ಮಾಲೂರಿನಲ್ಲಿ ಹೊಸ ರಾಜಕೀಯ ಪರ್ವ ಆರಂಭ
ಮಾಲೂರಿನಲ್ಲಿ ಹೊಸ ರಾಜಕೀಯ ಪರ್ವ ಆರಂಭ
ಹೂಡಿ ವಿಜಯಕುಮಾರ್, ಕೆ.ವೈ.ನಂಜೇಗೌಡ, ಮಂಜುನಾಥಗೌಡ ಹಾಗೂ ರಾಮೇಗೌಡ


ಕೋಲಾರ,೦೫ ಫೆಬ್ರವರಿ (ಹಿ.ಸ.)

ಆಂಕರ್ ; ಕೋಲಾರ ಜಿಲ್ಲೆಯ ಮಾಲೂರು ವಿಧಾನ ಸಭಾ ಕ್ಷೇತ್ರದಲ್ಲಿ ಹೊಸ ರಾಜಕೀಯ ಪರ್ವ ಆರಂಭವಾಗಿದೆ.ಕಳೆದ ವಿಧಾನಸಭಾ ಚುನಾವಣೆಯ ಸ್ವ್ವಾಭಿಮಾನಿ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳಾದ ಕೆ.ವೈ.ನಂಜೇ ಗೌಡ ಮತ್ತು ಕೋಡಿಹಳ್ಳಿ ಮಂಜುನಾಥ ಗೌಡರಿಗೆ ತೀವ್ರ ಸ್ಪರ್ಧೆ ಒಡ್ಡಿದ ಹೂಡಿ ವಿಜಯಕುಮಾರ್ ಬೆಂಗಳೂರಿನ ಜೆ.ಡಿ.ಎಸ್ ಪಕ್ಷದ ಕಛೇರಿಯಲ್ಲಿ ಸೇರ್ಪಡೆಯಾಗಿದ್ದಾರೆ. ಹೂಡಿ ವಿಜಯ್ ಕುಮಾರ್ ಮತ್ತು ಬೆಂಬಲಿಗರು ಜೆ.ಡಿ.ಎಸ್.ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.ಆ ಮೂಲಕ ಮಾಲೂರಿನಲ್ಲಿ ಹೊಸ ರಾಜಕೀಯ ಅಧ್ಯಾಯ ಆರಂಭಿಸಿದ್ದಾರೆ.

ಕಳೆದ ಏದು ವರ್ಷಗಳ ಹಿಂದೆ ಮಾಲೂರಿನಲ್ಲಿ ಸಮಾಜ ಸೇವೆ ಆರಂಭಿಸಿದ ವಿಜಯ್ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದರು. ಆದರೆ ಟಿಕೆಟ್ ಕೈತಪ್ಪಿ ಸ್ವಾಭಿಮಾನಿ ಜನತಾ ಪಕ್ಷದ ಹೆಸರಿನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಾಂಗ್ರೆಸ್ ಮತ್ತು ಬಿ.ಜೆ.ಪಿ ಅಭ್ಯರ್ಥಿಗಳಿಗೆ ಬೆವರು ಇಳಿಸಿದ್ದರು. ವಿಜಯ್ ಕುಮಾರ್ ಬೆನ್ನಿಗೆ ಮಾಲೂರು ಕ್ಷೇತ್ರದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ವಹ್ನಿಕುಲದ ಹಿಂದುಳಿದ ವರ್ಗದವರು ನಿಂತಿದ್ದರು. ಜೊತೆಗೆ ಇತರ ಸಮುದಾಯದವರು ಬೆಂಬಲಿಸಿದ್ದರು. ಇದರಿಂದಾಗಿ ಮಾಲೂರಿನ ರಾಜಕಾರಣದ ಚಿತ್ರ ಬದಲಾಗಿತ್ತು. ಬಿ.ಜೆ.ಪಿ ,ಜೆಡಿ ಎಸ್ ಹಾಗು ಪಕ್ಷೇತರ ಅಭ್ಯರ್ಥಿ ಹೂಡಿ ವಿಜಯ್ ಕುಮಾರ್ ನಡುವಿನ ಸ್ಪರ್ಧೆಯಿಂದಾಗಿ ತಾನು ನಿರಾಯಸವಾಗಿ ಗೆಲ್ಲಬಹುದೆಂಬ ನಂಜೇಗೌಡರ ಲೆಕ್ಕಾಚಾರಗಳು ತಲೆಕೆಳಗಾಗಿದ್ದವು.

