ಸರ್ಕಾರದ ಯೋಜನೆ ಸದುಪಯೋಗಕ್ಕೆ ಶಾಸಕ ಕೊತ್ತೂರು ಮಂಜುನಾಥ್ ಕರೆ
ಸರ್ಕಾರದ ಯೋಜನೆ ಸದುಪಯೋಗಕ್ಕೆ ಶಾಸಕ ಕೊತ್ತೂರು ಮಂಜುನಾಥ್ ಕರೆ
ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಮಹಿಳೆಯರಿಗೆ ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಹೊಲಿಗೆ ಯಂತ್ರಗಳನ್ನು ವಿತರಿಸಿದರು.


ಕೋಲಾರ ೦೫ ಮಾರ್ಚ್ (ಹಿ.ಸ)

ಆ್ಯಂಕರ್ : ಸರ್ಕಾರದಿಂದ ಸಿಗುವ ಪ್ರಯೋಜನವನ್ನು ಸದುಪಯೋಗ ಪಡಿಸಿಕೊಂಡು ಮಹಿಳೆಯರು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿ ಹೊಂದಬೇಕು ಪ್ರತಿಯೊಬ್ಬ ಫಲಾನುಭವಿಯು ಪ್ರಯೋಜನದ ಬಗ್ಗೆ ಹತ್ತು ಮಂದಿಗೆ ಮಾಹಿತಿ ನೀಡಿ ಅವರನ್ನು ಸಹ ಆರ್ಥಿಕವಾಗಿ ಸಬಲರಾಗುವಂತೆ ಮಾಡಬೇಕು ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.

ನಗರದ ತಮ್ಮ ಕಛೇರಿಯಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ವತಿಯಿಂದ ಗುರುವಾರ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಿಸಿ ಮಾತನಾಡಿದ ಅವರು ಸರ್ಕಾರ ಹೆಣ್ಣು ಮಕ್ಕಳಿಗೆ ಪೋತ್ಸಾಹ ನೀಡುತ್ತಿದೆ ಆರ್ಥಿಕ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲು ದಾರಿ ಮಾಡಿಕೊಡುತ್ತದೆ ಇವತ್ತು ಇಲಾಖೆಯಿಂದ ಕೊಡಬಹುದಿತ್ತು ಆದರೆ ಯೋಜನೆಯ ಬಗ್ಗೆ ಜನಕ್ಕೆ ಗೊತ್ತಾಗಲಿ ಅಂತ ಫಲಾನುಭವಿಗಳನ್ನು ಒಂದು ಕಡೆ ಸೇರಿಸಿ ಕೊಡಲಾಗುತ್ತಿದೆ ಇವತ್ತು ೨೦ ಫಲಾನುಭವಿಗಳು ಮುಂದೆ ೨೪೦ ಫಲಾನುಭವಿಗಳು ಅರ್ಜಿ ಹಾಕುವಂತೆ ಮಾಹಿತಿ ಕೊಡಿ ಎಂದರು.

ರಾಜ್ಯ ಸರ್ಕಾರ ಮಹಿಳೆಯರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಒಬ್ಬ ಮಹಿಳೆಯಿಂದ ಒಂದು ಯೋಜನೆ ಯಶಸ್ವಿಯಾದರೆ. ಮತ್ತಷ್ಟು ಮಹಿಳೆಯರಿಗೆ ಸ್ಪೂರ್ತಿಯಾಗುತ್ತದೆ. ಅ ನಿಟ್ಟಿನಲ್ಲಿ ಸದುಪಯೋಗ ಮಾಡಿಕೊಳ್ಳಬೇಕು ಮುಂದೆ ಸೌಲಭ್ಯಗಳಿಗಾಗಿ ಅರ್ಜಿ ಹಾಕಿದ ಎಲ್ಲಾ ಅರ್ಹ ಫಲಾನುಭವಿಗಳಿಗೆ ಸೌಲಭ್ಯಗಳನ್ನು ಒದಗಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಎಲ್ ಅನಿಲ್ ಕುಮಾರ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ವೈ ಶಿವಕುಮಾರ್, ಕೋಮುಲ್ ನಿರ್ದೇಶಕ ಚಂಜಿಮಲೆ ರಮೇಶ್, ದರಕಾಸ್ತು ಸಮಿತಿ ಸದಸ್ಯ ಖಾದ್ರಿಪುರ ಬಾಬು, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ನಿರ್ದೇಶಕರಾದ ಸುಜಾತ, ಇಲಾಖೆಯ ಕ್ಷೇತ್ರ ಅಧಿಕಾರಿ ಅಂಬರೀಶ್, ಕುಮಾರ್, ಕಾಂಗ್ರೆಸ್ ಮುಖಂಡರಾದ ವೀರೇಂದ್ರ ಪಾಟೀಲ್, ಕಿಲಾರಿಪೇಟೆ ಮಣಿ, ವೀರಾಂಜನೇಯ ನಗರ ಮಂಜುನಾಥ್, ಕಾಮನೂರು ಬಾಬು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande