ ಕನ್ನಿಕಾ ಸಿಕ್ರಿವಾಲ್, ಜಿಲ್ಲಾ ಉಪ ವಿಭಾಗ ಅಧಿಕಾರಿ ಜಂಬಗಿರೇಣುಕಾ ಪ್ರಸಾದ್ ದಿಲೀಪ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರು ಶ್ರೀನಿವಾಸನ್ , ಸಮಾಜದ ಮುಖಂಡರು ಡಾ ಚಂದ್ರಶೇಖರ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬೆಳಗಾನಹಳ್ಳಿ ಮುನಿವೆಂಕಟಪ್ಪ, ವಿಜಯಕುಮಾರ್ , ನಗರಸಭೆ ಆಯುಕ್ತರು ನವೀನ್ ಚಂದ್ರ, ಕೋಲಾರ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಮಂಜುನಾಥ್, ಪಂಡಿತ್ ಮುನಿವೆಂಕಟಪ್ಪ ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್