ನಂಜೇ ಗೌಡರು ಕೂದಲ ಎಳೆಯಲ್ಲಿ ಅತ್ಯಂತ ಪ್ರಯಾಸದಿಂದ ಆಯ್ಕೆಯಾದರು. ಒಂದೇ ಏಟಿಗೆ ನಂಜೇಗೌಡರಿಗೆ ಮತ್ತು ಮಂಜುನಾಥ ಗೌಡರಿಗೆ ತಿರುಗೇಟು ನೀಡಿದ್ದರು. ಹೂಡಿ ವಿಜಯ್ ಕುಮಾರ್ ರಾಜಕೀಯವಾಗಿ ತಳಯೂರಲು ವಿಧಾನಸಭಾ ಚುನಾವಣೆ ಕಾರಣವಾಯಿತು.ಸ್ಥಳೀಯ ಸಂಸ್ಥೆಗಳ ಚುನಾವಣೆ ಸನಿಹದಲ್ಲಿರುವ ಕಾಲಘಟ್ಟದಲ್ಲಿ ಹೂಡಿ ವಿಜಯ್ ಕುಮಾರ್ ಜೆ.ಡಿ.ಎಸ್ ಸೇರ್ಪಡೆ ಹೊಸ ರಾಜಕೀಯ ಲೆಕ್ಕಾಚಾರಕ್ಕೆ ಕಾರಣವಾಗಿದೆ. ಮೂಲತಹ: ಕಾಂಗ್ರೆಸ್ ಮೂಲಕ ರಾಜಕಾರಣ ಆರಂಭಿಸಿದ ರಾಮೇಗೌಡರು ಸಜ್ಜನ ರಾಜಕಾರಣಿಯಾಗಿದ್ದರೆ. ಕಾಂಗ್ರೆಸ್ ಟಿಕೆಟ್ ಸಿಗದ ಕಾರಣ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಮಂಜುನಾಥಗೌಡರು ಜೆ.ಡಿ.ಎಸ್ ತೊರೆದು ಬಿ.ಜೆ.ಪಿ ಗೆ ಸೇರ್ಪಡೆಯಾದ ಕಾರಣ ರಾಮೇಗೌಡರು ಜೆ.ಡಿ.ಎಸ್.ಗೆ ಸೇರ್ಪಡೆಯಾದರು.ಆದರೆ ನಿರೀಕ್ಷಿತ ಮಟ್ಟದಲ್ಲಿ ಜನ ಬೆಂಬಲ ದೊರೆಯಲ್ಲಿ. ರಾಮೇಗೌಡರು ನಾಲ್ಕನೇ ಸ್ಥಾನಕ್ಕೆ ಹೋದರು.

