
ಕೋಲಾರ,ಮಾ.೦೫:
ಆ್ಯಂಕರ್:
ಕೋಲಾರ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ಅಂತರರಾಷ್ಟ್ರೀಯ ರೋಟರಿ ಸಂಸ್ಥೆ ಮತ್ತು ಬೆಂಗಳೂರಿನ ವೈಟ್ಫೀಲ್ಡ್ನ ಆಸ್ಟರ್ ಆಸ್ಪತ್ರೆಯ ಸಹಭಾಗಿತ್ವದೊಂದಿಗೆ ಕೋಲಾರ ಜಿಲ್ಲೆಯಲ್ಲಿ ಮೂರ್ಛ ರೋಗವನ್ನು ಸಂಪೂರ್ಣವಾಗಿ ಗುಣಪಡಿಸುವ ಮೂಲಕ ಮೂರ್ಛರೋಗ ಮುಕ್ತ ಕೋಲಾರವನ್ನಾಗಿಸಲು ಶಿಬಿರಗಳನ್ನು ಆಯೋಜನೆ ಮಾಡಲಾಗಿದೆ ಎಂದು ರೋಟರಿ ಅಸಿಸ್ಟೆಂಟ್ ಗವರ್ನರ್ ಸಿ.ಎಂ.ಆರ್ ಶ್ರೀನಾಥ್ ತಿಳಿಸಿದರು.
ರೋಟರಿ ಸಂಸ್ಥೆ ವಿವಿಧ ಕ್ಷೇತ್ರಗಳಲ್ಲಿ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಅಂತರರಾಷ್ಟ್ರೀಯ ಸೇವಾ ಸಂಸ್ಥೆಯಾಗಿದ್ದು, ಈ ಹಿಂದೆ ಭಾರತವನ್ನು ಪೋಲಿಯೋ ಮುಕ್ತಗೊಳಿಸಲು ಸರ್ಕಾರದೊಂದಿಗೆ ಕೈಜೋಡಿಸಿ ಯಶಸ್ವಿಯಾಗಿರುತ್ತದೆ. ಅದೇ ರೀತಿಯಾಗಿ ಕೋಲಾರ ರೋಟರಿ ಸಂಸ್ಥೆಯು ಬೆಂಗಳೂರಿನ ಪ್ರತಿಷ್ಠಿತ ವೈಟ್ ಫೀಲ್ನ ಆಸ್ಟರ್ ಆಸ್ಪತ್ರೆಯ ಸಹಭಾಗಿತ್ವದಲ್ಲಿ ಪ್ರಸಿದ್ಧ ಮೂರ್ಛ ರೋಗ ಶಸ್ತ್ರ ಚಿಕಿತ್ಸಕ ಡಾ. ಸತೀಶ್ ರುದ್ರಪ್ಪ ರವರ ನೇತೃತ್ವದ ತಂಡದೊAದಿಗೆ ಕೋಲಾರ ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಂರ್ತನಿರ್ಮಿತ ವೀಡಿಯೋ ಇಇಜಿ ಯಂತ್ರಗಳನ್ನು ಹೊಂದಿರುವ ವಿಶಿಷ್ಟ ರೀತಿಯ ಮೊಬೈಲ್ ಮೂರ್ಛ ರೋಗ ಮುಕ್ತ ವ್ಯಾನ್ ಮೂಲಕ ರೋಗ ನಿರ್ಣಯ ಕುರಿತು ಜಾಗೃತಿ ಮೂಡಿಸಲು ರೋಗಿಗಳಿಗೆ ಗುಣಮಟ್ಟದ ಪರೀಕ್ಷೆ ಮತ್ತು ಚಿಕಿತ್ಸೆ ನೀಡಲು ಮಾಸಿಕ ಉಚಿತ ಆರೋಗ್ಯ ಶಿಬಿರಗಳನ್ನು ನಡೆಸಲು ಯೋಜಿಸಿದೆ. ಶಿಬಿರಗಳ ಜೊತೆಗೆ ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆ ಅವಶ್ಯವಿದ್ದಲ್ಲಿ ಹಾಗೂ ಃPಐ ಹೊಂದಿರುವ ರೋಗಿಗಳಿಗೆ ವೈಟ್ಫೀಲ್ಡ್ನ ಆಸ್ಟರ್ ಆಸ್ಪತ್ರೆಯಲ್ಲಿ ಉಚಿತವಾಗಿ ಎಂ.ಆರ್.ಐ & ಪಿ.ಇ.ಟಿ ಸ್ಕಾö್ಯನ್ಗಳಿಂದ ಪರೀಕ್ಷಿಸಲಾಗುತ್ತದೆ ಹಾಗೂ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಈ ರೀತಿಯಾಗಿ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಜಿಲ್ಲೆಯಾದ್ಯಂತ ಹಂತ ಹಂತವಾಗಿ ಎಲ್ಲಾ ಪ್ರಕ್ರಿಯೆಗಳೊಂದಿಗೆ ಅನುಸರಿಸಿ ಕೋಲಾರ ಜಿಲ್ಲೆಯನ್ನು ಮೂರ್ಛರೋಗ ಮುಕ್ತ ಜಿಲ್ಲೆಯಾಗಿಸಲು ಉದ್ದೇಶಿಸಿದ್ದೇವೆ.
ಈ ಕಾರ್ಯಕ್ರಮವನ್ನು ರಾಜ್ಯದಲ್ಲಿ ಮೊದಲ ಬಾರಿಗೆ ಪ್ರಾಯೋಗಿಕವಾಗಿ ಕೋಲಾರ ಜಿಲ್ಲೆಯಲ್ಲಿ ನಡೆಸಲು ಉದ್ದೇಶಿಸಿರುವುದರಿಂದ ಮಾನ್ಯ ಜಿಲ್ಲಾಧಿಕಾರಿಗಳು ಕೋಲಾರ ಜಿಲ್ಲೆ ರವರ ಅನುಮತಿಯೊಂದಿಗೆ ಜಿಲ್ಲಾ ಆರೋಗ್ಯ ಇಲಾಖೆಯ ಮಾರ್ಗಸೂಚಿಯಂತೆ ಕೋಲಾರ ರೋಟರಿ ಸಂಸ್ಥೆಯ ಸಹಭಾಗಿತ್ವದೊಂದಿಗೆ ಬೆಂಗಳೂರಿನ ಆಸ್ಟರ್ ಆಸ್ಪತ್ರೆಯ ನುರಿತ ತಜ್ಞರ ತಂಡದ ವೈದ್ಯರೊಂದಿಗೆ ಪ್ರಾರಂಭಿಕವಾಗಿ ಕೋಲಾರ ತಾಲ್ಲೂಕು ವೇಮಗಲ್ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಾ|| ೭-೩-೨೦೨೬ ರ ಶನಿವಾರ ಬೆಳಿಗ್ಗೆ ೯.೦೦ ಗಂಟೆ ಸಮಯಕ್ಕೆ ಮಾನ್ಯ ಜಿಲ್ಲಾಧಿಕಾರಿಗಳು ಶಿಬಿರ ಉದ್ಘಾಟನೆ ಮಾಡಲಿದ್ದಾರೆ.
ಶಿಬಿರದಲ್ಲಿ ವೇಮಗಲ್, ನರಸಾಪುರ, ಮದ್ದೇರಿ, ಕ್ಯಾಲನೂರು ಹಾಗೂ ಅಮ್ಮನಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮೂರ್ಛ ರೋಗಿಗಳನ್ನು ತಪಾಸಣೆಗೊಳಪಡಿಸಿ ಚಿಕಿತ್ಸೆ ನೀಡುವ ಶಿಬಿರ ಕಾರ್ಯಕ್ರಮ ಏರ್ಪಾಡಾಗಿರುತ್ತದೆ. ಆದ್ದರಿಂದ ಈ ವ್ಯಾಪ್ತಿಗೆ ಬರುವ ಹಾಗೂ ನೆರೆಯ ಹೋಬಳಿ ಹಾಗೂ ತಾಲ್ಲೂಕು ಕೇಂದ್ರಗಳಿAದ ರೋಗಿಗಳು ಭಾಗವಹಿಸಿ ಪ್ರಯೋಜನ ಪಡೆಯುವ ಮೂಲಕ ರೋಗ ಮುಕ್ತರಾಗಲು ಭಾಗವಹಿಸಬೇಕಾಗಿ ಈ ಮೂಲಕ ಕೋಲಾರ ರೋಟರಿ ಅಸಿಸ್ಟೆಂಟ್ ಗವರ್ನರ್ ಆದ ಸಿ.ಎಂ.ಆರ್ ಶ್ರೀನಾಥ್ ರವರು ಮನವಿ ಮಾಡಿರುತ್ತಾರೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್