ಕಣದಲ್ಲಿದ್ದ ನಂಜೇಗೌಡರು ,ಮಂಜುನಾಥ ಗೌಡರು ಹಾಗು ರಾಮೇಗೌಡರು ಒಕ್ಕಲಿಗರ ಮತಗಳನ್ನು ಹಂಚಿಕೊ0ಡರು. ಜೆ.ಡಿ.ಎಸ್.ಗೆ ನಿರೀಕ್ಷಿತ ಬೆಂಬಲ ದೊರೆಯಲಿಲ್ಲ. ಪರ್ಯಾಯ ರಾಜಕೀಯ ಶಕ್ತಿಗಾಗಿ ಜೆ.ಡಿ.ಎಸ್ ಹುಡುಕಾಟದಲ್ಲಿತ್ತು. ಆಗ ಹೂಡಿ ವಿಜಯ್ ಕುಮಾರ್ ಜೆ.ಡಿ.ಎಸ್ ಪಕ್ಷಕ್ಕೆ ಪರ್ಯಾಯವಾಗಿ ಕಂಡರು. ರಾಮೇಗೌಡರನ್ನು ಚುನಾವಣಾ ರಾಜಕಾರಣ ಹಣ್ಣುಗಾಯಿ ನೀರುಗಾಯಿ ಮಾಡಿತ್ತು.ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆ.ಡಿ.ಎಸ್ ಪಕ್ಷವನ್ನು ವಿಜಯಕುಮಾರ್ ಬೆಂಬಲಿಸಿದ್ದರು. ಇದರಿಂದಾಗಿ ಹೂಡಿ ವಜಯ್ ಕುಮಾರ್ ಜೆ.ಡಿ.ಎಸ್ ನಾಯಕರಿಗೆ ಹತ್ತಿರವಾದರು. ರಾಮೇ ಗೌಡರು ಹೂಡಿ ವಿಜಯ್ ಕುಮಾರ್ ಸೇರ್ಪಡೆಯನ್ನು ಮುಕ್ತವಾಗಿ ಸ್ವಾಗತಿಸಿದ್ದಾರೆ. ದೆಹಲಿಗೆ ತೆರಳಿ ಕುಮಾರಸ್ವಾಮಿಯವರೊಂದಗೆ ಮಾತುಕತೆ ನಡೆಸಿದ್ದರು. ಕುಮಾರಸ್ವಾಮಿಯವರು ಸಹಮತ ವ್ಯಕ್ತಪಡಿಸಿದ್ದರು. ಬೆಂಗಳೂರಿನಲ್ಲಿ ವಿಜಯ್ ಕುಮಾರ್ ತಮ್ಮ ಬೆಂಬಲಿಗರೊ0ದಿಗೆ ಜೆ.ಡಿ.ಎಸ್ ಸೇರ್ಪಡೆಯಾದರು. ಆ ಮೂಲಕ ಜೆ.ಡಿ.ಎಸ್ಗೆ ಆನೆಬಲ ಬಂದ0ತಾಗಿದೆ. ಹೂಡಿ ವಿಜಯ್ ಕುಮಾರ್ ಸೇರ್ಪಡೆಗೆ ಜೆ.ಡಿ.ಎಸ್ ನಲ್ಲಿ ಯಾವುದೇ ಅಪಸ್ವರ ವ್ಯಕ್ತವಾಗಿಲ್ಲ. ಹೂಡಿ ವಿಜಯ್ ಕುಮಾರ್ ಜೆ.ಡಿ.ಎಸ್ ಮಾಜಿ ಶಾಸಕ ಮಂಜುನಾಥ ಗೌಡರು ತಳಮಳಗೊಂಡಿದ್ದರೆ. ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲು ಹೂಡಿ ವಿಜಯ್ ಕುಮಾರ್ ಜೆ.ಡಿ.ಎಸ್ ಸೇರ್ಪಡೆಯಾಗಿದ್ದಾರೆ. ನಂಜೇಗೌಡರನ್ನು ಇ.ಡಿ ಹಾಗು ಆದಾಯ ತೆರಿಗಳ ತನಿಖೆಯಿಂದ ಕುಮಾರಸ್ವಾಮಿ ಕೇಂದ್ರದಲ್ಲಿ ಪ್ರಭಾವ ಬೀರಿ ಪಾರು ಮಾಡಿದ್ದಾರೆ. ಮುಂದೆ ಕುಮಾರಸ್ವಾಮಿಯವರಿಗೆ ಅರ್ಥವಾಗಲಿದೆ. ಹೂಡಿ ವಿಜಯ್ ಕುಮಾರ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿ.ಜಿ.ಪಿ ವಿರುದ್ಧ ಸ್ಪರ್ಧಿಸಿ ಸೋಲಿಗೆ ಕಾರಣರಾಗಿದ್ದಾರೆ. ಅಂತಹವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ ಎಂದು ಮಂಜುನಾಥ ಗೌಡರು ಹತಾಶೆಯಿಂದ ಮಾತನಾಡಿದ್ದಾರೆ.

ಮಾಲೂರಿನಲ್ಲಿ ಜೆ.ಡಿ.ಎಸ್ ಹೂಡಿ ವಿಜಯ್ ಕುಮಾರ್ ಶಕ್ತಿ ತುಂಬಲಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿ.ಜೆ.ಪಿ ಟಿಕೆಟ್ ಕೈತಪ್ಪಲಿದೆ ಎಂದು ಎಂದು ಮಂಜುನಾಥ ಗೌಡರು ಆತಂಕಗೊ0ಡಿದ್ದಾರೆ. ಆದರೆ ಮಂಜುನಾಥ ಗೌಡರು ಕುಮಾರ ಸ್ವಾಮಿಯವರ ವಿಶ್ವಾಸ ಕಳೆದುಕೊಂಡಿದ್ದಾರೆ. ಮಾಲೂರಿನಲ್ಲಿ ಜೆ.ಡಿ.ಎಸ್ ಹಾಗು ಬಿ,ಜೆ.ಪಿ ಪಕ್ಷದೊಂದಿಗೆ ರಾಜಕೀಯ ಮಾಡಿದ್ದಾರೆ. ಹೊಸಕೋಟೆಯಲ್ಲಿ ಬಚ್ಚೆಗೌಡರ ಕುಟುಂದೊ0ದಿಗೆ ಮಂಜುನಾಥ ಗೌಡರು ಒಳ್ಳೆಯ ಒಡನಾಟ ಹೊಂದಿದ್ದಾರೆ. ಬಿ.ಜಿ.ಪಿ ಸಂಸದರಾಗಿದ್ದ ಬಚ್ಚೇಗೌಡರು ಪುತ್ರನಿಗಾಗಿ ಪಕ್ಷತೊರೆದು ತಟಸ್ಥರಾಗಿ ಉಳಿದರು. ಶರತ್ ಬಚ್ಚೇಗೌಡರೊಂದಿಗೆ ಮಂಜುನಾಥ ಗೌಡರು ಒಳ್ಳೆಯ ಭಾಂದವ್ಯಹೊ0ದಿದ್ದಾರೆ.ಅಲ್ಲದೆ ರಾಜ್ಯ ಕಾಂಗ್ರೆಸ್ ನಾಯಕರೊಂದಿಗೆ ಸಂಪರ್ಕದಲ್ಲಿದ್ದಾರೆ. ಸಮಯಕ್ಕೆ ತಕ್ಕಂತೆ ಮಂಜುನಾಥಗೌಡರು ವೈಯಕ್ತಿಕ ಲಾಭಕ್ಕಾಗಿ ರಾಜಕಾರಣ ಮಾಡುತ್ತಿದ್ದಾರೆ. ಬಿಜೆಪಿಯಲ್ಲಿದ್ದರೂ ಸಹ ಕಾಂಗ್ರೆಸ್ನ ಪ್ರಭಾವಿ ನಾಯಕರೊಂದಿಗೆ ಸಂಪರ್ಕದಲ್ಲಿದ್ದಾರೆ. ಇದರಿಂದಾಗಿ ಮಂಜುನಾಥಗೌಡರು ಮುಂದೆ ದೊಡ್ಡಬೆಲೆ ರಾಜಕೀಯವಾಗಿ ತೆರಬೇಕಾಗಿದೆ. ಮಾಲೂರಿನಲ್ಲಿ ಬಿಜೆಪಿ ಹೊಸಕೋಟೆಯಲ್ಲಿ ಕಾಂಗ್ರೆೆಸ್ ಜೊತೆ ಸಖ್ಯ ಹೊಂದಿರುವ ಮಂಜುನಾಥಗೌಡರಿಗೆ ಹೂಡಿ ವಿಜಯಕುಮಾರ್ ಜೆಡಿಎಸ್ ಸೇರ್ಪಡೆ ಬಿಸಿತುಪ್ಪ ಆಗಿದೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande